
ಸಂಭ್ರಮದ ಎದೆಯ ಮೇಲೆ ಅಮರಿಕೊಂಡಿದ್ದ ಹತಾಶೆಯ ಪೊರೆ ಅವಳ ಒಲವಿನ ದಾಳಿಗೆ ಈಡಾಗಿ ಕಳಚಿಕೊಳ್ಳುತ್ತಿದೆ *****...
ಅವಳ ಮಾತು ಕಿವಿಗೆ ಬಂದಪ್ಪಳಿಸುವ ಸದ್ದು ಮಾತ್ರವಲ್ಲ *****...
ಮನಸ್ಸಿನೊಂದಿಗೆ ನಲಿವು ಮುನಿಸಿಕೊಂಡ ಕ್ಷಣ ನೆನಪಾಗುವ ಹೆಸರು ಅವಳು *****...
ನೆನೆಪಿನ ಮಾರುಕಟ್ಟೆಯಲ್ಲಿ ಒಲವು, ನಲಿವು, ನೋವು ಬಿಕರಿಗಿವೆ… ಕೊಂಡುಕೊಳ್ಳಲು ಕಾಲವೆಂಬ ಕಾಸು ಹೊಂದಿಸಬೇಕು. *****...
ಅವಳು ತುಂಬಿದ ಕೊಡ. ನನ್ನೆದುರು ಬರಿದಾದಾಗಲಷ್ಟೇ ಒಡಲಾಳದ ಅಳತೆ ದಕ್ಕುವುದು. *****...
ಅಂಜಿಕೆಯ ತೊಟ್ಟು ಕಳಚಿಟ್ಟು ಅವಳೊಳಗೆ ಒಂದಾದರೆ ಬದುಕು ಹಸನಾಗುವುದೆಂಬ ಕಲ್ಪನೆ ಭ್ರಮೆಯೂ ಇರಬಹುದು *****...
ಅವಳ ನೆನಪು ಕತ್ತಲಲ್ಲಿ ಬೆಳಕು ಹಂಚ್ಚುವ ಮಿಂಚು ಹುಳು *****...
ಅವಳ ಪುಟ್ಟ ಕೀಟಲೆ ದಹಿಸುವುದು ನನ್ನ ಅಹಂ ಟನ್ನುಗಟ್ಟಲೆ *****...
ಮಾತಾಡದೇ ಮಾತಾಡಿಸೋ ಅವಳ ಕಣ್ಣ ಭಾಷೆ ನನ್ನ ಮನಸ್ಸಿನ ಸಮೀಕ್ಷೆ ನಡೆಸಿತು *****...
ಅವಳು ತನ್ನ ಹುಸಿ ಮುನಿಸಿಗೆ ಆಗಾಗ ಪ್ರೀತಿಯ ಬಣ್ಣ ಬಳಿಯುತ್ತಾಳೆ ಅವನ ಒಳಗಣ್ಣಿಗದು ಕಾಣಬಹುದೆಂದು *****...








