ವಸುಧೇಂದ್ರ ಸಾಹಿತ್ಯ

ಇಂದು ಬರೆಯುತ್ತಿರುವ ಹಲವಾರು ಕ್ರಿಯಾಶೀಲ ಲೇಖಕರ ಪಟ್ಟಿಯಲ್ಲಿ ವಸುದೇಂದ್ರರ ಹೆಸರೂ ಸೇರಿಕೊಳ್ಳುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ವಸುಧೇಂದ್ರರ ಸಾಹಿತ್ಯ ಬದಲಾವಣೆಯ ಸೂಚನೆಗಳನ್ನು ಹೊಂದಿದಂತಹದು. ಈ ಬದಲಾವಣೆಯೆಂಬುದು ಕಥನದ ಮಾದರಿಯಲ್ಲೇ ಆಗಿರಬಹುದು. ಸಾಮಾಜಿಕ ಪಲ್ಲಟಗಳ ಸಂಕೇತವೇ...

ಕನ್ನಡ ಸಾಹಿತ್ಯ : ಸ್ತ್ರೀಸಂವೇದನೆಯ ನೆಲೆಗಳು

ಕನ್ನಡ ಸಾಹಿತ್ಯದಲ್ಲಿ ಸ್ತ್ರೀಸಂವೇದನೆಯ ನೆಲೆಗಳು-ಎನ್ನುವ ವಿಷಯವು ಬಹು ದೊಡ್ಡ ವ್ಯಾಪ್ತಿಯುಳ್ಳದ್ದು. ಈ ವಿಷಯವನ್ನು ಇಡೀ ಕನ್ನಡ ಸಾಹಿತ್ಯಕ್ಕೆ ಅನ್ವಯಿಸಿ ಮಾತನಾಡುವುದು ಈ ಪ್ರಬಂಧದ ವ್ಯಾಪ್ತಿಯನ್ನು ಮೀರಿ ನಿಲ್ಲುತ್ತದೆ. ಹಾಗಾಗಿ ಮಹಿಳೆಯರ ಬರವಣಿಗೆಗಳಲ್ಲಿ ವ್ಯಕ್ತವಾಗಿರುವ ಸ್ತ್ರೀಸಂವೇದನೆಗಳನ್ನು...

`ಕಾಯಮಾಯದ ಹಾಡು’ – ದೇಸಿಯ ಹೊಸ ಭಾಷ್ಯ

ಎಸ್.ಜಿ.ಸಿದ್ದರಾಮಯ್ಯನವರ ಕಾವ್ಯ ಹುಟ್ಟುವುದು ದೇಸಿದಿಬ್ಬದಲ್ಲಿ. ಅದು ಉಸಿರಾಡುವುದು ಅಲ್ಲಿನ ಗಾಳಿಯನ್ನೆ. ಹೀಗೆ ನೆಲಮೂಲವನ್ನು ನೆಚ್ಚಿಕೊಂಡು ಬರೆಯುವ ಕವಿ ಅವರಾಗಿರುವುದರಿಂದ ತಮ್ಮ ಸಮಕಾಲೀನರಿಗಿಂತ ಭಿನ್ನರಾಗಿ ಕಾಣುತ್ತಾರೆ.  ಮೇಲುನೋಟಕ್ಕೆ ಅವರ ಕಾವ್ಯ ಹಳ್ಳಿಗಾಡಿನ ಕೃಷಿಯ, ಅನುಭಾವದ ಸುತ್ತ...

ಜಿ.ಎಸ್. ಶಿವರುದ್ರಪ್ಪನವರ ಕಾವ್ಯದಲ್ಲಿ ಸಾಮಾಜಿಕ ಸಾಮರಸ್ಯದ ಆಶಯಗಳು

ಗಣಕ-ತಂತ್ರಜ್ಞಾನವು ಜನಪ್ರಿಯವಾಗುತ್ತಿರುವ ಕಾಲ ಇದಾಗಿರುವುದಿಂದ ಮಾಹಿತಿ ಸಂಗ್ರಹ ಮತ್ತು ಒದಗಿದ ಮಾಹಿತಿಯನ್ನು ಆಯಾ ಆವಶ್ಯಕತೆಗಳಿಗೆ ಆನುಗುಣವಾಗಿ ವಿಭಜಿಸಿ ನೋಡುವ ತಂತ್ರವೂ ಕೈಗೆಟುಕುವಂತಿದೆ. ಸಾಹಿತ್ಯದ ಸಂದರ್ಭದಲ್ಲಿಯೂ ಈ ರೀತಿಯ ವಿಭಜನೆಯ ಕ್ರಮಗಳು ಚಾಲ್ತಿಗೆ ಬಂದಂತೆ ಕಾಣುತ್ತಿವೆ....

ಕೇಳಯ್ಯ ಹುಲಿರಾಯ, ನಾನು ಮೆಟ್ಟಿದ ಭೂಮಿ ಬೆಳೆವುದು

`ಗೋವಿನ ಹಾಡು' ಕನ್ನಡದ ಕಥನಗಳಲ್ಲಿ ಬಹುವಾಗಿ ಓದಿಸಿಕೊಂಡಿರುವಂತದ್ದು.  ಅಲ್ಲಿ ಬರುವ ಪುಣ್ಯಕೋಟಿಯೆಂಬ ಹಸು, ಅರ್ಬುತನೆಂಬ ಹುಲಿಗಳು  ಓದುಗರಿಗೆ ನಿರಂತರವಾಗಿ ಸಂಕೇತಗಳಾಗಿ ಒದಗುತ್ತ ಬಂದಿರುವುದನ್ನು ನೋಡಿದಾಗ ಆದೊಂದು ಉತ್ತಮ ಸಾಂಸ್ಕೃತಿಕ ಪಠ್ಯ ಎಂದು ಒಪ್ಪಬಹುದಾಗಿದೆ.  ಹಸು-ಹುಲಿಗಳು...

ನಾನೆಂಬ ಹುಡುಕಾಟ

ರೂಪ ಯೌವನಗಳದೆ ಮೆರವಣಿಗೆ ಸಾಕು ಬುದ್ಧಿ ಭಾವಗಳಿಗೆ ಮನ್ನಣೆಯು ಬೇಕು - ಹೇಮ ಪಟ್ಟಣಶೆಟ್ಟಿ -ಎಂದು ಘೋಷಿಸಿಸಕೊಂಡರೂ ಸಹ ಒಮ್ಮೊಮ್ಮೆ ಹೆಣ್ಣೊಬ್ಬಳ ಕವಿತೆಯ ಅಂತರಂಗ ತೆರೆದುಕೊಲ್ಳುವುದೇ ಇಲ್ಲ! ಕಾವ್ಯವನ್ನು ಹೆಣ್ಣಿನ ದೇಹದ ಹೊರ ವಿವರಗಳಂತೆ...

ಜಿಗ್ಗಿನ ಚಕ್ರವ್ಯೂಹ ಮತ್ತು ಸರಳದಾರಿಯ ಕಷ್ಟಗಳು

ಹ್ಯಾಮ್ಲೆಟ್ ನಾಟಕದಲ್ಲಿ ಹ್ಯಾಮ್ಲೆಟ್‌ಗೆ ಕಿರಿಕಿರಿ ಮಾಡುವ ಪೊಲೊನಿಯಸ್‌ನ ಪರಿಚಯ ಆ ನಾಟಕದ ಓದುಗರಿಗೆ ಇದ್ದೇ ಇರುತ್ತದೆ. ಒಂದು ಕಡೆ ತಾತ್ವಿಕ ಜಿಜ್ಞಾಸೆಯಲ್ಲಿ ಮುಳುಗಿ ಹೋಗುತ್ತಿರುವ ಹ್ಯಾಮ್ಲೆಟ್ ಇದ್ದಾನೆ. ಇನ್ನೊಂದು ಕಡೆ ಹ್ಯಾಮ್ಲೆಟ್‌ನ ತಾತ್ವಿಕತೆಯನ್ನು ಸಾಮಾನ್ಯೀಕರಿಸಿಕೊಂಡು...