ಹನಿಗವನ ಗಂಡು ವರದರಾಜನ್ ಟಿ ಆರ್ August 11, 2023May 25, 2023 ಗಂಡು ಬೇಕು ಗಂಡು ಬೇಕು ಎಂದು ಹೆತ್ತರು ಯಥಾಶಕ್ತಿ. ಈಗ ಅವರೆಲ್ಲರಿಗೂ ಮದುವೆಗೆ ಗಂಡು ಬೇಕು. ***** Read More
ಹನಿಗವನ ಊಸರವಳ್ಳಿ ವರದರಾಜನ್ ಟಿ ಆರ್ July 28, 2023May 25, 2023 ಬಣ್ಣ ಬದಲಿಸುವ ಸಮಯ ಸಾಧಕ ನಾನಲ್ಲ ಎಂದು ನೊಂದು ನುಡಿಯಿತು ಊಸರವಳ್ಳಿ. ಜೊತೆಗೆ ಹೀಗೊಂದು ಉಪದೇಶ ಕೊಟ್ಟಿತು ನನ್ನಂತೆ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳಿ. ***** Read More
ಕವಿತೆ ನಗೆ ಹನಿಗವನ ವರದರಾಜನ್ ಟಿ ಆರ್ July 14, 2023December 29, 2022 ನಗುವ ಚಿಮ್ಮಿಸಿ ನೋವ ಮರೆಸಿ ಮೊಗವರಳಿಸಿತು ನಗೆ ಹನಿ. ನೂರು ಮಾತನು ಮೂರು ಮಾತಲೇ ಹೇಳಿ ಮುಗಿಸಿತು ಹನಿಗವನ. ನಗುವ ತರಿಸಿತು ಮನವ ಮುಟ್ಟಿತು ಬುದ್ಧಿ ಹೇಳಿತು ನಗೆ ಹನಿಗವನ. ***** Read More
ಕವಿತೆ ಮಿಂಚು-ಮಳೆ ವರದರಾಜನ್ ಟಿ ಆರ್ June 30, 2023December 29, 2022 ಹೆಂಡದಂಗಡಿಯವನ ಹೆಂಡತಿಯ ಕಣ್ಗಳಲಿ ವಜ್ರದೊಡವೆಗಳು ತಂದ ಆನಂದದ ಮಿಂಚು ಗುಡುಗಿ ಗಡಂಗಿನಲಿ ಕಣ್ಣೀರ ಮಳೆಗರೆಯಿತು ಸಾವಿರಾರು ಕುಡುಕರ ಮಡದಿ ಮಕ್ಕಳ ಕಳಾಹೀನ ಕಣ್ಗಳಲಿ ***** Read More