ಆಸೆ – ೨

ದಟ್ಟವಾಗಿ ಹಬ್ಬಿರುವ ಈ ಬಳ್ಳಿಯಲ್ಲಿ ಪುಟ್ಟದಾಗರಗಳಿರುವ ನೂರಾರು ಹೂಗಳ ನಿಗೂಢದಲ್ಲಡಗಿರುವ ಸೂಜಿ ಮನೆ ಮಕರಂಧ ಬಿಂದುಗಳಿಗೆ ಇನ್ಯಾವುದೋ ಗೂಡ ಸೇರಿ ಜೀನಾಗಿಬಿಡುವಾಸೆ. *****

ಕಾಮನ ಬಿಲ್ಲು

ಇರುವುದೊಂದೇ ಬಣ್ಣ ಅದು ಹೋಳಾದಾಗ ಕಾಣುವುದು ಏಳು ಇದಕ್ಕೆ ಏನೇನೋ ಹೆಸರು ಮಳೆಬಿಲ್ಲು, ಇಂದ್ರ ಧನಸ್ಸು, ಸೂರೆಗೊಂಡಿದೆ ಇದು ಕವಿ ಜನರ ಮನಸ್ಸು ಎಷ್ಟೊಂದು ಸುಮಧುರ ಎಂದ್ಯಾರೋ ಅಂದಿದ್ದಕ್ಕೆ ಹೇಳಿದ ನಮ್ಮೂರ ಧುರಂಧರ ಪಂಚಾಯ್ತಿ...

ಬೆಳ್ಳಕ್ಕಿ

ಉದ್ದ ಕೊಕ್ಕಿನ ಬೆಳ್ಳಕ್ಕಿಗೆ ಮೀನ ಹಿಡಿಯುವುದಕ್ಕಾಗಿಯೇ ದೇವರು ಕೊಟ್ಟಿದ್ದಾನೋ ಈ ಕೊಕ್ಕು ಅಥವಾ ಕೊಕ್ಕು ಉದ್ದಕ್ಕಿದೆಯೆಂಬುದಕ್ಕಾಗಿ ಇವು ಮೀನು ಹಿಡಿಯುತ್ತವೆಯೋ ಗೊತ್ತಿಲ್ಲ ಸ್ಪಷ್ಟ. ಸೃಷ್ಟಿ ರಹಸ್ಯವನ್ನು ಅಡಗಿಸಿಕೊಂಡಿರುವ ಈ ಪ್ರಶ್ನೆಗೆ ಇದಮಿತ್ಥಂ ಎಂದು ಉತ್ತರ...

ನದಿ

ಮಳೆಗಾಲದಲ್ಲಿ ಬಸಿರಿಯಂತೆ ಮೈತುಂಬಿ ಬಾಯ್ಗೆ ಸಿಕ್ಕ ಜೊಂಡು ಹುಲ್ಲನ್ನೆಲ್ಲ ತಿಂದುಂಡ ನದಿ, ಈಗ ಬೇಸಿಗೆಯಲ್ಲಿ ಬಾಣಂತಿಯಂತೆ ಕೃಶವಾಗಿ ಬೆಂಡು; ಹೆತ್ತು ಮರಳ ಹಾಸಿಗೆಯ ಮೇಲೆ ಮಲಗಿಸಿದ್ದು ಮಾತ್ರ ಒಂದಿಷ್ಟು ಬರೀ ಕರಿಕಲ್ಲ ಗುಂಡು. *****

ಚಕ್ರವ್ಯೂಹ

ಹಣದಿಂದ ಚುನಾವಣೆ ಚುನಾವಣೆಯಿಂದ ಅಧಿಕಾರ ಅಧಿಕಾರದಿಂದ ಹಣ ಮತ್ತೆ ಚುನಾವಣೆ, ಇದೊಂದು ವಿಷ ಚಕ್ರ ಬರೀ ಚಕ್ರವಲ್ಲ, ಒಮ್ಮೆ ಒಳ ಹೊಕ್ಕರೆ ಹೊರ ಬರಲಾರದ ಸುಯೋಧನರ ಚಕ್ರವ್ಯೂಹ *****