ಬೋಳಾಗಿದ್ದ ಬೆಟ್ಟ

ಬೋಳಾಗಿದ್ದ ಬೆಟ್ಟ ಹಸುರಿಗೆ ತಿರುಗುತ್ತಿದೆ. ಶರದದ ನದಿ ಜುಳು ಜುಳು ಹರಿಯುತ್ತಿದೆ. ನನ್ನ ಊರು ಗೋಲಿನ ಮೇಲೆ ಭಾರ ಬಿಟ್ಟು ಮರದ ಗೇಟಿಗೆ ಒರಗಿ ನಿಂತಿರುವಾಗ ಬೀಸುವ ಗಾಳಿಯಲ್ಲಿ ಮುದಿಕಾಗೆಯ ಕೂಗು ಕೇಳಿಸುತ್ತಾ ಇದೆ....

ನಾಲೆಯ ಪಕ್ಕದ ನಮ್ಮ ಮನೆಗೆ

ನಾಲೆಯ ಪಕ್ಕದ ನಮ್ಮ ಮನೆಗೆ ಬೆಳಕು ಬೆಟ್ಟ ಇಳಿದು ಬರುತ್ತಿದೆ. ಬೆಟ್ಟದ ಮೇಲಿನ ಗವಿಗಳ ಮೇಲೆ ಬಿಳಿಯ ಮೋಡಗಳು ಡೇರೆ ಹಾಕಿವೆ. ಕಾಗೆಗಳು ಕೋಗಿಲೆಗಳು ಬಿಟ್ಟುಹೋದ ನಿಶ್ಯಬ್ದದಲ್ಲಿ, ಅಸಹಾಯ ಜನಕ್ಕೆ ಯುದ್ಧದ ಭಯದಿಂದ ನಿದ್ದೆ...