ಇದ್ದದ್ದನ್ನಿದ್ಹಾಂಗ

ಇದ್ದದ್ದನ್ನಿದ್ಹಾಂಗ ಬಾಯಿಬಿಟ್ಟು ಹೇಳಿದರ | ಎದ್ದು ಬಂದು ಎದಿಗೀ ಒದೀತಾರಂತ || ಪ || ಛಲೋತ್ನಾಂಗ ಓದ್ರೀ ಅಂದ್ರ ಕಾಪಿ ಮಾಡೋದು ತಪ್ಪೂ ಅಂದ್ರ | ಹೊರಗ ಬಾ ನೋಡ್ಕೊತೀನಿ ಅಂತಾರಂತ ಎದ್ದು ಬಂದು...

ಎಲ್ಲಿದ್ದಾನೋ ಹಾಳಾದವನು

ಆ ವಿಳಾಸವಿಲ್ಲದ ಅಲೆಮಾರಿ ಎಂದಿನಂತೆ ಜನಜಂಗುಳಿಯ ಮಧ್ಯೆ ಸಿಕ್ಕ. ಅವನು ಸಿಗುವುದು ಅಲ್ಲೇ ಆ ಏಕಾಂತದಲ್ಲೇ. ಅದೇಕೋ ಇಂದು ನನ್ನ ಕಂಡವನೇ ತನ್ನ ಜೋಳಿಗೆಗೆ ಕೈ ಹಾಕಿ ತಡಕಿ ಲಾಲಿಪಪ್ಪಿನ ಕಡ್ಡಿಯೊಂದನ್ನು ತೆಗೆದು ಕೈಯಲ್ಲಿ...
ಅಕ್ಷರವಿಧಾನ

ಅಕ್ಷರವಿಧಾನ

ಸದ್ಯ ಲೋಕದಲ್ಲಿರುವ ಸುಮಾರು ಮೂರೋ ನಾಲ್ಕೋ ಸಾವಿರದಷ್ಟು ಭಾಷೆಗಳಲ್ಲಿ ಅಕ್ಷರಗಳಿರುವುದು ಕೇವಲ ಇನ್ನೂರಕ್ಕೂ ಕಡಿಮೆ ಭಾಷೆಗಳಿಗೆ. ಈ ಅಕ್ಷರಗಳಲ್ಲಿ ಮುಖ್ಯವಾಗಿ ಮೂರು ವಿಧಗಳನ್ನು ಕಾಣುತ್ತೇವೆ: ಚೀನೀ ಮತ್ತು ಸ್ವಲ್ಪ ಮಟ್ಟಿಗೆ ಜಪಾನೀ ಭಾಷೆಗಳು ಬಳಸುವ...

ಕೊಂಡು ಕಲಿಯುವುದೇನು? ಉಂಟು ಕಲಿಯದ ಕೃಷಿಯ

ಕೃಷಿ ಕ್ಷಮತೆ ಏರಿಹುದೆಂದು ಇಳುವರಿಯನಧಿ ಕಗೊಳಿಸಿದ ಖುಷಿಯಲೊರಲುವರೊಂದಷ್ಟು ಜನರಾದೊಡಂ ಕೃಷಿ ವೆಚ್ಚವೇರಿರಲು ಕ್ಷಮತೆಯ ಮಾತೆಲ್ಲಿಹುದು? ಕ್ಷಮತೆಯಳೆಯಲು ಕೋಷ್ಠ ಮಾಪನದ ಹಂಗ್ಯಾಕೋ? ಕೆಳಗಿಳಿದ ಜಲಮಟ್ಟವೇರಿರುವುಷ್ಣತೆಯಷ್ಟೆ ಸಾಕೋ - ವಿಜ್ಞಾನೇಶ್ವರಾ *****

ಶೂನ್ಯ

ಒಂದೇ ಸಮನೆ ಸುರಿಯುತ್ತಿದೆ ಮಸಲಧಾರೆ. ಅಬ್ಬರವೇನು? ಆರ್ಭಟವೇನು? ಎಲ್ಲಿ ಅಡಗಿತ್ತೋ ಬೆಟ್ಟ ಗುಡ್ಡಗಳ ನಡುವೆ ಎಷ್ಟು ದಿನಗಳಾದವೋ ಕಾದು ಕುಳಿತ ಕಣ್ಣುಗಳು ಮಂಜಾಗಿ ಮರೆಯಾದವು ಯಾರು ದಬ್ಬಿದರೋ ಕಾಣೆ ದಿಢೀರನೆ ಬಿತ್ತು ಸುಮ್ಮನೆ ಬಂದರೆ...
ವಚನ ವಿಚಾರ – ದೇವರ ಹಂಗೇಕೆ

ವಚನ ವಿಚಾರ – ದೇವರ ಹಂಗೇಕೆ

ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು ಬೇನೆ ಬಂದಡೆ ಒರಲು ಜೀವ ಹೋದಡೆ ಸಾಯಿ ಇದಕ್ಕಾ ದೇವರ ಹಂಗೇಕೆ ಭಾಪು...

ಸೀತಾದೇವಿಯ ಅಗ್ನಿಪ್ರವೇಶ

(ಶ್ರೀಮಾನ್ ಗುಡಿಪಾಟಿ ವೆಂಕಟಾಚಲಮ್ ರವರ ಲೇಖನವೊಂದನ್ನು ಬೆಂಗಳೂರಿನ ಕನ್ನಡಿಗರೊಬ್ಬರು ಅನುವಾದಿಸಿದುದರ ಆಧಾರದಿ೦ದ ಬರೆದುದು) ಸೀತಾ:- ಬಾರಿಲ್ಲಿ ಶ್ರೀರಾಮ ಕಲ್ಯಾಣಮೂರ್ತಿ, ಬಹುದಿನದಿ ಬಳಲಿಹೆನು; ನೊಂದಿಸಿರಿ, ಬೆಂದಿಹಿರಿ ಅಗಲಿಕೆಯ ಅನುದಿನದ ಅಗ್ನಿಗಳ ಜಾಲೆಯಲಿ. ನೀನಿಲ್ಲದಿರೆ ನನಗೆ ಜಗವೆಲ್ಲ...