ಎಮ್ಮಾದಿ ಪುರುಷರ ಸಂಪ್ರದಾಯವೆಂತಿತ್ತು ಗೊತ್ತಾ?

ಎಮ್ಮ ಪದ ಸಂಪ್ರದವಾದೊಡೆಮ್ಮ ಜೀವನ ಕ ಸೀಮ ಸಿರಿ ಸಂಪದ ಚಯನ ಬೇಕಿಲ್ಲವೆನು ತೆಮ್ಮ ಪಿರಿಯರಂದದ ಕೃಷಿಯನುಸುರಿದರು ಕಮತದೊಳೊಸರುವ ಬೆವರಿನೊಳಮ್ಮನರ್ಚನೆ ಮಾಡಿ ತಮ್ಮನ್ನದಾರ್‍ಜನೆಯ ದೋಷ ಕಳೆಯುತ ಬೆಳೆದಿಹರು - ವಿಜ್ಞಾನೇಶ್ವರಾ *****

ಗಗನದಂಗಳ ಹಾರು ಹಕ್ಕಿಯೆ

ಗಗನದಂಗಳ ಹಾರು ಹಕ್ಕಿಯೆ ಯಾವ ಜಾತಿಯು ನಿನ್ನದು ಶಾಂತ ಶೀತಲ ಮಧುರ ಗಾಳಿಯೆ ಯಾವ ದೇಶಾ ನಿನ್ನದು ಮನುಜ ಮನುಜನ ಜಡಿದು ಒಡೆದನು ಮನುಜ ದನುಜಾ ಅದನೆ ಆತ್ಮ ಧರ್ಮಾ ವಿಶ್ವ ಧರ್ಮಾ ಮರೆತು...

ಸಂಕ್ರಮಣ ಕಾಲ

ಬದಲಾಗಿದೆ ಕಾಲ ಸೂಕ್ಷ್ಮಾತಿಸೂಕ್ಷ್ಮ ಸಂಕ್ರಮಣ ಕಾಲ ಅಡಿಯಿಡುವ ಮುನ್ನ ನುಡಿ ಜಾರುವ ಮುನ್ನ ಎಚ್ಚರವಿರಲಿ ಹೂವೇ ಹಾವಾಗಿ ಪ್ರಕೃತಿ ವಿಕೃತಿಯಾಗಿ ಅಮೃತವೇ ವಿಷವಾಗಿ ಜೀವ ತೆಗೆಯಬಹುದು ಎಚ್ಚರವಿರಲಿ ಮಾತು ಮುತ್ತಾಗದೇ ಮೃತ್ಯುವಾಗಿ ನಗುವ ಬೆಳದಿಂಗಳು...
ವಚನ ವಿಚಾರ – ಆಸೆ ರೋಷ

ವಚನ ವಿಚಾರ – ಆಸೆ ರೋಷ

ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ ಇಂತೆರಡಿಲ್ಲದೆ ಕೂಸನೆತ್ತಬಲ್ಲಡೆ ಆತನೆ ಲಿಂಗೈಕ್ಯನು ಗೊಹೇಶ್ವರ ಅಲ್ಲಮನ ವಚನ. ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ. ಒಂದನ್ನು ಬಿಟ್ಟು...

ಭಿಕ್ಷುಕಿ

ಭಿಕ್ಷುಕಿ:- ಬಿಕ್ಷಾಂದೇಹಿ! ಭಿಕ್ಷಾಂದೇಹಿ! (ಅರಸನು ಬೀದಿಯಲ್ಲಿಯ ಇವಳನ್ನು ನೋಡಿ) ಅರಸ:- ಹಗಲಿರುಳು ಗಣಿಸದಲೆ, ಮಳೆಗಾಳಿಯೆಣಿಸದಲೆ ಮನೆಮಾರು ನೆನೆಯದಲೆ, ಬಳಗವನು ಕೂಡದಲೆ ಹರಕು ಸೀರೆಯನುಟ್ಟು, ಮಾಸಿದಾ ತಲೆಬಿಟ್ಟು ಕರದಿ ಜೋಳಿಗೆ ತೊಟ್ಟು, ಕಣ್ಣೆರಡು ಒಳನಟ್ಟು ಬೀದಿ...

ಮಳೆ ನಕ್ಷತ್ರ

ಮಳೆ ಸುರಿದು ಎಲೆಗಳಿಂದ ಹನಿಹನಿ ನಿನ್ನ ನೆನಪಿನ ಬಾಷ್ಪ. ಈ ತಿಳಿ ಸಂಜೆ ಆಲಿಸುತ್ತಿದೆ ಹಕ್ಕಿ ಇಳಿ ಹೊತ್ತಿನ ಹಾಡು. ಹೂವರಳಿ ಸುವಾಸನೆಯ ಗಾಳಿ ಬೀಸು. ದೇವರ ಮನೆಯಲ್ಲಿ ನಂದಾದೀಪದ ಬೆಳಕು. ಹನಿಯುವ ಆಳ...

ನಮ್ಮ ಭಾರತವೆನ್ನಿರಿ

ನಮ್ಮ ಭಾರತವೆನ್ನಿರಿ | ವಿಶ್ವ ಚೇತನವೆನ್ನಿರಿ || ವಿಶ್ವ ಮಾತೆಗೆ ಉತ್ಸವವಿದು | ಜಯ ಜಯ ಘೋಷಣೆಯ ಮೊಳಗಿರಿ ||ನಮ್ಮ|| ವಿಶ್ವೇಶ್ವರರ ನಿರ್ಮಾಣ | ಬೃಂದಾವನ ಅಮರಗಾನ | ಜವಾಹರ ಗಾಂಧೀಜಿ ತ್ಯಾಗ ಬಲಿದಾನ...

ಜೀವ ಶಿವ

ಜೀವನವೆಂಬುದು ಒಂದು ಆಶಾಗೋಪುರ ನಿತ್ಯ ಒಡ್ಡುವುದು ಕನ್ಸುಗಳ ಮಹಾಪುರ ಆಸೆಗಳಿಗೆ ಪೂರೈಸುತ್ತ ನಡೆದರಾಯ್ತು ನಿನ್ನ ದಾರಿ ತಪ್ಪಿರುವುದು ನಿಜವಾಯ್ತು ನಿನಗರಿವಿಲ್ಲದೆ ನಡೆದಿದೆ ಇಂದ್ರಿಯ ಕುತಂತ್ರ ನಿನ್ನನ್ನು ಮಾಡಲಿವೆ ನಿತ್ಯ ಪಾರತಂತ್ರ ಆತ್ಮದ ಭಾವದಲ್ಲಿ ನೀನು...
ವಾಗ್ದೇವಿ – ೪೬

ವಾಗ್ದೇವಿ – ೪೬

“ಆಹಾ! ಇಂತಾ ಅನ್ಯಾಯ ಈ ಊರಲ್ಲಿ ನಡೆಯುವದಾದರೆ ನಾನು ಮತ್ಯಾವ ಊರಿಗೆ ಹೋಗಲಿ! ಜೀವಧರಿಸಿ ನನ್ನ ಗಂಡನನ್ನು ಮಠದಲ್ಲಿ ಕೊಂದ ಮಾರೆಗಾರರ ಪಕ್ಷವನ್ನೇ ಸರ್ಕಾರದ ಜನರು ಹಿಡಿದ ಮೇಲೆ ಬಡ ವೆಯಾದ ನನ್ನ ಸಂಕಷ್ಟ...

ಪುನರ್ನವ

ಹೃದಯವು ದಣಿವಿಲಿ ನವೆದಿತ್ತು, | ಸ್ಪಂದಕೆ ಮರೆವೋ ಕವಿದಿತ್ತು ಎಲ್ಲವು ಇತ್ತೆಂದಾಗಿತ್ತು, | ಮುಂದಕೆ ಇನ್ನಿಲ್ಲೆನಿಸಿತ್ತು ಬಿಲ್ಲೇ ಕಳಚಿದೆ ಕೈಯಿಂದ, | ಹೆದೆ ಹರಿದಿದೆ ಒಳಹುರಿಯಿಂದ ಕೈಗಳ ಹಿಡಿತವೆ ಸಡಿಲಾಗಿ, | ಎನಿಸಿದೆ ಆಗದು...