ಈ ೨ಂಂ೭ರ ಡಿಸೆಂಬರಿನಲ್ಲಿ ಎರಡು ವಾರಗಳ ರಜಕ್ಕೆ ಮನೆಗೆ ಬಂದಾಗ ನನಗೆ ಕಾಯುತ್ತಿದ್ದ ಅತ್ಯಂತ ಖುಷಿಯಾದ್ದು ಕೆಲವು ಹೊಸ ಕವನ ಸಂಕಲನಗಳನ್ನು ಕಂಡು. ಮಾಗಿಯ ಚಳಿಗೆ ಕಂಬಳಿ ಸಿಕ್ಕಷ್ಟು ಸಂತೋಷವಾಯಿತು. ಕತೆ ಕಾದಂಬರಿ ವಿಮರ್ಶೆ ಎಂಬ ಸಕಲ ಪ್ರಕಾರಗಳಲ್ಲೂ...

ಏಕಾಂತವು ಮಳೆಯಂತೆ. ಸಂಜೆ ಹೊತ್ತಿನಲ್ಲಿ ಸಮುದ್ರದ ಕಡೆಯಿಂದ ನಮ್ಮ ಭೇಟಿಗೆ ಬರುವುದು. ದೂರ ತುಂಬ ದೂರದ ಬಯಲಲ್ಲಿ ಹಬೆಯಾಗಿ ಆಕಾಶಕ್ಕೇರುವುದು, ಏರುವುದು ತನ್ನ ಹಕ್ಕು ಅನ್ನುವಂತೆ. ಅಲ್ಲಿಂದ ಬಂದು ಊರಿನ ಮೇಲೆ ಸುರಿಯುವುದು. ಮಬ್ಬು ಕತ್ತಲ ವೇಳೆಯಲ...

ಹರಿಚರಣ ರತನ ಮಾನಸ ಮೋಹನ ಮುರಳಿ ನಂದಲಾಲ ಯಶೋದಾ || ಮುರಳಿಗಾನ ಆನಂದ ಯಮುನಾ ತೀರ ಗೋಪಿ ರಾಧಾ ಮನ ವಿಹಾರಿ || ಮದನ ಮೋಹನ ಭಾಗವತ ಗಾವತ ವೇದ ಪುರಾಣ ವಿಹಾರಿ || ಸುರನರ ಪೂಜಿತ ಸೇವಕ ಜನಮನ ಬಾಲಗೋಪಾಲ ಗಿರಿಧಾರಿ || ವಾಸುದೇವಸುತ ಭಕ್ತಾಧಿಪತಿ ಪಾಂಡವ...

ಸೆಟೆದು ನಿಂತಿದ್ದಾನೆ ಹದಿನಾಲ್ಕು ಹರೆಯದ ಹುಡುಗ ಎರಗಲಿರುವ ಗರುಡ, ಬಾಣ ಖ್ಯಾತ ವಾತ್ಸ್ಯಾಯನರ ಋಷಿಕುಲದ ಹೆದೆಯೇರಿ ಜಿಗಿಯಲರ್ಹತೆಯಿದ್ದ ಜಾಣ. ಹೋಮಧೂಮದ ಗಾಳಿ ವೇದಘೋಷದ ಪಾಳಿ ಎಂದೂ ತಪ್ಪಿರದ ಮನೆ ಈಗ ಖಾಲಿ. ತಾಯಿ, ಎಳೆತನದಲ್ಲೇ ಗಾಳಿಗಾರಿದ ಬೆಳಕ...

ಏನಂತಿ ವಾಸಂತಿ ಬಾ ನನ್ನ ಕೂಡೆ ಸಂತಿ ತಲೆ ತುಂಬ ಸೇವಂತಿ ಮುಡಿಸುವೆನು ಏನಂತಿ ದೂರದ ಹಾದಿಯಲ್ಲ ಯಾರದು ಭೀತಿಯಿಲ್ಲ ಸಾಗೋಣ ಮೆಲ್ಲ ಮೆಲ್ಲ ವಾಸಂತಿ ವಾಸಂತಿ ಏನಂತಿ ರೂಪವಂತಿ ಬಳೆಯಂಗಡಿಯುದ್ದಕು ಎಷ್ಟೊಂದು ಬಣ್ಣ ಬೆಳಕು ಯಾವ ಕೈಗೆ ಏನು ಬೇಕು ವಾಸಂತಿ...

ಅದನ್ನು ಅಳೆಯಬಹುದೇ? ಅದು ಒಂದು ಫೌಂಟನ್ ಪೇನಿಗಿಂತ ಉದ್ದವಿಲ್ಲವೆನ್ನುವವರಿವರು. ರಂಗಪ್ಪನೂ ವಾಸುವೂ ಗೆಳೆಯರು. ಅವರ ಗೆಳೆತನವೆಂದರೆ ಊರಲ್ಲೆಲ್ಲ ಹೆಸರಾದುದು. ಇಬ್ಬರೂ ದಿನದ ಇಪ್ಪತ್ತನಾಲ್ಕು ತಾಸುಗಳಲ್ಲಿಯೂ ಒಟ್ಟಿಗೆ ಇರುವರು. ಒಂದು ದಿನ ವಾಸುವಿ...

ಗುಂಡ ಊಟ ಮಾಡುವಾಗ ಮನೆಯೊಡೆಯನನ್ನು ಕೇಳಿದ. “ಯಾಕೆ ನಿಮ್ಮ ನಾಯಿ ನಾನು ತಿಂಡಿ ತಿನ್ನುವಾಗೆಲ್ಲ ಜೋರಾಗಿ ಬೊಗಳುತ್ತೆ?” ಅದಕ್ಕೆ ಮನೆಯೊಡೆಯ ಹೇಳಿದ “ಅದರ ತಟ್ಟೆಯಲ್ಲಿ ಬೇರೆ ಯಾರಿಗೆ ತಿಂಡಿ ಕೊಟ್ಟರು ಅದಕ್ಕೆ ಸಿಟ್ಟು.&#8221...

ತೋರಿ ಬಾರೆ ತೂರಿ ಬಾರೆ ತೋರ ಮುಡಿಯ ಚಂದ್ರಿಮೆ ಬಳುಕಿ ಬಾರೆ ಉಳುಕಿ ಬಾರೆ ಆಳುಕಿನಿಂದ ಸಂಭ್ರಮೆ ||೧|| ನೀನು ಇಲ್ಲ ನಾನು ಇಲ್ಲ ಜೀವ ಎಲ್ಲ ಶೂನ್ಯಮೆ ನೀನು ಬರಲಿ ಹೇಗೆ ಇರಲಿ ಬಾಳು ಪೂರ್‍ಣ ಪೌರ್ಣಿಮೆ ||೨|| ಒಂದೆ ದಿನಾ ಒಂದೆ ಕ್ಷಣಾ ಇದ್ದು ಇಲ್ಲ...

ಪಾರ್ಕಿನಲ್ಲಿ ಹುಡುಗ ತನ್ನ ಪ್ರೇಯಸಿಗಾಗಿ ದಿನಗಟ್ಟಲೆ ಕಾದು ಕುಳಿತ. ಅವಳು ಬರಲೇ ಇಲ್ಲ. ಅವನ ಹೃದಯ ಬರಿದಾಯಿತು. ವಿರಹದ ನೋವಿನಲ್ಲಿ ಮರದ ಎಲೆಗಳನ್ನು ಕಿತ್ತಿ ಬೋಳುಮಾಡಿದ. ಮಾರನೆಯ ದಿನ ಪಾರ್ಕಿಗೆ ಬಂದು ನೋಡಿದ. ಪ್ರಿಯತಮೆಯ ಶವ ಮರದ ರೆಂಬೆಯಲ್ಲಿ...

1...78910

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...