ಅಧ್ಯಾಯ ೧೧ ಅರವಿಂದ ಮನೆ ತಲುಪಿದಾಗ ತಾಯಿಗೆ ಉಸಿರು ಮಾತ್ರ ಇತ್ತು. ಪ್ರಜ್ಞೆ ಇರಲಿಲ್ಲ. ಅವಳಿಗೆ ಮೇಲಿಂದ ಮೇಲೆ ಸ್ಟ್ರೋಕು ಬಡಿದಿತ್ತು. ಡಾಕ್ಟರನ್ನು ಕರೆಸಿದರೂ ಏನೂ ಉಪಯೋಗವಾಗಲಿಲ್ಲ. ಇಷ್ಟು ವಯಸ್ಸಾದ ಮೇಲೆ ಟ್ರೀಟ್‍ಮೆಂಟ್ ಕಷ್ಟ ಎಂದರು ಡಾಕ್ಟರ...

ಅಧ್ಯಾಯ ೯ ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯಕರ್ತನೊಬ್ಬ ನಾಗೂರಿಗೆ ಬಂದು ಮುಷ್ಕರದ ಕರಪತ್ರಗಳನ್ನು ಹಂಚತೊಡಗಿದ. ಓದುಬಾರದವರಿಗೆ ಓದಿ ಹೇಳುತ್ತಿದ್ದ. ಮುಂದಿನ ವಾರದಿಂದ-ಅಷ್ಟರೊಳಗಾಗಿ ಬೇಡಿಕೆಗಳ ಮಾನ್ಯವಾಗದಿದ್ದರೆ-ಎಲ್ಲ ಕಾರ್ಮಿಕರು ಮುಷ್ಕರ ಹೂಡಬ...

ಅಧ್ಯಾಯ ೭ ಮರೀನಾ ತೆಳ್ಳಗೆ ಬೆಳ್ಳಗೆ ಇದ್ದಳು. ಸೊಂಪಾಗಿ ಬೆಳೆದ ತಲೆಗೂದಲು. ಆಯಾಸಗೊಂಡ ಕಣ್ಣುಗಳು. ಮಧ್ಯಾಹ್ನ ಬಸ್ಸಿನಲ್ಲಿ ಬಂದು ಸ್ನಾನ ಊಟ ಮುಗಿಸಿ ಚಿಕ್ಕ ನಿದ್ದೆ ಮಾಡಿ ಎದ್ದಿದ್ದಳು. ಮೆಸ್ಕರೆನ್ನಾ ಒಮ್ಮೆ ಅರವಿಂದನಿಗೆ ತಮ್ಮ ಫ್ಯಾಮಿಲಿ ಆಲ್ಬ...

ಅಧ್ಯಾಯ ೫ ಕರಿಗೌಡರು ತಮ್ಮ ಈಡಿನ ಜಾಣ್ಮೆ ಬಗ್ಗೆ ಹೇಳಿಕೊಂಡುದರಲ್ಲಿ ಅತಿಶಯೋಕ್ತಿಯೇನೂ ಇರಲಿಲ್ಲ. ಸಹ್ಯಾದ್ರಿಯ ಈ ಕಡೆ ಅವರಷ್ಟು ಹೆಸರು ಹೊಂದಿದ ಬೇಟೆಗಾರರು ಇನ್ನು ಯಾರೂ ಇರಲಾರರು. ಬೇಟೆ ಅವರಿಗೆ ರಕ್ತಗತವಾಗಿ ಬಂದಂತೆ ಬಂದಿತ್ತು. ಚಿಕ್ಕಂದಿನಲ್...

ಅಧ್ಯಾಯ ೩ ಮರುದಿನ ಪಾಠಗಳು ಸುರುವಾದುವು. ಅರವಿಂದನಿಗೆ ಮೊದಲ ಪೀರಿಯಡಿಗೆ ಹತ್ತನೆ ಕ್ಲಾಸಿನಲ್ಲಿ ಇಂಡಿಯನ್ ಹಿಸ್ಟರಿ ಇತ್ತು. ಅರವಿಂದ ಜನರು ಯಾಕ ಇತಿಹಾಸ ಓದಬೇಕು ಎಂಬುದರ ಬಗ್ಗೆ ಆರಂಭಿಕವಾಗಿ ಮಾತಾಡಿದ. ಅಷ್ಟರಲ್ಲಿ ಕ್ಲಾಸು ಮುಗಿದ ಗಂಟೆಯಾಯಿತು....

ಅಧ್ಯಾಯ ೧ ನಾಗೂರು ! ನಾಗೂರು ! ಎಂದು ಕಂಡಕ್ಟರ್ ಒದರಿದಾಗ, ಬಿಸಿಲಿನ ಝಳಕ್ಕೆ ನಿದ್ದೆತೂಗುತ್ತ ಕುಳಿತಿದ್ದ ಅರವಿಂದನಿಗೆ ಒಮ್ಮೆಲೆ ಎಚ್ಚರವಾಯಿತು. ಗಡಿಬಿಡಿಯಿಂದ ಎದ್ದು ಜನರ ಎಡೆಯಲ್ಲಿ ದಾರಿ ಮಾಡಿಕೊಂಡು ಬಸ್ಸಿನಿಂದ ಹೊರಕ್ಕೆ ಧುಮುಕಿದ. ಧೂಳೆಬ್...

ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ ನೋಡುತ್ತಿರುತ್ತೇನೆ. ನನ್ನ ಲಕ್ಷ್ಯ ಎಷ್ಟೋ ಸಲ ಆ ಕಡೆಗೇ ಇರುತ್ತದೆ. ಆದರೆ ಆ ಮನೆ...

ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ ನುಸಿ, ಉಮಿಲಿ, ಕುರ...

ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ ವಾಗಿ ನಿದ್ರೆ ಗೈದಿದ್ದರು. ಬದಿಯಲ್ಲಿಯೇ Bed Lamp ತನ್ನ ಕರ್...

ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ ಸಹ ಉದ್ಯೋಗಿಗಳಿಂದ ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...