ದೇವನಲ್ಲಿ ಬೆಳಕಿನ ಲೋಕಗಳಿವೆಯಂತೆ; ಆಲ್ಲಿ ಪರಂಜ್ಯೋತಿ ಬೆಳಗುತಿದೆಯಂತೆ: ಅವನೆಲ್ಲ ಕಾಣಲಿಲ್ಲ ನಾನು. ಮುನ್ನೀರಿನಾಳದಲಿ ಹವಳ-ಮುತ್ತಿವೆಯಂತೆ, ಬಣ್ಣ ಬಣ್ಣದ ಪಡುಶಿಲೆಗಳಿವೆಯಂತೆ: ಅವನೆಲ್ಲ ಪಡೆಯಲಿಲ್ಲ ನಾನು. ಕು೦ಗನು ಬಲ್ಲನು ಹಸಿರ ಕೆಳಗಣ ಕತ್ತಲೆ-ಬೆಳಕನು! ಅನುಭಾವಿಗಳಿಗೆ ವಿದಿತವಲ್ಲವೆ ಬೆಳಕಿನ ಬಳ್ಳಿಗಳು...

ನಮ್ಮೂರ ಕೇರಿಯಲಿ ಯಾರೂ ಹಸನಾದ ಬದುಕು ಕಂಡವರಿಲ್ಲ ಮನುಷ್ಯರ ತರ ಬದುಕಿದವರಿಲ್ಲ ಇಲ್ಲಿ ಹುಟ್ಟಿದವರು… ಒಂದು ಹಿಡಿ ಅನ್ನಕ್ಕಾಗಿ ಬೊಗಸೆ ನೀರಿಗಾಗಿ ಬಾಯಿತೆರೆದು ಕೈಮಾಡಿ ಕಾಯುತ್ತಾ ನಿಲ್ಲುವರು. ಬೈಗುಳಗಳೊಂದಿಗೆ…. ಮುಂಜಾನೆ ಮನೆಗೂಡ...

ಸಾರೋ ಸಾರೋ ಸಾರೋ ಸುಮ್ಮನೆ ನರಕಕಿಳಿವರೇನೋ ||ಪ|| ಪರಸ್ತ್ರೀಯರ ತಡವಿ ಕರವ ಪಿಡಿವರೇನೋ ಸುರರು ನರರು ಎಲ್ಲರು ಜವನದಿ ಹರಲಿಹೊತ್ತದ್ದನ್ನು ಅರಿಯದಾದಿಯೇನೋ ||೧|| ಮೋಹಿಸಿ ಮಾತುಗಳಾಡಿ ನಯದಿ ಗಮ್ಮನೆ ನೋಡಿ ಭಯವು ಇಲ್ಲದೆ ಮೈಯ ಮುಟ್ಟಿ ಬಿಂದು ಕೈಯ ಹ...

ಪರೀಕ್ಷೆಯಲ್ಲಿ ಪಾಸಾದೆಯೇನಪ್ಪಾ? ಪಕ್ಕದ ಮನೆ ಪದ್ಮನಾಭಯ್ಯ ಗೋಪಿಯನ್ನು ಪ್ರಶ್ನಿಸಿದರು. ಗೋಪಿ: ಅಂಕಲ್, ನನ್ನ ಫ್ರೆಂಡ್ಸ್ ಸೀನು, ಸುಬ್ಬು, ಶಂಕರು ಎಲ್ಲಾರು ಒಟ್ಟಿಗೆ ನಪಾಸು. ಪದ್ಮನಾಭಯ್ಯ: ಅಂದರೆ ನೀನು ಹೇಳೋದು ಅವರೆಲ್ಲಾ ನಪಾಸಾದರು. ನೀನೂ ಅವ...

ಶತಮಾನಕೆ ನಮನ ಸಹಸ್ರ ಮಾನಕೆ ನಮನ ಹೊಸ ಶತಮಾನಕೆ ಹೊಸ ಆಲೋಚನೆ ಹೊಸ ಚಿಂತನೆ ಬರಲಿ ಶತಶತಮಾನದ ಅಂಧಶ್ರದ್ಧೆಗಳು ಇಂದೇ ತೊಲಗಿ ಬಿಡಲಿ ಮನುಜರ ನಡುವಣ ಅಡ್ಡಗೋಡೆಗಳು ಕುಸಿದು ಬಿಡಲಿ ಇಂದೇ ಜಾತಿ ಪಂಥ ಮತ ಧರ್ಮಗಳೆಲ್ಲವು ಅನುಭಾವಿಗೆ ಒಂದೇ ದೇಶ ದೇಶಗಳ ಗ...

ನಾನಾಗ ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದೆ.  ಪ್ರಥಮ ದರ್ಜೆಯಲ್ಲಿ ಪಾಸಾಗಿ ತೋರಿಸಬೇಕೆಂದು ಹಗಲಿರುಳೂ ಕಷ್ಟಪಟ್ಟು ಅಭ್ಯಾಸಮಾಡಿದ್ದೆ.  ಮೊದಲೆರಡು ಕನ್ನಡ ಮತ್ತು ವಿಜ್ಞಾನ ಪರೀಕ್ಷೆಗಳನ್ನು ಚೆನ್ನಾಗಿಯೇ ಬರೆದಿದ್ದೆ.  ಮೂರನೆಯದು ಇಂಗ್ಲೀಷ್ ಪರೀಕ...

ಕತೆಯಾ ಕೇಳಿರಣ್ಣ ಕಲ್ಲು ಮನಸಿನ ಮುಳ್ಳು ಜನಗಳು ಹೂವು ಕೊಲ್ಲುವಂಥ || ಅಲ್ಪನ ಐಶ್ವರ್ಯ ಮಾಡುವ ಆಶ್ಚರ್ಯ ಎತ್ತ ನೋಡಿದರೂ ಕೊಲ್ಲುವ ಕೊಲ್ಲುವ || ಬದುಕೆಲ್ಲ ಬಂಡೆಯು ಹಸಿವು ರಕ್ಕಸಿಯು ಎಣಿಸಿದ ದುಡ್ಡೆಲ್ಲ ಬೆವರಿನ ಹನಿಯು || ಹಾಡು – ೨ ಜೀತ...

ಯಾತಕೆ ಮಳೆ ವಾದವೊ ಶಿವಶಿವನೆ ಜೀವ ತಲ್ಲಣಿಸುತಾವೊ || ಮಳೆಯಿಲ್ಲ ಬೆಳೆಯಿಲ್ಲ ಶಿವನೆ ನಮ ಬದುಕಿಗೆ ನೆಲೆಯೆಲ್ಲಿ ಶಿವನೆ || ದಿನವೂ ಮುಗಿಲತ್ತ ದಿಟ್ಟಿಯನಿಟ್ಟು ಕಾಣದಾದೆವೊ ಹೊಟ್ಟೆಗೆ ಹಿಟ್ಟು ಎತ್ತ ನೋಡಲ್ಲಿ ಬಿಸಿಲು ರಣರಣಾ ಬರಿದಾದ ಒಡಲೆಲ್ಲ ಭಣ ...

ಕುಂಟ ಕುರುಡರೆಂಟು ಮಂದಿ ರಂಟಿ ಹೊಡೆಯಲೋ ಸೊಂಟರಗಾಳಿಗೆ ಸಿಗದೇ ಈ ಲೋಕವ ರಂಟಿ ಹೊಡೆಯಲೋ ||ಪ|| ಸುಜ್ಞಾನವೆಂಬು ಕುಂಟಿಯ ಹೂಡಿ ರಂಟಿ ಹೊಡೆಯಲೋ ಪ್ರಜ್ಞಾನವೆಂಬು ಕೂರಿಗಿ ಹೂಡಿ ಬೀಜಾ ಬಿತ್ತಲೋ ||೧|| ಕರಿಯಬೀಜಾ ಬಿಳಿಯಬೀಜಾ ಬೀಜಾ ಹಿಡಿಯಲೋ ಅರಿಯದಾದ...

ಕರ್ನಾಟಕಿ ಸಂಗೀತದ ಆಗ್ರೇಸರರಲ್ಲಿ ಲಾಲ್ಗುಡಿ ಚಿ.ಜಯರಾಮನ್ ಒಬ್ಬರು.  ಪಿಟೀಲು ಎಂದಕೂಡಲೇ ಚೌಡಯ್ಯನವರ ಹೆಸರು ನೆನಪಿಗೆ ಬರುವಂತೆ, ವೀಣೆಯೊಂದಿಗೆ ಶೇಷಯ್ಯನವರು ನೆನಪಾಗುವಂತೆ, ಕೊಳಲಿನೊಂದಿಗೆ ಚೌರಾಸಿಯ ಚಿತ್ರ ಕಣ್ಣಮುಂದೆ ಬರುವಂತೆ ವಯಲಿನ್ ಜೊತೆಯ...

ಲೇ, ನನಗೆ ಈಗ ತಿಂಗಳಿಗೆ ಪೆನ್ಷನ್ ೧೦೦೦೦/- ರೂ ಬರ್ತಾಯಿದೆ. ನನ್ನ ನಂತರ ನಿನಗೆ ಇದರಲ್ಲಿ ಅರ್ಧದಷ್ಟು ಅಂದರೆ ೫೦೦೦/ ಕೊಡಬೇಕು ಅಂತ ಬ್ಯಾಂಕಿನಲ್ಲಿ ತೀರ್ಮಾನವಾಗಿದೆಯಂತೆ. ಹೆಂಡ್ತಿ: ಅಂದರೆ ಪ್ರತಿತಿಂಗಳೂ ೫೦೦೦ ಬರುತ್ತೆ. ಅದೃಷ್ಟ ಅಂದರೆ ಅದೃಷ್...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...