ಹನಿಗವನ ಕವಿ ಲತಾ ಗುತ್ತಿ September 16, 2019June 9, 2019 ಶ್ರಾವಣ ಕವಿಯಾಗಲು ಹೊರಟ ನಮ್ಮ ಕವಿ ಮಿತ್ರ ಇತ್ತೀಚೆಗೆ ಶ್ವಾನ ಕವಿಯಾಗಿ ಹೆಸರು ಮಾಡಿದರು. ***** Read More
ಹನಿಗವನ ಜೀವನ ರಸ ಲತಾ ಗುತ್ತಿ September 9, 2019June 9, 2019 ಸಮರಸವೇ ಜೀವನ ಇದೊಬ್ಬ ಅಂದಿನ ಕವಿಯ ಮಾತು ಸೋಮರಸವೇ ಜೀವನ ಇದು ಇಂದಿನ ಕವಿಗಳ ಮಾತು ಕೃತಿ. ***** Read More
ಹನಿಗವನ ವಿಪರ್ಯಾಸ ಲತಾ ಗುತ್ತಿ September 2, 2019June 9, 2019 ರಸ್ತೆಗಳು ಹೆದರಿ ಕತ್ತಲೆಯಲಿ ಮುದುರಿಕೊಳ್ಳುತ್ತಿದ್ದಂತೆಯೇ ಸರಿ ರಾತ್ರಿ ಬಿಚ್ಚಿಕೊಳ್ಳುತ್ತಾರೆ ಕಳ್ಳರು ಕದೀಮರು ತಮ್ಮ ವಿಕೃತ ಬಗೆ ಬಗೆಯ ಕಾಮನೆಗಳನ್ನು. ***** Read More
ಹನಿಗವನ ರಸ್ತೆ ಲತಾ ಗುತ್ತಿ August 26, 2019June 9, 2019 ಕಗ್ಗತ್ತಲು ರಾತ್ರಿಗಳಲಿ ನಗರದ ಬೀದಿಗಳು ಮುಸಿ ಮುಸಿ ಅಳುತ್ತವೆ ದಣಿದ ದೇಹಕೆ ತಂಪಡರಲು ಚಂದ್ರನೂ ಇಲ್ಲೆಂದು. ***** Read More
ಹನಿಗವನ ಬಿ. ಪಿ. ಲತಾ ಗುತ್ತಿ August 19, 2019June 9, 2019 ಬರಬರನೆ ಪ್ರೆಶರ್ ಏರುವ ಟ್ಯೂಬ್ ಒಡೆಯಬೇಕೆಂದಾಗ - ಟ್ಯೂಬ್‌ಲೈಟ್ ಟ್ಯೂಬಿನ ತಾಳ್ಮೆ ನಂತರದ ಶುಬ್ರ ಬೆಳಕು ನೋಡುತ್ತಿದ್ದಂತೆಯೇ ನಾರ್ಮಲ್ ಆಗಿತ್ತು ಬ್ಲಡ್ ಪ್ರೆಶರ್. ***** Read More
ಹನಿಗವನ ರಾತ್ರಿ ಲತಾ ಗುತ್ತಿ August 12, 2019June 9, 2019 ಕನಸುಗಳು ಚಿಗುರಿಸುವ ರಾತ್ರಿಗಳೇ ಬೆಳಕಿಗೇಕೆ ಕೈ ಚೆಲ್ಲಿಕೊಳ್ಳುತ್ತೀರಿ? ಎಲ್ಲಾ ಕನವರಿಕೆ, ಊಹೆ, ಭ್ರಮೆ ಯಾವುದಾದರೇನು ಅಂತಿರಾ? ***** Read More
ಹನಿಗವನ ಪೆದ್ದು ಲತಾ ಗುತ್ತಿ August 5, 2019June 9, 2019 ಪಕ್ಕದ ಮನೆಯ ಪದ್ದು ಪೆದ್ದಿ ಅಂದುಕೊಂಡಿದ್ದೆ. ಈಗ - ನಗರಸಭೆಯ ಗದ್ದುಗೆ ಏರಿದ ಪದ್ದುಳ ನೋಡಿ ನಾನೇ ಪೆದ್ದಾದೆ. ***** Read More
ಹನಿಗವನ ಆಸೆಗಳು ಲತಾ ಗುತ್ತಿ July 29, 2019June 9, 2019 ಚಪ್ಪಲಿಗಳನ್ನು ಎಲ್ಲಿ ಇಡಬೇಕೋ ಅಲ್ಲೇ ಇಡಬೇಕು ಮೇಲಿಟ್ಟರೆ ಪೂಜೆ ಮಾಡೆನ್ನುತ್ತವೆ ಕೆಳಗಿಟ್ಟರೆ ಕೆಸರಲ್ಲೇ ಹೂತುಕೊಳ್ಳುತ್ತವೆ. ***** Read More
ಹನಿಗವನ ನೆನಪು ಲತಾ ಗುತ್ತಿ July 22, 2019June 9, 2019 ಚುಮು ಚುಮು ನಸಕು ಪಂಚಮಿಯ ರಿಪಿರಿಪಿ ಮಳೆಗಾಲ- ಹಂಡೆಯಲ್ಲಿ ಕುದಿಯುವ ನೀರು ಜೀರೋ ಬಲ್ಬಿನ ಬೆಳಕು ಹೊಗೆ - ಉಗಿ ತುಂಬಿದ ಬಚ್ಚಲಿನಲ್ಲಿ ಸ್ನಾನ, ಏನು ಮುದ ಏನು ಹಿತವಿತ್ತು ನನ್ನಜ್ಜಿಯ ಹಳ್ಳಿಯ ಮನೆಯಲ್ಲಿ;... Read More
ಹನಿಗವನ ಬಂದವರು ಲತಾ ಗುತ್ತಿ July 15, 2019June 9, 2019 ವೃದ್ಧಾಶ್ರಮಕೆ ತಂದೆ ತಾಯಿಯರನು ಅಟ್ಟಿದ ಕಾರ್ಪೆಟ್ ಮನೆಗಳಲಿ ಏರ್ ಕಂಡೀಶನ್ ಕಾರುಗಳಲಿ ಭಕ್ಷ್ಯ ಬೋಜನಗಳ ಅಡುಗೆಮನೆಯಲಿ ನಾಯಿಗಳದದೆಷ್ಟು ದರ್ಬಾರು! ದೇವ ದೇವಾ ನಿನ್ನ ಮಹಿಮೆ ವಿಚಿತ್ರ ಕಾಣಾ!! ***** Read More