ಲತಾ ಗುತ್ತಿ

ಪ್ಲುಟೋಯ್

ಮುಡಿಯಿಂದ ಅಡಿಯವರೆಗೆ ಸೂರ್ಯ ರಶ್ಮಿಗಳಲಿ ಮುಳುಗಿ ಎದ್ದು ತಣ್ಣನೆ ಕಿರಣಗಳನು ಸಿಂಪಡಿಸುತಿಹಳು ಚೆಲುವೆ ‘ಪ್ಲುಟೋಯ್’ ಸೂರ್ಯ ಕಿರಣಗಳಿಗಿಂತ ಮೊದಲು. *****

ಕ್ಷಣ ಗಣನೆ

ಅಮವಾಸ್ಯೆಯ ಸೆರಗು ಮುಸ್ಸಂಜೆ ವಿಮಾನ ಏರುವುದು ಸಮುದ್ರ ದಾಟುವುದು ಬೇಡವೇ ಬೇಡ ಸಂಪ್ರದಾಯದ ಅಮ್ಮನ ಸಂಕಟ ಒಳಗೊಳಗೆ- ವೀಸಾದ ಕೊನೆಯ ದಿನಾಂಕ ನೋಡು ಅಮ್ಮ ಹೊರಡಲೇಬೇಕು ಹೊಸ್ತಿಲಿನ […]

ಚೈತ್ರ

ಅಲ್ಲಲ್ಲಿ ಕೋಗಿಲೆಗಳ ಮೊಟ್ಟೆಯೊಡೆಯುವಾಗ ಹೊಸ ಜೀವಕೆ ಸಂಗಾತಿ ಒಣಗಿದ ರೆಂಬೆ ಕೊಂಬೆಗಳ ಚಿಗುರುವಿಕೆ ವಸಂತೋತ್ಸವದ ಉನ್ಮಾದ. *****

ಹಸಿರು

ಕಾಡುಬೆಟ್ಟ ಪರ್ವತಗಳು ಆಸೆಬುರುಕರ ಬುಲ್‌ಡೋಜರಿಗೆ ಸಿಕ್ಕು ಅಲ್ಲಲ್ಲಿ ಮನೆ ಮಠ ಪ್ಯಾಕ್ಟರಿ ಕ್ಲಬ್ ಥಿಯೇಟರ್‌ಗಳೂ ಆಗಿ ಭೂಗೋಲದ ಉಳಿದ ಪುಟ ಸೇರಿ ಇತಿಹಾಸವಾಗುತ್ತವೆ – ನಮ್ಮ ಮಕ್ಕಳು […]

ನೈಸರ್ಗಿಕ ಪ್ರಕೋಪ

ಭೂಗರ್ಭ ಸೀಳಿ ಬರುವ ಲಾವಾ ಸಮುದ್ರ ಉಕ್ಕಿಹರಿಯುವ ನೀರು ಮೋಡ ಒಡೆದು ಬರುವ ಮಳೆ ಅವೆಲ್ಲ ನಮ್ಮ ನಿಮ್ಮ ಸಿಟ್ಟಿನಂತೆಯೇ ನಿಸರ್ಗಕ್ಕೂ ಬಿ.ಪಿ. ಏರಿಳಿದು ಆಗಾಗ ಹಾರ್ಟ್‌ಅಟ್ಯಾಕ್ […]

ನನ್ನೊಂದಿಗೆ ಪುಸ್ತಕಗಳ ಮಾತು

ಮೊನ್ನೆ Referenceಗೆಂದು Library ಹೊಕ್ಕಾಗ ಫುಸ್ತಕಗಳು ಮೋಕ್ಷಗೊಂಡವರಂತೆ ಅವುಗಳ ಮುಳುಮುಳು ಧ್ವನಿಕೇಳಿ ಚಕಿತಳಾದೆ. “ಬನ್ನಿ ಬನ್ನಿ ನಿಮಗೆ ಕಿವಿಗಳಿದ್ದರೆ ಅವಕ್ಕೊಂದು ಆತ್ಮ ಇದ್ದರೆ ಆತ್ಮಕ್ಕೂ ಒಂದು ಕಣ್ಣು […]

ಯುಗಾದಿ

೧ ಈಗೀಗ ನಿಸರ್ಗಕ್ಕಿಂತಲೂ ಹೆಚ್ಚಾಗಿ ಪತ್ರಿಕೆಗಳು, ಕ್ಯಾಲೆಂಡರ್‌ಗಳು ರೇಡಿಯೋ, ಟಿ.ವಿ. ಅಡ್ವರ್ಟೈಸ್ಮೆಂಟ್ ಗಳು ಎಬ್ಬಿಸುತ್ತವೆ ನೆನಪಿಸುತ್ತವೆ ಯುಗಾದಿ ಯುಗಾದಿ ಎಂದು ವೇಷ ಭೂಷಣ ತೊಟ್ಟು ಸಡಗರಿಸಿರೆಂದು. ೨ […]

ಕಾಬೂಲಿವಾಲಾ

ಅಂದು – ಉದ್ದನೆಯ ದಾಡಿ ತಲೆಗೆ ಸಡಿಲಾದ ಪೇಟಾ ಕಂದುಬಣ್ಣದ ದೊಗಲೆ ಜುಬ್ಬಾ ಹೆಗಲ ಮೇಲಿನ ಕೋಲಿನ ಅಂಚಿಗೆ ತೂಗಾಡುವ ಬುಟ್ಟಿಗಳು ಬದಾಮ್ ಪಿಸ್ತಾ ಕಲ್ಲುಸಕ್ಕರೆ ಒಂದೆಡೆ […]

ಪಕ್ಷಿ ಪುರೋಹಿತರು

ಪಬ್ಲಿಕ್ಕೇ ಇರಲಿ ಗಾರ್ಡನ್ನೇ ಇರಲಿ ವಿ.ಐ.ಪಿ ಶಿಲಾಮೂರ್ತಿಗಳ ನೆತ್ತಿಯಮೇಲೆ ತಮ್ಮ ಮಲಮೂತ್ರಗಳಿಂದ ಅಭಿಷೇಕ ಮಾಡಿ ಇಂಪಾಗಿ ಚಿಲಿಪಿಲಿಸುತ್ತ ಹುಲ್ಲು ಏರಿಸಿ ಹುಳ ಹುಪ್ಪಡಿ ನೈವೆದ್ಯಮಾಡಿ ನಿತ್ಯ ಸೇವೆಮಾಡಿ […]