ಮಾವ – ಅಳಿಯ

ಮಾನವ ಜನ್ಮ ದೊಡ್ಡದು ಸಾರಿದರು ಪುರಂದರ ದಾಸರು ಮಾವನ ಜನ್ಮ ದೊಡ್ಡದು ಅಂದರು ಅಳಿಯರಾಯರು ಮಗಳನಿತ್ತರು, ಮನೆಯತೆತ್ತರು ನಾ ಕೇಳೆ ಕೊಟ್ಟಾರು ಬಿಸಿ ನೆತ್ತರು, ಸೇರಿಸಿ ಅತ್ತರು! *****

ಕಾಯ್ದಿದ್ದೇನೆ

ಬೇಸಿಗೆಯ ಬಿಸಿಲಿನಂಥ ಅವಳ ನೆನಪಿನಲ್ಲಿ ಹೃದಯದ ತಂತುಗಳೆಲ್ಲಾ ಸುಟ್ಟೂ ಸುಟ್ಟೂ ಕ್ಷಣ ಕ್ಷಣಕೂ ಸಾಯುತಿವೆ ಆದರೂ ಅವಳು ಚಂದ್ರನ ಶೀತಲದಂತಾದರೆ ಎಂದು ಈಗಲೂ ಕಾಯ್ದಿದ್ದೇನೆ. *****