ಚಾಕಲೇಟ್

ಚಾಕ್ಪೀಸನ್ನು ಮೇಜಿನ ಮೇಲಿಟ್ಟು ಗುರುಗಳು ಮಾಮೂಲಿನಂತೆ ಏಯ್ ಕೋಣ ಯಾಕೆ ಲೇಟ್ ಎಂದು ಗುರ್ರೆಂದು ಗರಾಯಿಸುವುದಕ್ಕೆ ಗಂಟಲು ಸರಿಪಡಿಸುವಷ್ಟರಲ್ಲೇ ನಮ್ಮ ಜಾಣ ಗುಂಡ ನೇರವಾಗಿ ಅವರ ಬಳಿಗೇ ಹೋಗಿ ಕೊಟ್ಟುಬಿಟ್ಟ ಒಂದು ಕ್ಯಾಡ್ಬರೀಸ್ ಚಾಕಲೇಟ್....

ಬೋರು-ಬೀರು

ಮಾಡೋದೇನು ಬೇಜಾರು ತುಂಬಾ ಬೋರು ಎಷ್ಟು ಆಳಕ್ಕೆ ಡ್ರಿಲ್ ಮಾಡಿದರೂ ಸಿಲಿಲ್ಲ ಒಂದೇ ಒಂದು ತೊಟ್ಟು ನೀರು ತಲೆಬಿಸಿ; ಇನ್ನೇನು ಮಾಡ್ಲಿ ನೀವೇ ಹೇಳಿ ಆರ್ಡರ್ ಮಾಡಿ ಕುಳೀತಿದ್ದೇನೆ ಒಂದು ಚಿಲ್ಡ್ ಐಸ್ ಬೀರು....

ಬಿರಿಯಾನಿ

ಎಲ್ಲಾ ಜಾತಿಯವರೂ ಸಲೀಸಾಗಿ ಕೋಳಿ ತಿನ್ನೋಕೆ ಶುರು ಮಾಡಿದ್ದು ನೋಡಿ, ಅರ್ಜೆಂಟಾಗಿ ಆಂಟಿ ಬಿರಿಯಾನಿ ಕಾನ್ಫರೆನ್ಸ್ ಕರೆದು, ಹೀಗೆ ಆದರೆ ಒಂದಲ್ಲ ಒಂದು ದಿನ ಕೂಗೋದಕ್ಕೆ ಕೋಳಿ ಇಲ್ದೇ ಬೆಳಗೇ ಆಗದೆ ಜಗತ್ತನ್ನು ಕತ್ತಲೆ...

ಮಿಶ್ಚೀಪೂ

ಪ್ರತಿದಿನ ಕೋಳಿ ಕೂಗಿ ಕರೆಯೋದು ಸೂರ್ಯ ಮೂಡಿ ಬೆಳಗಾಗೋದು ಈ ಕೋಳಿಗೂ ಆ ಸೂರ್ಯಂಗೂ ಇದೇನು ಪಾರ್ಟನರ್ಶಿಪ್ಪೂ! ಏನ್ ಪಾರ್ಟನರ್ ಶಿಪ್ಪೂ ಇಲ್ಲ ಗೀರ್ಟನರ್ ಶಿಪ್ಪೂ ಇಲ್ಲ ಮಣ್ಣಾಂಗಟ್ಟೀ ತನ್ನಿಂದಲೇ ಬೆಳಗಾಗೋದೂಂತ ತೋರ್ಸೋಕೆ ಇದೆಲ್ಲಾ...

ನಮ್ಮ ಮನೆ ಹುಂಜ

ನಮ್ಮ ಮನೆ ಕೋಳಿಹುಂಜ ಎಷ್ಟು ಜಾಣ ಗೊತ್ತೇ? ಎಷ್ಟು ಕೂಗಿದ್ರೂ ಸೂರ್ಯ ಹುಟ್ಟದಿದ್ರೆ ಅವನಿಗೆ ತನ್ನ ಕೂಗು ಕೇಳ್ಸೋದಕ್ಕೆ ಪಾಪ ಏಕ್ದಂ ಮನೆ ಕೊಳನ್ನೇ ಹತ್ತಿನಿಂತ್ ಬಿಡುತ್ತೆ. *****

ಜಾಕಿ

ಕುಳ್ಳ ದುರ್ಬಲ ಮಗುವನ್ನು ನೋಡಿ ಬಡ ತಂದೆ ತಾಯಿಗಳಿಗೆ ಯಾರೋ ಹೇಳಿದ್ದರಂತೆ: ಚಿಂತೆಬೇಡ ಇವನು ನಿಮಗೆ ದೇವರು ಕೊಟ್ಟವರವಾಗುತ್ತಾನೆ. ಮುಂದೆ ರಾಜಮಹಾರಾಜರ ಭಾರೀ ಕುದುರೆಗಳನ್ನು ಸವಾರಿ ಮಾಡಿಕೊಂಡಿರುವ ಸರದಾರ ಅವರು ಹೇಳಿದ್ದು ಅವನ ಗ್ರಹಗತಿಗಳನ್ನು...

ಅವನೇ ಬಂದ

ದಿನವೂ ಬಂದು ಬಿಂಕ ಬಿನ್ನಾಣ ಮಾಡಿ ಹೋಗುವ ಈ ಹವಳದ ಕಣ್ಣಿನ ಪಾರಿವಾಳ ಅವನ ಚೀಟಿಯನ್ನು ಕಾಲಿಗೆ ಕಟ್ಟಿಕೊಂಡು ಬರಬಹುದೆಂದು ಕಾದಿದ್ದೆ, ಆದರೆ ಚೀಟಿ ಬರಲಿಲ್ಲ, ಸದ್ಯ ಅವನೇ ಬಂದುಬಿಟ್ಟ. *****

ಕನ್ನಡ ತನ್ನಷ್ಟಕ್ಕೆ ಕಮ್ಸು ಟು ಅಸ್ಸು

ನಮಗೆ ಬೇಕಾದ್ದು ಒಂದು ಆರ್ಡಿನರಿ ಪಾಸು ನಮಗ್ಯಾಕೆ ಬೇಕು ಹೇಳಿ ಭಾಸ, ಕಾಳಿದಾಸ, ಕುಮಾರವ್ಯಾಸ ಅಂತ ಕೊರದು ಕೊರದು ಗೋಳು ಹೊಯ್ಕೊಳ್ಳುವ ತ್ರಾಸದ ಕನ್ನಡದ ಕ್ಲಾಸು *****