ಗಿಡ ಮರಗಳಿಗೆ ಪಂಚೇಂದ್ರಿಯಗಳಿವೆ ಹುಶಾರ್!

ಗಿಡ ಮರಗಳಿಗೆ ಪಂಚೇಂದ್ರಿಯಗಳಿವೆ ಹುಶಾರ್!

ಸಸ್ಯಗಳಿಗೆ ಜೀವ ಇದೆ ಎಂಬುವುದು ಜಗದೀಶ್ ಚಂದ್ರಭೋಸರು ವ್ಶೆಜ್ಞಾನಿಕವಾಗಿ ದೃಢಪಡಿಸಿದ್ದಾರೆ. ಆದರೆ ಕಣ್ಣು ಕಿವಿ, ಮೂಗು, ಇತ್ಯಾದಿ ಪಂಚೇಂದ್ರಿಗಳಿಲ್ಲದಿರುವುದರಿಂದ ಅವುಗಳನ್ನು ಕೆಣಕಬಹುದು, ಸಾಯಿಸಬಹುದು, ಬಯ್ಯಬಹುದು ಅಥವಾ ಗಿಡಮರಗಳೊಡನೆ ನಿಕೃಷ್ಟವಾಗಿ ನಡೆದುಕೊಳ್ಳಬಹುದು, ಎಂದು ಇಲ್ಲಿಯವರೆಗೆ ಜನ ಅರಿತಿದ್ದರು. ಈಗ ಹಾಗಿಲ್ಲ ಎಲ್ಲ ಗಿಡಮರಗಳಿಗೂ ಪಂಚೇಂದ್ರಿಯಗಳಿದ್ದು ನೋಡುತ್ತವೆ, ವಾಸನೆ ಹಿಡಿಯುತ್ತವೆ, ಬೆಳಕನ್ನು ಅನುಭವಿಸುತ್ತವೆ, ಕೇಳುತ್ತವೆ. ಆದರೆ ಮಾತನಾಡುವುದಿಲ್ಲವಷ್ಟೆ. ನಮ್ಮೆಲ್ಲ ಕ್ರಿಯೆಗಳಿಗೆ ಸ್ಪಂದಿಸುವ ಸಸ್ಯಗಳೊಡನೆ ನಾವು ಬಹಳೇ ಎಚ್ಚರಿಕೆಯಿಂದ ಇರುವುದು ಅವಶ್ಯ.

ದೃಷ್ಟಿ : ನಮಗೆ ಕಣ್ಣುಗಳಿವೆ. ಸೂರ್ಯನಿಂದ ಬರುವ ಬೆಳಕಿನ ಒಂದು ಭಾಗವನ್ನು ನಾವು ನೋಡಬಲ್ಲೆವು. ನಮ್ಮಕಣ್ಣುಗಳು ವಿದ್ಯುತ್ ಕಾಂತ ವರ್ಣಪಟಲದ ಒಂದು ಸೀಮಿತ ಭಾಗವನ್ನು ಮಾತ್ರ ನೋಡಬಲ್ಲವು ಆದರೆ ಸಸ್ಯಗಳು ನಮಗಿಂತಲೂ ಹೆಚ್ಚಿನ ಬೆಳಕನ್ನು ನೋಡಬಲ್ಲವು. ನಮ್ಮ ಕಣ್ಣುಕಾಣುವುದಕ್ಕಿಂತ ಹೆಚ್ಚು ಬೆಳಕನ್ನು ಅನುಭವಿಸಬಲ್ಲವು. ಇವುಗಳಿಗೆ ಕಣ್ಣುಗಳಿಲ್ಲದಿದ್ದರೂ ‘ದರ್ಶನ’ ಸಾಮರ್ಥ್ಯವನ್ನು ನೀಡುವ ವಿಶೇಷ ಪ್ರೋಟೀನುಗಳು ಗಿಡ ಮರಗಳಿಗಿರವಿತ್ತವೆ. ಇವು ವಿದ್ಯುತ್ ಕಾಂತ ವರ್ಣಪಟಲದ ಎಲ್ಲ ಬೆಳಕನ್ನು ನೋಡುತ್ತವೆ. ಪ್ರೋಟೀನುಗಳ ನೆರವಿನಿಂದ ಬೆಳಕು ಯಾವ ದಿಕ್ಕಿನಿಂದ ಬರುತ್ತದೆ. ಎಷ್ಟು ಪ್ರಮಾಣ ಮತ್ತು ಗುಣಮಟ್ಟ ಮತ್ತು ಆವರ್ತನೆ ಹೇಗಿದೆ ಇತ್ಯಾದಿಗಳನ್ನೆಲ್ಲ ಲೆಕ್ಕ ಹಾಕುತ್ತವೆ. ಅದಕ್ಕೆ ಅನುಗುಣವಾಗಿ ತಮ್ಮ ಬೆಳವಣಿಗೆಯನ್ನು ನಿಯಂತ್ರಿಸಿಕೊಳ್ಳುತ್ತವೆ. ಈ ಸಂಶೋಧನೆಯನ್ನು ರಾಕ್‌ಫೆಲರ್ ವಿಶ್ವವಿದ್ಯಾಲಯ ನಾರಿ ಹೈಚೌ ಮಾಡಿದ್ದಾರೆ. ಇಷ್ಟೇ ಅಲ್ಲದೇ ಗಿಡಮರಗಳು ಸಹ ನಮ್ಮ ಹಾಗೆ ಬೆಳಗಾದಾಗ ಎಚ್ಚರಗೊಳ್ಳುತ್ತವೆ ಎಂದು ವಿವರಿಸುತ್ತಾರೆ.

ರುಚಿ : ಗಿಡಮರಗಳಿಗೆ ಸಮತೊಲನವಾದ ಅಗತ್ಯವಾದ ರುಚಿಯ ಆಹಾರವು ಅವಶ್ಯ. ನೆಲದಲ್ಲಿ ಬೇರುಗಳ ಮೂಲಕ ಹುಡುಕಿ ಪ್ರೋಟೀನ್‌ಗಳನ್ನು ಹೀರಿಕೊಳ್ಳುತ್ತವೆ. ರೋಥಾಂಸ್ಪೆಡ್‌ನಲ್ಲಿರುವ ಇನ್ಸ್‌ಟಟ್ಯೂಟ್ ಆಫ್ ಆರಬಲ್ ಕ್ರಾಪ್ ರೀಸರ್ಚ್‌ನಲ್ಲಿ ಕೆಲಸ ಮಾಡುತ್ತಿರುವ ಬ್ರಯಾನ್‌ಫೋರ್ಡ್ ಮತ್ತು ಹಾನ್ಮಜಾಂಗ್ ಆರಾಬಿಡೋಪ್ಸಿಸ್ ಅವರು ಇವುಗಳ ಆಹಾರ ಮತ್ತು ರುಚಿಯ ಬಗೆಗೆ ಸಂಶೋಧಿಸಿದ್ದಾರೆ. ಗಿಡಗಳ ಬೆಳವಣಿಗೆಗೆ
ನೈಟ್ರೇಟುಗಳು ಮತ್ತು ಅಮೋನಿಯಂ ಲವಣಗಳು ಅಗತ್ಯ. ಇದನ್ನು ಹುಡುಕಿ ಸೇವಿಸಲು ಆರಾಬಿಟೋಪ್ಸಿಸ್ ತನ್ನ ಬೇರುಗಳನ್ನು ಎಲ್ಲಡೆ ಹರಡುವುದಿಲ್ಲ ANRI ಎಂಬ ವಂಶವಾಹಿಯ ನೈಟ್ರೇಟುಗಳಿರುವಡೆಯೇ ಬೇರುಗಳನ್ನು ಬೆಳಯವಂತೆ ಮಾಡುತ್ತದೆ. ವಿಜ್ಞಾನಿಗಳು ಈ ವಂಶವಾಹಿಯನ್ನು ನಾಶಮಾಡಿದಾಗ ಬೇರು ನೈಟ್ರೆಟು ಇದ್ದಕಡೆ ಮಾತ್ರ ಬೆಳೆಯದೇ ಎಲ್ಲೆಡೆ ಬೆಳೆದು ನೈಟ್ರೆಟುಗಳನ್ನು ಹುಡುಕುಲಾರಂಭಿಸುತ್ತದೆ. ಬೇರುಗಳ ಮೇಲ್ಮೈಯಲ್ಲಿ ಅಪೈರೇಸ್ ಎಂಬ ಕಿಣ್ವ ಇರುತ್ತದೆ. ಇವು ನೆಲದೊಳಗೆ ಶಿಲೀಂದ್ರಗಳು ಉತ್ಪಾದಿಸಿದ ಅಡಿನೋಸಿನ್ ಟ್ರೈಡಾಸ್ಪೆಂಟ್(A.T.P.) ನ್ನು ರುಚಿ ನೋಡುತ್ತವೆ. A.T.P.ಎಂಬ ರಾಸಾಯನಿಕ ವಸ್ತು ಪ್ರಕೃತಿಯಲ್ಲಿರುವ ಅಲ್ಪಾವಧಿಯ ಶಕ್ತಿ ಆಗರವಾಗಿದೆ. ಕೆಲವು ಗಿಡಗಳು ತಮ್ಮ ಎಲೆಗಳನ್ನು ತಿನ್ನುತ್ತಿರುವ ಕಂಬಳಿ ಹುಳದ ಜೊಲ್ಲಿನ ರುಚಿಯನ್ನು ನೋಡಿ ಅದು ಯಾವ ಜಾತಿಯ ಕಂಬಳಿ ಹುಳು ಎಂಬುದನ್ನು ಪತ್ತೆ ಹಚ್ಚಬಲ್ಲವು. ಅನಂತರ ಸೂಕ್ತ ಪ್ರತಿಕ್ರಿಯೆನ್ನು ತೋರಿಸಬಲ್ಲವು.

ಪ್ರಾಣ : ಗಿಡಗಳ ಎಲೆಗಳನ್ನು ಕಂಬಳಿಹುಳಗಳು ತಿಂದ ಹಾನಿ ಮಾಡುವುದು ಸಹಜ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಗಿಡಗಳು ತಮ್ಮ ಘಾರ್‍ಣ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತವೆ. ತಮಗೆ ಯಾವುದೇ ರೀತಿಯ ಪೆಟ್ಟಾದರೂ ಸರಿ ‘ಮೀಥೈಲ್-ಜಾಸ್ಮೊಟ್’ ಎಂಬ ರಾಸಾಯನಿಕ ವಸ್ತುವನ್ನು ಉತ್ಪಾದಿಸುತ್ತವೆ. ಇದು ಗಾಳಿಯಲ್ಲಿ ಹರಡುತ್ತದೆ. ಇದನ್ನು ಇತರ ಗಿಡಗಳು ಮೂಸಬಲ್ಲವು. ಅಪಾಯ ಬಂದೆರಗಿರುವುದನ್ನು ಮುಂಚಿತವಾಗಿ ತಿಳಿದು ಕೊಂಡು ಆತ್ಮರಕ್ಷಣೆಗೆ ಸಿದ್ಧವಾಗುತ್ತವೆ. ೧೯೯೦ ರಷ್ಟು ಹಿಂದೆಯೇ ವಾಶಿಂಗ್ಟನ್ ಸ್ಟೇಟ್ ವಿಶ್ವವಿದ್ಯಾಲಯದ ಬಡ್‌ರೇಯಾನ್ ಮತ್ತು ಟೆಡ್ ಟೊಮೊಟೋ ಎಂಬ ವಿಜ್ಞಾನಿಗಳು ಗಿಡಗಳ ಮೇಲೆ ಒಂದು ಪ್ರಯೋಗವನ್ನು ಮಾಡಿದರು. ಇತ್ತೀಚಿನ ಸಂಶೋಧನೆಗಳಿಂದ ಗಿಡಗಳು ಹೊಗೆಯ ವಾಸನೆಯನ್ನು ತಿಳಿಯಬಲ್ಲವು ಎಂಬ ಅಂಶವನ್ನು ಪತ್ತೇ ಹಚ್ಚಿದ್ದಾರೆ.
ನೆಲದಲ್ಲಿ ಹೂತಿರುವ ಬೀಜಗಳು ಹೊಗೆಯಲ್ಲಿರುವ ಕೆಲವು ರಾಸಾಯನಿಕ ವಸ್ತುಗಳನ್ನು ಆಘ್ರಾಣಿಸಿ ಅಂಕುರ -ವೊಡೆಯುತ್ತವೆ. ಪ್ರಕೃತಿಯಲ್ಲಿ ಇದು ಬಹಳ ಮುಖ್ಯವಾದ ಒಂದು ಪ್ರಕ್ರಿಯೆ.

ಸ್ಪರ್ಶ : ಕೀಟಾಹಾರಿ ಸಸ್ಯಗಳನ್ನು ಗಮನಿಸಿದರೆ ಸಸ್ಯಗಳಿಗೆ ಸ್ಪರ್ಶದ ಅರಿವು ಪ್ರಬಲವಾಗಿದೆ ಎಂದು ಅರ್ಥವಾಗುತ್ತದೆ. ‘ವೀನಸ್ ಪ್ಲೈ- ಟ್ರಾಪ್’ ಎಂಬ ಗಿಡದ ಎಲೆಗಳ ಮೇಲೆ ಕೀಟ ಕೂರುತ್ತಿರುವಂತೆಯೇ ಆ ಎಲೆಗಳ ಎರಡೂ ಅಂಚುಗಳು ಚಲಿಸಿ ಕೀಟವನ್ನು ಬಂಧಿಸಿ ತಿನ್ನಲಾರಂಭಿಸುತ್ತವೆ. ‘ಮುಟ್ಟಿದರೆ ಮುನಿ’, ಗಿಡವನ್ನು ನೋಡಿರಬಹುದು. ಮುಟ್ಟಿದರೆ ಮುದುಡಿಕೊಳ್ಳುತ್ತವೆ. ಬಳ್ಳಿಗಳ ಸ್ಪರ್ಶದ ಅರಿವೂ ಕೂಡ ಸೂಕ್ಷ್ಮವಾದದ್ದು ಬಟಾಣಿ ಗಿಡದ ಕುಡಿಗೆ ಸ್ವಲ್ಪ ಆಸರೆ ಸಿಕ್ಕರೆ ಸಾಕು ಕುಡಿ ಅದರೆಡೆ ಧಾವಿಸುತ್ತದೆ. ಕುಡಿಗಳಲ್ಲಿ ಸ್ಪರ್ಶದ ಅರಿವು ಸ್ವಲ್ಪ ವಿಶೇಷವಾಗಿ ಅಭಿವೃದ್ಧಿ ಹೊಂದಿದೆ. ಗಾಳಿ ಬೀಸುವುದನ್ನು ಅರಿಯುತ್ತದೆ. ಸ್ಪರ್ಶ ಸಂವೇಧನೆ ಅನುಭವಕ್ಕೆ ಬರುತ್ತಿದ್ದಂತಯೇ ಸಸ್ಯಗಳಲ್ಲಿರುವ ‘ವ್ಯಾಕ್ಯೋಲ್’ ಗಳಲ್ಲಿರುವ ಕ್ಯಾಲ್ಸಿಯಂ ಅಯಾನುಗಳು ಕೋಶರಸದೊಳಗೆ ನುಗ್ಗುತ್ತವೆ. ಟ್ರೆವಾನ್ಸ್ ಎಂಬ ವಿಜ್ಞಾನಿ ಜಿಲ್ಲೆ ಫಿಶೆಸ್‌ನಲ್ಲಿರುವ ವಂಶವಾಹಿಯೊಂದನ್ನು ಬೇರ್ಪಡಿಸಿ ಅದನ್ನು ಗಿಡಗಳ ವಂಶವಾಹಿಗಳೊಡನೆ ಜೋಡಿಸುವ ಶೋಧನೆ ನಡೆಸಿದ್ದಾರೆ.

ಶ್ರವಣ: ವರ್ಷಗಳ ಹಿಂದೆ ನಾರ್ಥೆಕೆರೋವಿನಲ್ಲಿರುವ ವೇಕ್‌ಪಾರೆಸ್ಟ್ ವಿಶ್ವವಿದ್ಯಾಲಯದ ಮೋರ್ಡೆಕ್ ಜಾಪ್ ಒಂದು ಪ್ರಯೋಗ ನಡೆಸಿದರು. ೨ ಕಿ.ಲೋ ಹರ್‍ಟ್‍ಜ಼್ ವ್ಯಾಪ್ತಿಯಲ್ಲಿರುವ ೭೦-೮೦ ಡೆಸಿಬಲ್ ಶಬ್ದಗಳನ್ನು ಕೇಳಿದ ಗಿಡ್ಡ ಬಟಾಣಿ ಗಿಡಗಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಂಡವು. ಮೂಲಂಗಿಯ ಬೀಜಗಳು ಶೇ. ೮೦-೯೦ ರಷ್ಟು ಮೊಳಕೆಯೊಡೆಯಲಾರಂಭಿಸಿದವು. ಜಾಪ್ ಅಭಿಪ್ರಾಯಯಲ್ಲಿ ಗಿಡಗಳ ತುದಿ ಬೆಳೆಯುವುದರಲ್ಲಿ ಹಾಗೂ ಬೀಜ ಅಂಕುರವೊಡೆಯುವುದರಲ್ಲಿ ಪ್ರಧಾನ ಪಾತ್ರವಹಿಸುವ ಜಿಬ್ಬರ್‌ಲಿಕ್ ಆಸಿಡ್ ಕೇಳುವ ಕ್ರಿಯೆಯಲ್ಲೂ ಭಾಗವಹಿಸುತ್ತಿರಬಹುದಂತೆ. ಜಾಫ್, ಜಿಬ್ಬರ್‌ಲಿಕ್ ಆಸಿಡ್‌ನ್ನು ರೋಧಿಸುವ ರಾಸಾಯನಿಕಗಳನ್ನು ಗಿಡಗಳ ಒಡಲೊಳಗೆ ಸೇರಿಸಿದಾಗ. ಆ ಗಿಡಗಳು ಶಬ್ದವನ್ನು ಕೇಳಿದ್ದರೂ ಕಪ್ಪಾದವು.

ಶಬ್ದ ತರಂಗಗಳು ಬಹುಶಃ ಜಿಬ್ಬರ್‌ಲಿಕ್ ಆಸಿಡ್ ಉತ್ಪಾನೆಯನ್ನು ಹೆಚ್ಚಿಸುತ್ತಿದ್ದಿರಬೇಕು. ಗಿಡಗಳ ಬಳಿ ಸಂಗೀತ ಪ್ರಯೋಗಗಳು ನಡೆದವು. ಅಂತರಾಷ್ಟ್ರೀಯ ಖ್ಯಾತ ವಿಜ್ಞಾನಿ ಬಿ.ಜಿ.ಎಲ್. ಸ್ವಾಮೀಯವರು ಸಂಗೀತ ಸಸ್ಯಗಳ ಮೇಲೆ ಪ್ರಭಾವ ಬೀರದು ಎಂದು ನಂಬಿದ್ದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರೂಣಬಲಿ
Next post ಚಿಗುರು ಮೌನ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…