ಶರಣಾಗತಿ

"ನಾನು ಒಂದು ಬಿಂದುವಾಗಿ ಬಾಳಿ ಸಾಕಾಗಿದೆ" ಎಂದಿತು ಬೇಸತ್ತ ನೀರಿನ ಬಿಂದು. "ನನಗೆ ಪುಟ್ಟ ಬೀಜವಾಗಿ ಬದುಕಲು ದುಸ್ತರವಾಗಿದೆ" ಎಂದಿತು ಬೀಜ. "ನಿನ್ನದು ಅಂತಹುದೇನು ಮಹದಾಕಾಂಕ್ಷೆ? ಎಂದು ಕೇಳಿತು ಬೀಜ. "ನಾನು ಬಿಂದುವಿನಿಂದ ಸಿಂಧುವಾಗಬೇಕು"...

ದೈವವನ್ನು ಕಾಣುವುದು ಹೇಗೆ?

ಒಮ್ಮೆ ಸಂಸಾರದಲ್ಲಿ ಬೇಸತ್ತ ಗೃಹಸ್ಥ, ಒಬ್ಬ ಸಾಧು ಹತ್ತಿರ ಬಂದು ಕೇಳಿದ- "ದೈವ ನಮಗೇಕೆ ಕಾಣುವುದಿಲ್ಲ?" ಎಂದು. ಸಾಧು-ಹೇಳಿದ "ನಿನಗೆ ಆಕಾಶದಲ್ಲಿ ತೇಲುವ ಕರಿಮೋಡದಲ್ಲಿ ನೀರು ಕಾಣುತ್ತದಯೇ?" ಎಂದು. "ಇಲ್ಲಾ" ಎಂದ ಗೃಹಸ್ಥ, "ನಿನಗೆ...

ಯಾವುದು ಮೊದಲು?

ಇಬ್ಬರು ಸಾಧಕರಲ್ಲಿ ವಾದ ಉಂಟಾಯಿತು. "ಪರಮಾತ್ಮ ಮೊದಲಾ? ಪ್ರಾರ್ಥನೆ ಮೊದಲಾ?" ಎಂದು. ಮೊದಲ ಸಾಧಕ ಹೇಳಿದ- "ಪ್ರಾರ್ಥನೆ ಮೊದಲು" ಎಂದು. ಎರಡನೆಯ ಸಾಧಕ ಹೇಳಿದ - "ಪರಮಾತ್ಮನಿಲ್ಲದೆ ಪ್ರಾರ್ಥನೆ ಎಲ್ಲಿಂದ ಬಂತು?" ಎಂದ. ಮೊದಲ...

ಸಾಗರ ಮತ್ತು ಬೆಟ್ಟ

ಅಗಾಧವಾಗಿ ಶೋಭಿಸುತ್ತಿದ್ದ ಸಾಗರವನ್ನು ನೋಡಿ ಬೆಟ್ಟ ಕೇಳಿತು "ನಿನ್ನ ಮುದ್ದಾದ ಪುಟ್ಟ ಹೆಸರೇನು?" ಎಂದು. "ಅಲೆ" ಎಂದಿತು ಸಾಗರ. ಅಲೆಯನ್ನು ನೋಡಿ ಬೆಟ್ಟ ಮತ್ತೆ ಕೇಳಿತು "ನಿನ್ನ ಪೂರ್ಣ ಹೆಸರೇನು?"ಎಂದು. ಅಲೆ ಹೇಳಿತು- "ನನ್ನ...

ಪ್ರೀತಿಯ ಅಮ್ಮ

ದುಡಿದು ದುಡಿದು ಸಾಕಾಗಿದೆ ಎಲ್ಲಿ ವಿಶ್ರಮಿಸಲಿ? ನನಗೂ ಅಮ್ಮ ಇದ್ದರೆ ಎಷ್ಟು ಚೆನ್ನಾಗಿತ್ತು ಎಂದು ಕೊಂಡ ಸೂರ್‍ಯ. ಇದನ್ನು ಕೇಳಿಸಿಕೊಂಡ ಬೆಟ್ಟ ಹೇಳಿತು- "ನಾನು ನಿನಗೆ ಅಮ್ಮನಾಗುತ್ತೇನೆ. ಬೆಳಿಗ್ಗೆ ನನ್ನ ಮಡಿಲಲ್ಲಿ ಹುಟ್ಟಿ ಜಗದಲ್ಲಿ...

ಎರಡು ಹಕ್ಕಿಗಳ ವಾದ

ಒಂದು ಸುಂದರ ಸರೋವರ. ಅದರ ಸನಿಹದಲ್ಲಿ ಹಸಿರು ಸೊಂಪಿನಿಂದ ಕಂಗೊಳಿಸುವ ಒಂದು ದೊಡ್ಡ ಮರ. ಅದರಲ್ಲಿ ಇದ್ದ ಎರಡು ಹಕ್ಕಿಗಳಲ್ಲಿ ವಿವಾದ ಬಂದಿತು. ಒಂದು ಹಕ್ಕಿ ಹೇಳಿತು- "ಪ್ರಾರ್ಥನೆಯೇ ಶ್ರೇಷ್ಠವಾದುದು" ಎಂದು. ಇನ್ನೊಂದು ಹಕ್ಕಿ...

ಮೊಗ್ಗಿನ ಹೃದಯ

ಒಂದು ಮೊಗ್ಗು ಹೇಳಿತು "ನನ್ನ ಮುಚ್ಚಿ ಕೊಂಡ ದಳಗಳ ಒಳಗೆ ನನ್ನ ಹೃದಯವಡಗಿದೆ. ನಾನು ಯಾರಿಗೂ ಇದನ್ನು ಅರ್ಪಿಸುವುದಿಲ್ಲಾ" ಎಂದು. ಇದನ್ನು ಕೇಳಿಸಿಕೊಂಡು, ದಳ ಉದರಿ ಬಾಡಿ ಬೀಳುತ್ತಿದ್ದ ಒಂದು ಹೂವು ಹೇಳಿತು- "ಪ್ರೀತಿ...

ಒಂಟಿ ಪಯಣ

ಮುಂಜಾನೆ ಅರುಣೋದಯಕ್ಕೆ ಮುಂಚೆ ಸಾವಿರಾರು ಇಬ್ಬನಿಗಳು ಹುಲ್ಲ ಮೇಲೆ, ಹೂವಿನ ಮೇಲೆ, ಗಿಡದ ಎಲೆಯ ಮೇಲೆ, ಬಳ್ಳಿಯ ಮೇಲೆ ತೂಗಿ ಬಾಗಿ ಆಟವಾಡುತ್ತಾ ಸಂತಸವಾಗಿದ್ದವು. ನಮ್ಮ ಬಾಳದೆಷ್ಟು ಸುಂದರ, ನಾವು ವಜ್ರದಂತೆ ಹೊಳೆಯಬಲ್ಲೆವು. ನಮ್ಮ...

ಮೂರು ಮಳೆಯ ಹನಿಗಳು

ಒಂದು ಮಳೆಯ ಹನಿ ಹೇಳಿತು - "ನನ್ನ ಬಾಳು ಸಾರ್ಥಕ. ನಾನು ಹೂವಿನ ದಳದ ಮೇಲೆ ಬಿದ್ದು ಅದರ ಬಾಯಾರಿಕೆ ತೀರಿಸುವೆ" ಎರಡನೆಯ ಹನಿ ಹೇಳಿತು- "ನಾನು ಎಲೆಯ ಮೇಲೆ ಮಲಗಿ ಆನಂದ ಪಡುವೆ."...

ಆಮೆ ಮತ್ತು ಮನುಷ್ಯ

ಸಮುದ್ರ ದಡದ ಮೇಲೆ ಒಂದು ಆಮೆ ಮಲಗಿತ್ತು. ಅವಶ್ಯಕತೆ ಇಲ್ಲೆಂದು ತನ್ನ ಕೈಕಾಲು, ತಲೆಯನ್ನು ಚಿಪ್ಪಿನೊಳೊಗೆ ಎಳೆದುಕೊಂಡು ಕಲ್ಲಂತೆ ಮರಳ ಮೇಲೆ ಕುಳಿತಿತ್ತು. ದಡದ ಮೇಲೆ ಓಡಾಡುತ್ತಿದ್ದ ಒಬ್ಬ ಮನುಷ್ಯ ಕಲ್ಲು ಬಂಡೆಯಂತೆ ಮಲಗಿದ್ದ...