ಒಂದು ಸಣ್ಣ ತಪ್ಪು

ಹೌದೇ ಹೌದು ಖಂಡಿತಾ ಹೌದು ಮಹರಾಯ್ತಿ ಹೌದು ಹೌದು ಹೌದು ದೇವರಾಣೆ ಮಕ್ಕಳನ್ನು ಸೇರಿದಂತೆ ಎಲ್ಲವೂ ನನ್ನಿಂದಲೇ ಆದದ್ದು, ನಾನೇ ಕಾರಣ, ನಾನೇ ಹೊಣೆ ನಾನೊಬ್ಬ ದೊಡ್ಡ ಬೆಪ್ಪು. ಆದರೆ ಒಂದನ್ನಾದರೂ ಒಪ್ಪಿಕೊ ಪುಣ್ಯಾತ್ಗಿತ್ತಿ...

ಹದಿಹರೆಯದವನ ಪ್ರಲಾಪ

ಹಿಂದೆ ಬೇಡರು ಬಿಲ್ಲು ಬಾಣ ಹಿಡಿದು ಪಕ್ಷಿಗಳನ್ನು ಕೊಲ್ಲಲು ಹೋಗುತ್ತಿದ್ದರು ಕಾಡಿಗೆ ಈಗ ಬಾಣ ಬಿಡದೆ ಕೊಲ್ಲುತ್ತಿದೆ, ಹದಿಹರೆಯದ ಹುಡುಗರನ್ನು ಚೆಂದದ ಹೆಣ್ಣುಗಳ ಬಿಲ್ಲು ಹುಬ್ಬಿನ ಕೆಳಗೆ ಮಿಂಚುವ ಕಣ್ಣುಗಳಿಗೆ ಹಚ್ಚಿದ ಕಪ್ಪು ಕಾಡಿಗೆ...

ನಮ್ಮೂರ ಹುಡುಗಿಯರು

ಎಲೆ ಮರೆಯ ಕಾಯಿಗಳನ್ನು ಹಣ್ಣಾಗುವ ಮೊದಲೇ ಯಾರ್ಯಾರೋ ಕಿತ್ತುಬಿಟ್ಟರು. ನಮ್ಮೂರ ಚೆಂದದ ಹೆಣ್ಣುಗಳನ್ನು ಇನ್ನೂ ಕಣ್ಣು ಬಿಡುವಷ್ಟರಲ್ಲೆ ಯಾರ್ಯಾರೋ ಮದುವೆಯಾಗಿಬಿಟ್ಟರು. *****

ನನ್ನ ಸ್ನೇಹಿತ

ಮೊದಲು ಅವನು ಅದನ್ನು ಕುಡಿದ ಈಗ ಅದು ಅವನನ್ನು ತಿನ್ನುತ್ತಿದೆ ಮಂಜಾವಿಂದ ಸಂಜೆಯವರೆಗೆ ಸಂಜೆಯಿಂದ ಮುಂಜಾವಿನವರೆಗೆ ಸದಾ ಕುಡಿಯುತ್ತಲೇ ಇದ್ದ ಅರ್ಥವಿಲ್ಲದ ಇದನ್ನು ಬಿಡಿಸಲು ಮಾಡಿದ ಹರಸಾಹಸವೆಲ್ಲ ವ್ಯರ್ಥ ಯಾವಾಗಲೋ ಒಮ್ಮೊಮ್ಮೆ ಮನುಷ್ಯ ಬಯಸಬಹುದು...

ನಮ್ಮ ಕೇರಿಯ ಸುಬ್ಬ

ಪೇಪರ್‍ ಓದಿದವನೇ ಬೇನಾಮಿಗಳ ನಾಯಕ ನಮ್ಮ ಕೇರಿಯ ಸುಬ್ಬ ರಸ್ತೆಗಿಳಿದೇ ಬಿಟ್ಟ ಹಿಡಿದು ಕೈಯಲ್ಲೊಂದು ಸುನಾಮಿ ಡಬ್ಬ ಊರೆಲ್ಲ ದಿನವಿಡೀ ಮೆರವಣಿಗೆ ಹೋದ ಧರಿಸಿ ಬಿಳೀ ಖಾದಿ ಪೈಜಾಮ ಜುಬ್ಬ ರಾತ್ರಿ ಅವನ ಪಟಾಲಂ...

ಚಿಂತಕ

ಎಳತರಲ್ಲವನ ವಿಚಾರ ಶಕ್ತಿಯನ್ನು ಕಂಡವರೆಲ್ಲ ಅಂದುಕೊಂಡದ್ದು ಅವನೊಬ್ಬ ಚಿಂತಕನಾಗುತ್ತಾನೆ ಅಂತ ಆದರೆ ಬೆಳೆದಂತೆ ಅದು ಹಳಿತಪ್ಪಿ ಹಾಳಾಗಿ ಅವನೊಬ್ಬ ನಕ್ಸಲೈಟ್ ನರಹಂತಕನಾದದ್ದೊಂದು ಘೋರ ದುರಂತ. *****

ನಕ್ಸಲ್ಲೈಟು

ತಮ್ಮೂರಿಗೆ ಎಲೆಕ್ಟ್ರಿಕ್ ಲೈಟ್ಸ್ ಬರುವಂತೆ ಮಾಡಬೇಕೆಂದು ಆಗುಂಬೆ ಸಮೀಪದೊಂಟಿ ಮನೆಯ ಜಮೀನ್ದಾರರು ಒತ್ತಾಯಪಡಿಸುತ್ತಲೆ ಇದ್ದರು ಲೈಟ್ ಲೈಟ್ ಅಂದಾಗಲೆಲ್ಲಾ ಎಂ.ಎಲ್.ಎ ವೆಯಿಟ್, ವೆಯಿಟ್ ಎನ್ನುತ್ತಲೇ ಇದ್ದರು. ಅಂತೂ ಕೊನೆಗೊಂದು ದಿನ ಕ್ವೈಟಾಗಿ ಬಂದಿದ್ದು ಎಲೆಕ್ಟ್ರಿಕ್...