ಸಾಕ್ಮಾಡೊ ಗಂಡಾ ಸಾಕ್ಮಾಡೊ

ಸಾಕ್ಮಾಡೊ ಗಂಡಾ ಸಾಕ್ಮಾಡೋ ||ಪಲ್ಲ|| ಬೆಳಗಾತು ಹಳುವಾಗ ಬಿಸಿಲಾತು ಹಳದಾಗ ಮಸರಾತು ಮೈಯಲ್ಲ ಸಾಕ್ಮಾಡೊ ಕೆಸರಾತು ಕುಬಸೆಲ್ಲ ಹೆಸರಾತು ಹಾಸ್ಗೆಲ್ಲ ತಗಣೀಗಿ ತಂಪಾತು ಸಾಕ್ಮಾಡೊ ||೧|| ಡೋಮಾರಿ ಛೀಮಾರಿ ಗಲ್ಲಾವ ಕಚ್ಯಾವ ತಲಿಯಾಗ ಪಡಿಹೇನು...

ಮೆಲ್ಲ ಮೆಲ್ಲ ಬರುವ ನಲ್ಲ

ಮೆಲ್ಲ ಮೆಲ್ಲ ಬರುವ ನಲ್ಲ ಬಾಲೆ ಜಡೆಯ ಬಾಚಿಕೊ ||ಪಲ್ಲ|| ಅವನು ಬರುವ ಬಂದೆ ಬರುವ ಏನು ತರುವ ನೋಡಿಕೊ ನಿನ್ನ ಮುಡಿಯ ಉಡಿಯ ನಡೆಯ ನಿನಗೆ ನೀನೆ ಮಾಡಿಕೊ ||೧|| ಮಧುರ ಗಲ್ಲ...

ಹಿಂಗ್ಯಾಕ ಮಾಡ್ತಾನ ಮಠದಯ್ಯಾ

ಹಿಂಗ್ಯಾಕ ಮಾಡ್ತಾನ ಮಠದಯ್ಯಾ ಕೀಲಾಡಿ ಕುಂಡೀಯ ಕಟದಯ್ಯಾ ||ಪಲ್ಲ|| ಕಾವೀಯ ಕೂಲಾವಿ ಮ್ಯಾಲಕ್ಕ ಹಾಕ್ಯಾನ ಕಾಮೀನಿ ಭಾಮೀನಿ ಅಂತಾನ ಹಣಿಪಟ್ಟಿ ಬಿಳಿಪಟ್ಟಿ ಈಬತ್ತಿ ಹಚ್ಯಾನ ಹಿಂದ್ಯಾಕ ನನಸೀರಿ ಎಳಿತಾನ ||೧|| ಗಂಡುಳ್ಳ ಗರತೇರ ಹಿಂದ್ಹಿಂದ...

ಹೂವ ಕಂಡು ಗೋವ ಕಂಡು

ಹೂವ ಕಂಡು ಗೋವ ಕಂಡು ನಿನ್ನ ನೆನೆದನು ಮಾವು ಕಂಡು ಸಾವು ಕಂಡು ನಿನ್ನ ಕರೆದೆನು ||೧|| ನನ್ನ ಕಂದಾ ನನ್ನ ಬಗಲ ಬರಿದು ಮಾಡಿದೆ ಅವ್ವ ಅವ್ವ ಅವ್ವ ಎಂದು ಬಯಲು ಮಾಡಿದೆ...

ಬಸುರಾದೆನ ತಾಯಿ ಬಸುರಾದೆನ

ಬಸುರಾದೆನ ತಾಯಿ ಬಸುರಾದೆನ ನನ್ನ ಪತಿಯಾರು ಗತಿಯಾರು ತಿಳಿದಾದೆನ ||ಪಲ್ಲ|| ವಾರೀಗಿ ಗೆಳತೇರು ಗಾರೀಗಿ ನೆರತೇರು ಬೋಳ್ಯಾರು ಹುಳು ಹುಳು ನೋಡ್ಯಾರೆ ಗಂಡನ್ನ ಹೆಸರೇಳ ಗಣಪತಿ ತಾಯಾಗ ಗಮ್ಮಂತ ಗುಳುಗುಳು ನಗತಾರೆ ||೧|| ಏನಂತ...

ನಿನ್ನ ಮಿಲನ ಅದೇ ಕವನ

ನಿನ್ನ ಮಿಲನ ಅದೇ ಕವನ ಶಾಂತಿ ವನದ ಕೂಜನಂ ನವಿಲು ನಾನೆ ಉಯಿಲು ನೀನೆ ರಜತರಂಗ ದಿಂಚರಂ ||೧|| ದೂರ ದೂರ ದೂರ ದಾರಿ ನೂರು ತೀರ ತೀರಿತು ಮತ್ತೆ ಮತ್ತೆ ಹತ್ತು ನೂರು...

ಸೂಳೆವ್ವ ನಾನೂ ಹುಚಬೋಳೆ

ಸೂಳೆವ್ವ ನಾನೂ ಹುಚಬೋಳೆ ||ಪಲ್ಲ|| ಗಂಡನ ಸೀರ್‍ಯಾಗ ಮಿಂಡನ್ನ ಮಾಡ್ಕೊಂಡೆ ಗಂಡುಳ್ಳ ದಾರಿ ನೋಡ್ಕೊಂಡೆ ಯಾಗಂಡ ಛೂಗಂಡ ಫೂಗಂಡ ಪಡಪೋಶಿ ಪುರಮಾಶಿ ಮುದುವನ್ನ ಮಾಡ್ಕೊಂಡೆ ||೧|| ಹೊಸಗಂಡ ಹುಚಗಂಡ ಪಂಚೇರು ಪಡಿಗೋದಿ ಹೋಳೀಗಿ ಮ್ಯಾಗ...

ಎಲ್ಲ ದೇವನ ಮಂದಿರನ!

ರಾಮ ಸುಂದರ ರಹಿಮ ಬಂಧುರ ತೀರ್ಪು ಸರಿಸಮ ಗಮಗಮ ಅವರು ಬಾಳಲಿ ಇವರು ಉಳಿಯಲಿ ಬೆಳಕು ಬೆಳಕಿಗೆ ಸರಿಗಮ ಭೂಮಿ ಸೀಮಿ ಬಯಲು ಬಾನು ಎಲ್ಲ ದೇವನ ಮಂದಿರ ಹೂವು ಹಸಿರಿಗೆ ಪಕ್ಷಿ ವೃಕ್ಷಕೆ...

ದುಡಿವ ರಟ್ಟೆಗೆ ಶರಣು ಕೊಡುವ ಹೊಟ್ಟೆಗೆ ಶರಣು!

ದುಡಿವ ರಟ್ಟೆಗೆ ಶರಣು ಕೊಡುವ ಹೊಟ್ಟೆಗೆ ಶರಣು ಪರರ ಎಂಜಲು ತಿಂಬ ದಾಹಬೇಡ ಗುರುಬರಲಿ ಹರಬರಲಿ ಶಿವಬರಲಿ ಯಾರಿರಲಿ ಬೆವರಿಲ್ಲದಾ ಅನ್ನ ಅರುಹು ಬೇಡ ಶ್ರಮವಿಲ್ಲದಾ ದೇವ ಧರ್ಮಬೇಡಽಽಽಽ ಗುರುವಿರಲಿ ದೊರೆಯಿರಲಿ ಅರಮನೆಯ ಅರಸಿರಲಿ...

ಬಿಸಿಲ ಕಾಲವು ಬಂದಿತೆ ?

ಎಲೆಯ ಮೇಲೆ ಎಲೆಯು ಉರುಳಿವೆ ಬಿಸಿಲ ಕಾಲವು ಬಂದಿತೆ ಹಕ್ಕಿ ಗೂಡು ಒಣಗಿ ಹೋಗಿದೆ ಮುಗಿಲು ಕೆಂಡವ ಕಾರಿತೆ ಎಲ್ಲಿ ಹೋಯಿತು ಹಸಿರು ಹೂಬನ ಎಲ್ಲಿ ಅಡಗಿತು ಕೂಜನ ಎಲ್ಲಿ ಮುಳುಗಿತು ಮಳೆಯ ಠಂಠಣ...