ಮೇಲೂರ ಮುತ್ತಣ್ಣ ಬಲು ಬುದ್ಧಿವಂತ ಅವನ ಮಾತೇ ಮಾತು ಅದಕಿಲ್ಲ ಅಂತ ಯಾರೆಂಬುದೊಂದಿಲ್ಲ ವೇಳೆಯೊಂದಿಲ್ಲ ಎಲ್ಲ ಜನವೂ ಬಳಕೆ, ನಯಕೆ ಕುಂದಿಲ್ಲ. ನಮ್ಮ ಮನದಾರೋಗ್ಯಕವನ ಸಹವಾಸ ಮಲೆಗಾಳಿಯಂತಿಹುದು; ಹೊಳೆಬಗೆಯ ಹಾಸ ಮಂಕನೇಳಿಪುದಣ್ಣ ಏನದರ ಬಣ್ಣ! ‘...
ಅಗೊ ಅಗೊ ಬಂದ ಓ ಹೊತ್ತಗೆಯನೆ ತಂದ! ನಾಚುತ ನಿಂದ “ಬಿಡುವಿಹುದೇ?” ಎಂದ. ಬಿಡುವಿಲ್ಲದೆ ಏನು?- ಇದು ಈತನ ಜಾಣು. ಬಾ ಇನ್ನೇನು, ಆಡಿಸು ಗೋಣು. ಕಟತಟಕಟವೆನುತ ಏನೀ ನುಡಿಸಿಡಿತ! ಇದೆ ಈತನ ಬೆರಗು, ಎನ್ನ ಯ ಕೊರಗು. “ಚೆನ್ನ ವೆ ಎಂತು?”...
ಮಾಮರ ತಳಿತಿಹುದೇತಕ್ಕೆ?- ಕೋಗಿಲೆ ಸರಗೈಯಲಿ ಎಂದು. ಹೂಗಿಡ ಮಲಗಿಹುದೇತಕ್ಕೆ?- ತುಂಬಿಯು ಬಂಬಲಿಸಲಿ ಎಂದು ಪಾರ್ಕೊಳು ಹಚ್ಚನೆ ಹಸುರೇತಕ್ಕೆ?- ಗರಿಕೆಯ ರಸವನ್ನು ಹೀರುತ್ತ ಭಾವಾವೇಶವ ಹೊಂದಲಿ ಎಂದೇ ಕವಿಜನ ನಿಟ್ಟಿಸಿ ಬಾನತ್ತ! *****...
ಸತ್ಯವೆ ಗೆಲ್ಲುವುದು ಅನೃತವು ಅಲ್ತು ಇದು ಭವಿಷ್ಯತ್ತು. ಗೆದ್ದುದೆ ಸತ್ಯ ಸೋತುದೆ ಮಿಥ್ಯ ಭೂತದ ರೀತ್ಯಾ. ವರ್ತಮಾನದೊಳೊ?- ಸಂಗ್ರಾಮವೆ ಸತ್ಯ ಶಾಂತಿಯೆ ಮಿಥ್ಯ ಮಿಗಿಲೆನೆ ಇದರಿತ್ಯರ್ಥಕೆ ಸಮರವೆ ಮುಖ್ಯ ಶಾಂತಿಯಸಹ್ಯ. ಸಂಗ್ರಾಮದೊಳೇ ಸತ್ಯದ ಸುಳಿವು...
(ನವಯುವಕನ ಹಾಡು) ಓ ನಲ್ಲೆ ಬಾ ಇಲ್ಲೆ ಆ ಕ್ಷುಲ್ಲರೊಡನೆ ನಿನಗೇತಕೆ ಲಲ್ಲೆ! ಹಾ ಎನ್ನೊಲವೇ ಎನ್ನಲು ಬಾಯಿಲ್ಲೇ ಸೆಳೆದೊಯ್ಯಲು ದಿಟ್ಟಿಗೆ ಬಲವಿಲ್ಲೇ ಹಾಹಾ ನಿನಗೆನ್ನೊಳು ದಯವಿಲ್ಲೇ ಎನಗೆನ್ನ ಸು ದಕ್ಕದೆ ಇದೆಯಲ್ಲೇ ನನ್ನೆಲ್ಲವನೀ ಮಿಕ್ಕಿಹೆಯಲ್ಲೇ ...
(ಸೊರಗಿರುವ ಅವಳ ನಾಲ್ಕು ಮಕ್ಕಳನ್ನು ನೋಡಿ) ಮಡಿಮಡಿಹಾರುವ ಗುಡಿಯಲ್ಲಿ ತೋಪಿನ ಗುಡಿಯಲ್ಲಿ ಮುಟ್ಟಿಕೊಂಡು ಮೈಲಿಗೆಯಾದ ಹುಡಿಯಲ್ಲಿ ಮೂಲೆಯ ಹುಡಿಯಲ್ಲಿ. ನಿಡುನೀಟು ಸರದಾರ ನಸುಕಿನೊಳಗೆ ಸಂಜೆಯ ನಸುಕಿನೊಳಗೆ ಕಟ್ಟಿಕೊಂಡು ಸೊಟ್ಟಗಾದ ಬೇಲಿಮರೆಗೆ ಬಂಗ...