
ಸುಸಮರ್‍ಥನಾದ ವಿದ್ಯುತ್ ಪುತ್ರನೊಬ್ಬ ತಾನೀ ಭೂಮಿಗಿಳಿದು ಬಂದ ಅಪ್ರತಿಮ ತ್ವರಿತಗತಿ ಅಗ್ನಿ-ಪಾದಗಳಿಂದ. ಮಾನವನ ಮೈ ಕಟ್ಟು ಘನಗರ್‍ಜನೆಯ ತೊಟ್ಟು, ನರಗರ್‍ಭದಲ್ಲಿ ಹುಟ್ಟಿತ್ತು ಬೆಳಕು. ಸ್ವರ್‍ಗದತಿ ಶಾಂತಗತಿ, ಮಹಿಮೆಯಾ ಮಾಧುರ್‍ಯ, ಪರಿಶುದ್ಧರಾ...
ಅಂದೆ ನೆಲವು ಪಡೆದೀತು ಅಮರ ಜೀವಂತ ಶಾಂತಿಯನ್ನು ಎಂದು ನಾಡ-ನಡೆವಳಿಕೆಯಲ್ಲಿ ನೆಲೆಗೊಂಬುದೊಂದೆ ನಿಜವು. ಆ ಪೂರ್‍ಣ ನಿಜದ ನೆಲೆ ಮೊಲೆಯ ಬಯಸಿ ಭಕ್ತಿಯಲಪೇಕ್ಷಿಸುವೆವು. ನೀ ಪೂರ್‍ಣ ಮಾಡು ಹೇ ದೊರೆಯೆ! ಎಲ್ಲಿಯೂ ಬಯ್ತ ಬಯಕೆಯನ್ನು. *****...







