ಹನಿಗವನ ಕತ್ತಲೆ ಬೆಳಕು ಮಂಜುನಾಥ ವಿ ಎಂ May 19, 2014June 18, 2015 ಮಿಣುಕು ಹುಳುಗಳನ್ನು ಹುರಿದು ತಿನ್ನುವ ಇವಳ ಕಟು ಸ್ವಭಾವವೇ, ಅಲ್ಲಿ ಮೂಲೆಯಲ್ಲಿ ಕವಡೆಯಾಡುತ್ತಿರುವವನ ಬೆಳಕು. ***** ಪುಸ್ತಕ: ಲೆವೆಲ್ ಕ್ರಾಸಿಂಗ್ Read More
ಹನಿಗವನ ನಿಜ ವೃಷಭೇಂದ್ರಾಚಾರ್ ಅರ್ಕಸಾಲಿ March 28, 2014June 6, 2015 ಪ್ರಜೆಗಳಿಗೆ ಹವಾಹೊಡೆಯುವವನು ದಿನಕ್ಕೊಂದು ಮಹಡಿ ಕಟ್ಟಿಸುತ್ತಿದ್ದಾನೆ ಸೈಕಲ್ ಗೆ ಹವಾ ಹೊಡೆಯುವವನು ಮಾತ್ರ ದಿನಕ್ಕೊಂದು ಹೊತ್ತು ಉಪವಾಸ ಇದ್ದಾನೆ ***** Read More
ಹನಿಗವನ ಯೋಜನೆ ವೃಷಭೇಂದ್ರಾಚಾರ್ ಅರ್ಕಸಾಲಿ March 21, 2014June 6, 2015 ನನ್ನ ದೇಶದ ಮಂಚದ ಮೇಲಿನ ಅಂದವಾದ ದುಪ್ಪಟಿ ತೆಗೆದು ನೋಡಿದರೆ ಅಸ್ತವ್ಯಸ್ತವಾಗಿ ಎಲ್ಲೆಂದರಲ್ಲಿ ಹರಿದ ನುಲಿಗಳೇ ***** Read More
ಹನಿಗವನ ವೇಶ್ಯೆ ವೃಷಭೇಂದ್ರಾಚಾರ್ ಅರ್ಕಸಾಲಿ March 14, 2014June 6, 2015 ತಾನು ಶವವಾಗಿ ಯಾರಿಗೊ ಒಬ್ಬರಿಗೆ ವಶವಾಗಿ ತನುವು ಹುಣ್ಣಾಗಿ ಯಾರಿಗೊಬ್ಬರಿಗೆ ಹಣ್ಣಾಗಿ ಯಾವತ್ತೂ ಮರುಭೂಮಿಯಾಗಿ ಎಷ್ಟು ಮಂದಿಗೋ ಓಯಸಿಸ್ಸಾಗಿ ***** Read More
ಹನಿಗವನ ಸಾಮಗ್ರಿ ವೃಷಭೇಂದ್ರಾಚಾರ್ ಅರ್ಕಸಾಲಿ March 7, 2014June 6, 2015 ಬೆಳಗಿನ ಹೊತ್ತಿನಲ್ಲಿ ವಿಧಾನಸೌಧದ ಮುಂದೆ ಗುಡಿಸುವವರಿಗೆ ನಿನ್ನೆಯ ಘೋಷಣೆಗಳು ದೊರಕುತ್ತವೆ ಕುಪ್ಪೆಯನ್ನು ಪುಟ್ಟಿಗಳಲ್ಲಿ ತುಂಬುವಾಗ ಗಾಜು ಚೂರುಗಳಂತೆ ವಾಗ್ದಾನಗಳು ಚುಚ್ಚಿಕೊಳ್ಳುತ್ತವೆ ***** Read More
ಹನಿಗವನ ನಾಗರಿಕತೆ ವೃಷಭೇಂದ್ರಾಚಾರ್ ಅರ್ಕಸಾಲಿ February 28, 2014June 6, 2015 ಬಟ್ಟೆಯುಟ್ಟು ಬಜಾರಕ್ಕೆ ಹೋಯಿತು ಬಜಾರಕ್ಕೆ ಹೋಗಿ ಬಟ್ಟೆ ಬಿಚ್ಚಿತು ***** Read More
ಹನಿಗವನ ಮೂಡಲಲ್ಲಿ ವಿಕಸಿಸುವ ಪ್ರಪಂಚ ವೃಷಭೇಂದ್ರಾಚಾರ್ ಅರ್ಕಸಾಲಿ February 21, 2014June 6, 2015 ಪ್ರಪಂಚದೊಳಗಿನ ಕಷ್ಟಗಳನ್ನು ನೋಡಲಾರದೆ ಪ್ರತಿ ದಿನವೂ ಪಡುವಣ ಸಮುದ್ರದಲ್ಲಿ ಬಿದ್ದು ಹೋಗೋಣವೆಂದು ತೆರಳುತ್ತಾನೆ ಸೂರ್ಯ ಮತ್ತೇ ಮರುದಿನ ಹೊತ್ತಾರೆ ಪ್ರಪಂಚದೊಡನೆ ಸಂಬಂಧಗಳನ್ನು ಬಿಡಿಸಿಕೊಳ್ಳಲಾಗದೆ ಭವಿಷ್ಯತ್ತಿನ ಆಶೆಯೊಡನೆ ಮೂಡಲಲ್ಲಿ ಉದಯಿಸುತ್ತಾನೆ ***** Read More
ಹನಿಗವನ ನಿಧಿಗಳು ವೃಷಭೇಂದ್ರಾಚಾರ್ ಅರ್ಕಸಾಲಿ February 14, 2014June 6, 2015 ನನ್ನ ದೇಶದಲ್ಲಿ ಪ್ರಜಾರಾಜ್ಯ ಪ್ರತಿನಿಧಿಗಳು ಬೆಳ್ಳನೆ ಖದ್ಧರು ಬುರಖಾ ಹಾಕಿಕೊಂಡ ಕಪ್ಪು ಹಣಕ್ಕೆ ನಿಧಿಗಳು ***** Read More
ಹನಿಗವನ ಪರೆ ವೃಷಭೇಂದ್ರಾಚಾರ್ ಅರ್ಕಸಾಲಿ February 7, 2014June 6, 2015 ಎಮರ್ಜೆನ್ಸಿ ಸರ್ಪ ಸತ್ತು ಹೋಗಿದೆ ಎಂದುಕೊಳ್ಳಬೇಡ ಗೆಳೆಯಾ ಅದು ಕೇವಲ ಪರೆ ಕಳಚಿಕೊಂಡಿದೆ ಹುತ್ತದೊಳಕ್ಕೆ ಹೋಗಿದೆ ಎಚ್ಚರ ***** Read More
ಹನಿಗವನ ಬದುಕು ವೃಷಭೇಂದ್ರಾಚಾರ್ ಅರ್ಕಸಾಲಿ January 31, 2014June 6, 2015 ನಾನು ಸತ್ತು ಹೋಗುತ್ತೇನೆಂದಲ್ಲವೇ ನಿನ್ನ ಬಾಧೆ ಹುಚ್ಚಾ ಈ ವ್ಯವಸ್ಥೆಯಲ್ಲಿ ನಾವು ಬದುಕಿದ್ದು ಒಂಭತ್ತು ತಿಂಗಳೇ ***** Read More