Home / ಕಥೆ / ಕಾದಂಬರಿ

ಕಾದಂಬರಿ

ಅಧ್ಯಾಯ ಹದಿನೇಳು ಆಂದಿನ ದಿನದ ಸಮಾರಾಧನೆಯನ್ನು ಹೊಗಳದವರಿಲ್ಲ. ಎಲ್ಲರೂ ಯಥೇಚ್ಛವಾಗಿ ಊಟಮಾಡಿ ತೃಪ್ತಿಯನ್ನು ಹೊಂದಿದ್ದಾರೆ. ತೃಪ್ತಿಯನ್ನು ಹೊಂದಿರುವುದು ಕೇವಲ ಮಾನವಗಣ ಮಾತ್ರವಲ್ಲ. ರಾತ್ರಿಂಚರರಾಗಿ ಅಲ್ಲಿಗೆ ಬರಬಹುದಾದ ವನ್ಯಮೃಗಗಳಿಗೂ ತೃಪ್ತಿ...

ನಾಡಿಗೆ ನಾಡೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂಥ ಕೆಲಸ ಮಾಡಿದ ಸಂಗಪ್ಪ ದಿನ ಬೆಳಗಾಗುವುದರೊಳಗಾಗಿ ಸುಪ್ರಸಿದ್ಧನಾಗಿದ್ದ. ಅವನ ಈ ಊರೂ ಅಷ್ಟೆ, “ಸ್ವಾಮಿ, ಸಂಗಪ್ಪನೇನೋ ಸುಪ್ರಸಿದ್ಧನೋ ಕುಪ್ರಸಿದ್ದನೋ ಆದ; ಅದು ಪತ್ರಿಕೇಲೂ ಬಂತು; ಆದರೆ ಹರಿಜನ ಪ...

ಅಧ್ಯಾಯ ಹದಿನಾರು ಆಚಾರ್ಯರೂ, ರನ್ನಳೂ ಸುದ್ದಿಯನ್ನು ತಿಳಿದು ಗಾಬರಿಗಾಬರಿಯಾಗಿ ಆಶ್ರಮಕ್ಕೆ ಓಡಿಬಂದರು. ಆಚಾರ್ಯರು ನೋಡುತ್ತಾರೆ. ಯತಿ ಇನ್ನಾರೂ ಅಲ್ಲ. ಶಾಂಭವಾನಂದ. ಅಲ್ಲಿ ಆಚಾರ್ಯರನ್ನು ಕಂಡು ಅವರಿಗೂ ಆಶ್ಚರ್ಯವಾಯಿತು. “ಇದೇನು ಶಾಮಣ್ಣ ; ಇಲ್...

“ನೀವು ಹೀಗೆ ಮಾಡ್ಬಾರ್ದಿತ್ತು” ಎಂದರು ಶಾನುಭೋಗರು. “ಈ ಹುಡ್ಗುರಿಗೆಲ್ಲ ಹೆದ್ರಿಕಂಡಿರೋಕ್ಕಾಗ್ತೈತಾ ಯಾವಾಗ್ಲು? ನೀವೊಳ್ಳೆ ಚನ್ನಾಗೇಳ್ತೀರಿ ಬಿಡ್‌ಬಿಡ್ರಿ ಅತ್ತ” – ಸಂಗಪ್ಪ ಕಡ್ಡಿ ತುಂಡಾದಂತೆ ಹೇಳಿದ; “ಬಣ್ಣ ಒರೆಸ್ಕೊಳ್ಳೋಕೆ ಅದೆಷ್ಟು ಕಷ್ಟಬ...

ಅಧ್ಯಾಯ ಹದಿನೈದು ಆಚಾರ್ಯರು ಪರಿವಾರದೊಡನೆ ಶ್ರೀಶೈಲವನ್ನು ತಲಪಿದರು. ದಾರಿಯಲ್ಲಿ ಪರಿವಾರದವರಿಗೆ ಯಾರಿಗೂ ಕುಡಿದ ನೀರು ಅಲ್ಲಾಡಲಿಲ್ಲ; ತಲೆಯ ಕೂದಲು ಚುಳ್‌ ಎನ್ನಲಿಲ್ಲ. ಪರ್ವತದ ಬುಡದಲ್ಲಿ ರಾಜಾಧಿಕಾರಿಗಳು ಆಚಾರ್ಯ ಪರಿವಾರವನ್ನು ಎದುರುಗೊಂಡರು...

ಹೆಡ್‌ಮಾಸ್ಟರನ್ನೇನೋ ವರ್ಗ ಮಾಡಿಸಿದ್ದಾಯಿತು; ಆದರೆ ರಾಜೇಂದ್ರನ ಬಳಗವನ್ನು ಅವರಿಷ್ಟಪಟ್ಟರೆ ಎಲ್ಲಾದ್ರೂ ದೂರದೂರಲ್ಲಿ ಉದ್ಯೋಗ ಕೊಡ್ಸಿ ಸಾಗ್ ಹಾಕೋವರ್ಗೂ ತಯಾರು ಸಾವ್ಕಾರ್ ಸಂಗಪ್ಪ. ಆದ್ರೆ ಶಾನುಭೋಗರು ಎಚ್ಚರಿಕೆ ನೀಡಿದರು. “ಉದ್ಯೋಗ ಸಿಕ್ಕಿದರ...

ಅಧ್ಯಾಯ ಹದಿನಾಲ್ಕು ಒಂದು ಮಧ್ಯಾಹ್ನ ಗವಾಯ್‌ ಸಾಹೇಬರು ಆಚಾರ್ಯರ ದರ್ಶನಕ್ಕಾಗಿ ಬಂದರು. ಆಚಾರ್ಯರೂ ಅವರನ್ನು ಸಮಾದರದಿಂದ ಬರಮಾಡಿಕೊಂಡರು. ಆಚಾರ್ಯರಿಗೂ ಗವಾಯ್‌ಗಳಿಗೂ ಸ್ನೇಹವು ಚೆನ್ನಾಗಿ ಬೆಳೆಯಿತು. ಒಬ್ಬರನ್ನೊಬ್ಬರು ಗೌರವಿಸುವರು. ಆದರಿಸುನರು...

ಅರಳೀಮರಕ್ಕೆ ಬಿದ್ದ ಕೊಡಲಿ ಪೆಟ್ಟು ಪ್ರತಿಭಟನೆಗೆ ಬಿತ್ತೆಂದು ಸಂಗಪ್ಪ ಹಿಗ್ಗಿ ಹೀರೇಕಾಯಿಯಾಗಿದ್ದಾಗ – ಓದುಗರೇ ನೀವೇ ಹೇಳಿ – ಈ ಯುವಕರು ಹೇಗಿದ್ದಾರು. ಸುಮ್ಮನೆ ಮುಸಿಮುಸಿ ನಕ್ಕಿದ್ದಾರು; ಅಲ್ಲವೆ? ನಿಮಗನ್ನಿಸಿರಬೇಕು ಸಂಗಪ್ಪನ ...

ಅಧ್ಯಾಯ ಹದಿಮೂರು ಮರುವಿನ ರಾಜಸಭೆಯಲ್ಲಿ ಚಿನ್ನಾಸಾನಿಯ ಕಚೇರಿ. ಜಯದೇವನ ಕವಿಯ ಅಷ್ಪಪದಿಗಳನ್ನು ಅಭಿನಯಿಸುತ್ತಾಳೆ. ಆದಿನ ಮಧ್ಯಾಹ್ನವೇ ಸುಲ್ತಾನರಿಗೆ ಗೋಪಾಲರಾಯರು ಗೀತಗೋವಿಂದನನ್ನು ವಿವರಿಸಿದ್ದಾರೆ. ಅವರಿಗಂತೂ ಆ ಪ್ರಾಸಾದಿಕವಾಣಿಯನ್ನು ಕೇಳುತ್...

ಸಂಗಪ್ಪನೇನೋ ರಾಜೇಂದ್ರ ಬರೆದ ಪದ್ಯಗಳನ್ನು ಸುಟ್ಟ; ಆದರೆ ರಾಜೇಂದ್ರನಂಥ ಜನರ ಮನಸ್ಸಿನಲ್ಲಿರೊ ಆ ಸತ್ವವನ್ನು ಸುಡೋದು ಅವನಿಂದ ಹೇಗೆ ಸಾಧ್ಯ? ಪ್ರತಿಭಟನೆಯ ಶಕ್ತಿ ಅದು ನಿಜಕ್ಕೂ ಪ್ರಾಮಾಣಿಕವಾಗಿದ್ದರೆ ಇಂಥ ದಬ್ಬಾಳಿಕೆಗಳನ್ನು ಎದುರಿಸುವ ಮತ್ತಷ್ಟ...

1234...44

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....