ಹನಿಗವನ ಪರಿಣಾಮ ಪರಿಮಳ ರಾವ್ ಜಿ ಆರ್ August 31, 2016February 3, 2016 ನಗು ಆರೋಗ್ಯಕ್ಕೆ ಟಾನಿಕ್ ಹೊಟ್ಟೆ ಹುಣ್ಣಾಗುವಂತೆ ನಕ್ಕರೆ ಪ್ಯಾನಿಕ್ ನಗುವು ಪಕ್ಕದವರಿಗೆ ಕ್ರಾನಿಕ್ ಹೊಟ್ಟೆ ಹೋಳಾಗುವಂತೆ ನಕ್ಕರೆ ಬಾಳು ಟೈಟಾನಿಕ್! ***** Read More
ಹನಿಗವನ ಸಂಚು ಲತಾ ಗುತ್ತಿ August 30, 2016February 8, 2016 ಕಟುಕರನೂ ಕರಗಿಸುವ ಹೂ ನಗು, ಹಾಲು ಕೆನ್ನೆ ಪುಟ್ಟ ಹೆಜ್ಜೆಯ ಬೆಳದಿಂಗಳ ಮಗು: ನಕತ್ರದ ಮಿಂಚು, ಸಾಕ್ಷಾತ್ ದೇವರ ಸಂಚು. ***** Read More
ಹನಿಗವನ ಕಾಣಬೇಕಿಲ್ಲ ಪರಿಮಳ ರಾವ್ ಜಿ ಆರ್ August 24, 2016August 25, 2016 ಸರ್ಕಾರಿ ನೌಕರರು ಲೆಕ್ಕಚಾರ ಮಾಡಿ ಕೈ ಒಡ್ಡುವುದಿಲ್ಲ ಜೇಬು ಒಡ್ಡುತ್ತಾರೆ ಸಬೂಬು ಇಲ್ಲದೆ ಮಾಮೂಲಿ ಬಾಬು ಎನ್ನುತ್ತಾರೆ! ***** Read More
ಹನಿಗವನ ನಿದ್ದೆ ಲತಾ ಗುತ್ತಿ August 23, 2016August 23, 2016 ವರ್ಷಂ ಪ್ರತಿ ಮೆರೆದು ಮೆರೆದು ಸುಸ್ತಾದ ಚಂದ್ರ ಚುಕ್ಕೆಯರು ಮಳೆಗಾಲದಲ್ಲಿ ಮೋಡಿನ ಕರ್ಟನ್ ಎಳೆದು ಬೆಚ್ಚಗೆ ಮಲಗಿಬಿಡುತ್ತಾರೆ ಕುಂಭಕರ್ಣನಂತೆ ***** Read More
ಹನಿಗವನ ಹೆಣ್ಣು-ಗಂಡು ಪರಿಮಳ ರಾವ್ ಜಿ ಆರ್ August 17, 2016February 3, 2016 ನಗುವ ಹೆಣ್ಣು ಮನೆಯ ಹೊಸಿಲ ಕಣ್ಣು ಸಿಡುಕು ಗಂಡು ಮನೆಯ ಅಂಗಳದ ಕೆಸರು ಮಣ್ಣು! ***** Read More
ಹನಿಗವನ ಚಂದ್ರ ಲತಾ ಗುತ್ತಿ August 16, 2016February 8, 2016 ಎಂಟಾನೆಂಟು ದಿನಗಳವರೆಗೆ ಎಡಬಿಡದೆ ಕಿಟಕಿ ಒದ್ದು ಕಾಚು ಒಡೆದು ನನ್ನ ತಲೆದಿಂಬಿಗೆ ಇಂಬಾಗಿ ನನ್ನ ರಂಗೇರಿಸುವವ. ***** Read More
ಹನಿಗವನ ಆಶೆ ಪರಿಮಳ ರಾವ್ ಜಿ ಆರ್ August 10, 2016February 3, 2016 ಕೈ ಒಡ್ಡಿದರೆ ಕನಸು ನನಸಾಗಬೇಕು, ಕಾಲು ಓಡಿದರೆ ಮನಸು ಮುಟ್ಟಬೇಕು! ***** Read More
ಹನಿಗವನ ಸೂರ್ಯ ಲತಾ ಗುತ್ತಿ August 9, 2016February 8, 2016 ನನ್ನ ಸಂಘರ್ಷಣೆಯ ಭಾವನೆಗಳಿಗೆ ಹುಲ್ಲು ಹಾಕಿ ಗಹಗಹಿಸಿ ನಗುವವ. ***** Read More
ಹನಿಗವನ ರಾಶಿ ಪರಿಮಳ ರಾವ್ ಜಿ ಆರ್ August 3, 2016February 3, 2016 ಕೈ ರಾಶಿ ಅಂತ ಕೈ ಹಿಡಿದೆ, ಕೊರಳು ಕೊಂಕು ನೋಡದೆ ತಾಳೀ ಕಟ್ಟಿದೆ. ***** Read More
ಹನಿಗವನ ಮಳೆ ಲತಾ ಗುತ್ತಿ August 2, 2016February 8, 2016 ಮೋಡಿನ ಗರ್ಭಕ್ಕೆ ಸಿಡಿಲಿನ ಚೂರಿ ಇರಿದಿರಬೇಕು ಅದಕ್ಕೆಂದೇ ದಬ ದಬನೆ ನಿಸರ್ಗದ ನೆತ್ತರು ಬಿದ್ದು ಹಿಡಿತಕ್ಕೆ ಬರದೇ ಹರಿದೋಡುತ್ತಿದೆ. ***** Read More