ಕನ್ನಡ ಕೀರುತಿ

ದಿಕ್ ದಿಕ್ಕಿಗೂ ಹಬ್ಬಲಿ ಕನ್ನಡದ ಕೀರುತಿ ಕನ್ನಡ ಭುವನೇಶ್ವರಿಗೆ ಬೆಳಗಲೆಂದು ಆರತಿ ಸಹ್ಯಾದ್ರಿಯ ಕೋಗಿಲೆಯು ಮೈದುಂಬಿ ಹಾಡಿರೆ ಬೇಲೂರಿನ ಬಾಲೆಯರು ಮೈಮರೆತು ಕುಣಿದಿರೆ ಬೆಳ್ಗೊಳದ ಗೊಮ್ಮಟನು ವಿಸ್ಮಯದಿ ನಿಂತಿರೆ ಕನ್ನಡಿಗನ ಕೊರಳಲ್ಲಿ ಈ ಹಾಡು...
ತಾಯಿ-ಬಂಜೆ

ತಾಯಿ-ಬಂಜೆ

"ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ ತುಂಬಿತ್ತು. ಆ ನೋವಿನಲ್ಲಿ ಮತ್ತಾವ ಜ್ಞಾನವೂ...

ಭಾವಗೀತೆಯ ಮೆರಗು

ಭಾವಗೀತೆಯ ಮೆರಗು ಹಸಿರ ನೇಸರದಾ ಸೆರಗು ಮನ ಮನ್ವಂತರವೆ ನೀನು ನೀನು ನೀನಾಗಿರಲೇನು ಚೆನ್ನ ತೆರೆಯೆ ಬಾಗಿಲ ಪೊರೆಯೆ ತಾಯೆ ಕನ್ನಡಾಂಬೆಯೆ ನಿನಗೆ ನನ್ನ ನಮನ|| ಸುಮಬಾಲೆ ಬಾಳೆ ಹೊಂಬಾಳೆ ಕಾಯೆ ನಮಗೆ ಚೇತನವೇ...

ದಾಸಿಯ ಎರಡನೆ ಹಾಡು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಹಾಸಿಗೆಯ ಸುಖ ಹೀರಿ ಹುಳುಹಾಗೆ ಸೊರಗಿದೆ, ಅವನ ಸೊಕ್ಕಿದ ಸರಳು, ಅದರ ದಪ್ಪನೆ ಕುಡಿ ಹುಳು ಹಾಗೆ ತೆವಳಿದೆ, ಆವೇಶ ತೀರಿ ಹುಳು ಹಾಗೆ ಕುರುಡಿದೆ. *****
ಕಾಡುತಾವ ನೆನಪುಗಳು – ೨೫

ಕಾಡುತಾವ ನೆನಪುಗಳು – ೨೫

ಮಾರನೆಯ ದಿನ ಔಟ್‌ಪೇಶೆಂಟ್ ವಿಭಾಗದಲ್ಲಿ ರೋಗಿಗಳಿಂದ ನನಗೆ ಫೋನ್ ಬಂದಿತ್ತು. ನನಗೆ 'ಆಕೆ'ಯದೇ ಫೋನ್ ಇರಬೇಕು ಎನ್ನಿಸಿತ್ತು. ರೆಸೆಪ್ಷನ್ ಕೌಂಟರ್‌ಗೆ ಬಂದು ಫೋನನ್ನು ಕೈಗೆತ್ತಿಕೊಂಡಿದ್ದೆ. "ಹಲೋ..." “ನಾನು ಮೇಡಂ... ಬೌರಿಂಗ್ ಆಸ್ಪತ್ರೆಯಿಂದ ಮಾತಾಡ್ತಾ ಇದ್ದೀನಿ..."...

ಹೊಸೂರು

ಮನೆಮನೆಗೆ ಮಲ್ಲಿಗೆಯ ಬಳ್ಳಿ ಕೋನರಿಹವಿಲ್ಲಿ ಮಧುಮಾಸವಿಲ್ಲಿರುವ ವಧುವೆನಲು ಚಿರನವ- ಸ್ಫಾಲನದಿ ಎಸೆಯುತಿದೆ ಕೆಂದಳಿರು, ಸುಚಿರನಯ- ನೋನ್ಮೀಲನದ ಮುದದಿ ಕಮ್ಮಲರ ಜೊಂಪಿಲ್ಲಿ ದೂರ ಮುಗಿಲ ಕಮಾನು ನೆಲವ ಮುತ್ತಿಡುವಲ್ಲಿ ಮಾಂದಳಿರು ಕಟ್ಟಿಹುದು ತೋರಣವ. ಬರುವನವ,-. ಸುತ್ತಲಿಹ...

ಅಪ್ಪನ ಮಠ ನೋಡಿದೆ

ಹಡೆದಪ್ಪ ಪಡೆದಪ್ಪ ಪಟ್ಟದ ಮಠದಪ್ಪ ಅಪ್ಪನಽ ಮಠ ನೋಡಿದೆ ಮಠದ ಮ್ಯಾಲಿನ ಮಠವು ಘಟದ ಮ್ಯಾಲಿನ ಘಟವು ದಿಟಪುಟ ಮಠ ನೋಡಿದೆ ಹೊಟ್ಟಿ ತುಂಬಾ ಉಂಡ ಗಟ್ಟಿ ಅಮೃತ ಲಿಂಗ ಮಠಸಾಮಿ ನಾ ನೋಡಿದೆ...
ಹೆಣ್ಣಿನ ಭಿನ್ನತೆ – ತಾಯ್ತನ

ಹೆಣ್ಣಿನ ಭಿನ್ನತೆ – ತಾಯ್ತನ

ಅದು ರವಿವಾರ. ಹಾಗಾಗಿ ಸಂತೆ ದಿನ. ಸಂತೆಯಲ್ಲಿ ತರಕಾರಿ ಕೊಳ್ಳುವ ಸಲುವಾಗಿ ಹೊರಟಾಗ ತರಕಾರಿ ಮಂಡಿಯ ಹೊರ ಪ್ರವೇಶದ್ವಾರದಲ್ಲೇ ಆ ಇಬ್ಬರು ದಂಪತಿಗಳು ಹುಣಸೇ ಹಣ್ಣು ಇಟ್ಟು ಮಾರುತ್ತಿದ್ದರು. ತಾಯಿಯ ತೊಡೆಯೇರಿದ ಕಂದನನ್ನು ಸಂಭಾಳಿಸುತ್ತಾ...

ನಂಜೀಗೆ

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು! ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು! ಮಾಗಿ ಕುಗ್ತು! ಬೇಸ್ಗೆ ನುಗ್ತು! ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು! ನಂಗೂ ನಿಂಗೂ ಯಂಗ್ ಅಗಲೋಯ್ತು ನಂಜು! ೧ ಸೀರಂಗ್ಪಟ್ಣದ್ ತಾವ್...

ಇರವು-ಅರಿವು

ಇರವಿಗೂ ಅರಿದೇನು? ಇರವೆ ಅರಿದರಿದು; ಮೇ- ಣಿದುವೆ ಅದ್ಭುತರಮ್ಯ ಶ್ರೀವಿಭೂತಿ! ಕಂಡುದನೆ ಕೊನೆಯೆಂದು ಕಣ್ಣು ಬಣ್ಣಿಸುತಿತ್ತು. ಅರಿವು ಒಡನುಡಿಯಿತ್ತು ‘ನೇತಿ ನೇತಿ’. ಒಂದು ಕಿಡಿಕಣದಲ್ಲು ಮಿಡಿದು ಮಿಳ್ಳಿಸುತಿರುವ ಇರವಿನಾಲದ ಬೀಜವದಕು ಕಿರಿದು. ಹಬ್ಬಿರುವ ಹೂಬಳ್ಳಿ...