ದೇವನಲ್ಲಿ ಬೆಳಕಿನ ಲೋಕಗಳಿವೆಯಂತೆ; ಆಲ್ಲಿ ಪರಂಜ್ಯೋತಿ ಬೆಳಗುತಿದೆಯಂತೆ: ಅವನೆಲ್ಲ ಕಾಣಲಿಲ್ಲ ನಾನು. ಮುನ್ನೀರಿನಾಳದಲಿ ಹವಳ-ಮುತ್ತಿವೆಯಂತೆ, ಬಣ್ಣ ಬಣ್ಣದ ಪಡುಶಿಲೆಗಳಿವೆಯಂತೆ: ಅವನೆಲ್ಲ ಪಡೆಯಲಿಲ್ಲ ನಾನು. ಕು೦ಗನು ಬಲ್ಲನು ಹಸಿರ ಕೆಳಗಣ ಕತ್ತಲೆ-ಬೆಳಕನು! ಅನುಭಾವಿಗಳಿಗೆ ವಿದಿತವಲ್ಲವೆ ಬೆಳಕಿನ ಬಳ್ಳಿಗಳು...

ಆತ: ಸಾರ್, ಇಲ್ಲೇ ಹತ್ತಿರದಲ್ಲಿ `ನಮ್ಮೂರು ಹೊಟೆಲ್’ ಇದೆಯಂತೆ. ಎಲ್ಲಿದೆ ಅಂತ ಕೊಂಚ ಹೇಳ್ತೀರಾ? ಈತ: ನಿಮ್ಮೂರು ಹೊಟೆಲ್ ಇಲ್ಲಿ ಹೇಗೆ ಇರಲು ಸಾಧ್ಯ? ಅದು ನಿಮ್ಮೂರಲ್ಲೇ ಇರುತ್ತದೆ. ಆತ: `ನಮ್ಮೂರು ಹೊಟೆಲ್’ ಇಲ್ಲೇ ಹತ್ತಿರದಲ್ಲಿ...

ಮಲೆನಾಡ ಸಿರಿಯಲಿ ಹಸಿರಾದ ಧರೆಯು ಆ ಕೆರೆಯ ದಡದಲಿ ಕನಸಿನಾಳದಲಿ-ನಾನಿರುವಾಗ ನಿನ್ನಾ.. ಸವಿ ನೆನಪು ಕೆದಕಿ… ಕೆದಕಿ ಬರುತಿರಲು ತನು-ಮನ ದಾಹದಿ ನಿನ್ನ ಸಂಗ ಬಯಸಿತು ಜಿನಗು ಮಳೆಯಲಿ… ತಂಪಾದ ಸುಳಿ-ಗಾಳಿಯಲಿ ಮಾಗಿಯ ಚಳಿ ಮುತ್ತುತ&#82...

ಹ್ಯಾಂಗ ಬಳಕಿ ಮಾಡಬೇಕಣ್ಣಾ ಹೀಂಗಾದಮ್ಯಾಲಿನ್ಹ್ಯಾಂಗ ಬಳಕಿ ಮಾಡಬೇಕಣ್ಣಾ ||ಪ|| ಹ್ಯಾಂಗ ಬಳಕಿ ಮಾಡಬೇಕು ಹಂಗು ಹರಿದು ನಿಂತ ಮೇಲೆ ಬಂಗಿ ತಂಬಾಕ ಸೇದುವ ಮರುಳ ಮಂಗ್ಯಾಗಂಜಿದ ಮೇಲೆ ||೧|| ಪಡೆದ ತಂದೆ ತಾಯಿ ಯಾರಣ್ಣಾ ದುಡಿದುಡಿದು ಸತ್ತರೆ ಮಡದಿ ಮಕ...

ಕಂಡ ಕನಸಿನ ರೂಪ ನನ್ನೆದೆಯ ಕಂಡಾಗ ಮಾತಿಗೆಲ್ಲಿಯ ಸವಿಯು ಹೇಳೆ ಗೆಳತಿ….. ಭೃಂಗದೆದೆ ರಂಗದಲಿ ಸುಮಗಳೊ ಓಲಾಡಿದುದ ಪದವಿಟ್ಟು ಹೇಳುವೆನು ಕೇಳೆ ಗೆಳತಿ….. ಹೊಂಜೊನ್ನ ಜಾವಿನಲಿ ಉಷೆ ಇಳೆಗಿಳಿಯೋ ಹಾದಿಯಲಿ ಉಷೆಯೊಳಗಿನುಷೆಯಾಗಿ ಪೀಯುಷ ಹ...

ವೈದ್ಯನಿಗೂ ವಕೀಲನಿಗೂ ಏನು ವ್ಯತ್ಯಾಸ? ಹೇಳು ನೋಡೋಣ, ತನ್ನ ಸ್ನೇಹಿತನನ್ನು ಕೇಳಿದ. ಸ್ನೇಹಿತ: ವಕೀಲ ಕೇಸು ಸೋತರೆ ಕಕ್ಷಿದಾರ ಆರಡಿ ಎತ್ತರದಿಂದ ನೇಣುಹಾಕಿಕೊಂಡು ಸಾಯ್ತಾನೆ. ಆದರೆ ವೈದ್ಯನ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಆರಡಿ ಗುಂಡಿ ತೋಡಿ ರ...

ಭೂಮಿ ಆ ಅಡಿಗಲ್ಲುಗಳನ್ನು ಎಷ್ಟೋ ದಿನಗಳಿಂದ ನೋಡುತ್ತಲೇ ಇತ್ತು.  ಶಾಲೆ, ಹಾಸ್ಟಲ್ಲು, ಆಸ್ಪತ್ರೆ, ಮಾರ್ಕೆಟ್ಟು, ಕಾಂಪ್ಲೆಕ್ಸ್, ಸಮುದಾಯ ಭವನಗಳ ನಿರ್ಮಾಣಕ್ಕೆಂದು ಶಾಸಕರು, ಸಂಸದರು, ಮಂತ್ರಿಗಳು ಸಂಭ್ರಮದಿಂದ ಅನಾವರಣ ಮಾಡಿದ ಅಡಿಗಲ್ಲುಗಳನ್ನು ...

ಹುಲಿಯೊಂದು ಬೋನಿನಲ್ಲಿ ಸಿಕ್ಕಿಕೊಂಡು ಎಲ್ಲರ ಮುಂದೆ ಗುರುಗುಟ್ಟುತ್ತಾ ಆರ್ಭಟಿಸುತ್ತಿತ್ತು. ಮಲ್ಲ ಬಂದು ಬೋನಿನ ಎದುರು ನಿಂತು ಗಮನಿಸಿದ. ಅದರ ಆರ್ಭಟ ಕಂಡು ಹೇಳಿದ. “ನಿನಗಿಂತ ಹೆಚ್ಚು ಆರ್ಭಟ ನನಗೆ ಬರುತ್ತಿತ್ತು. ಆದರೆ ಏನು ಮಾಡಲಿ? ಈಗ...

ಮರುಳೆ ಮರೆತಿರಬೇಡ ಗುರುವಿನ ಮಾಡೋ ಶ್ರೀ ಶಿವಭಜನ ನೇಮದಿ ಮಾಡೋ ಶ್ರೀ ಶಿವಭಜನ ||ಪ|| ಅಳಿವುದು ಕಾಯ ಉಳಿವುದು ಕೀರ್ತಿ ತಿಳಿದು ನೋಡೆಲೋ ರೀತಿ ಬಿಡು ಅವಿಚಾರ ಮಾಡೋ ವಿಚಾರ ಸ್ಥಿರವಲ್ಲೋ ಈ ಸಂಸಾರ ಮರುಳೇ ಮಾಡೋ ಶ್ರೀ ಶಿವಭಜನ ||೧|| ಎಲ್ಲಿಯ ತನಕ ಹಂ...

ಮಲ್ಲಿ: ರಾಮನ ಜೊತೆ ಸೀತೆಯೂ ವನವಾಸಕ್ಕೆ ಅರಮನೆ ಬಿಟ್ಟು ಹೊರಟಳಲ್ಲಾ, ಏಕೆ ಹೇಳಿ ನೋಡೋಣ. ಮಲ್ಲ: ಕಾಡಿಗೆ ಹೋಗದೆ ಇನ್ನೇನು ಮಾಡ್ತಾಳೆ? ಒಬ್ಬ ಅತ್ತೆಯ ಸಂಗಡ ಬೇಯುವುದೇ ಸೊಸೆಗೆ ಸಾಕು ಸಾಕಾಗಿ ಹೋಗುತ್ತದೆ. ಅಂತಹುದ್ದರಲ್ಲಿ ಸೀತೆ ಮೂರು ಜನ ಅತ್ತೆಯ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...