ಹನಿಗವನ ಉಮರನ ಒಸಗೆ – ೨೬ ಡಿ ವಿ ಗುಂಡಪ್ಪ July 16, 2024May 25, 2024 ಇದರಿಂದೆ ನಾಂ ಕೊರಗಿ ನಭಕೊಮ್ಮೆ ಕೈಮುಗಿದು, ಬಿದಿ ತನ್ನ ಪುಟ್ಟ ಮಕ್ಕಳ ನಡೆಯ ನಡಿಸೆ ಈ ಕತ್ತಲೆಯೊಳಾವ ಬೆಳಕನಿರಿಸಿಹನೆನಲು, "ಕುರುಡರಿವೆ"- ಎನುತಾಗಲೊರೆದುದಾಗಸವು. ***** Read More
ಹನಿಗವನ ಉಮರನ ಒಸಗೆ – ೨೫ ಡಿ ವಿ ಗುಂಡಪ್ಪ July 9, 2024May 25, 2024 ಪಿಂದೆಸೆಯ ಬಾಗಿಲಿನ ಬೀಗಕ್ಕೆ ಕೈಯಿಲ್ಲ; ಮುಂದೆಸೆಯ ತೆರೆಯೆತ್ತಿ ನೋಡಲಳವಲ್ಲ; ಈಯೆಡೆಯೊಳೆರಡುದಿನ ನೀವು ನಾವೆಂಬ ನುಡಿ ಯಾಡುವೆವು; ಬಳಿಕಿಲ್ಲ ನೀವು ನಾವುಗಳು. ***** Read More
ಹನಿಗವನ ಉಮರನ ಒಸಗೆ – ೨೪ ಡಿ ವಿ ಗುಂಡಪ್ಪ July 2, 2024May 25, 2024 ಬಿದಿಯೆನ್ನ ಕೇಳದೆಯೆ, ಎತ್ತಣಿಂದಲೊ ಬರಿಸಿ, ಮತ್ತೆನ್ನ ಕೇಳದೆತ್ತಲಿಗೊ ಕಳಿಪುವುದೆ? ಹಾ! ಒಂದು ಬಟ್ಟಲನು ತಾರಿಲ್ಲಿ ಮತ್ತೊಂದ ನದರೊಳೀ ದುರುಳತೆಯ ನೆನಪ ಮುಳುಗಿಪೆನು. ***** Read More
ಹನಿಗವನ ಉಮರನ ಒಸಗೆ – ೨೩ ಡಿ ವಿ ಗುಂಡಪ್ಪ June 25, 2024May 25, 2024 ಈ ಜಗದಿ ನಾನಿಹುದದೇತಕೋ ತಿಳಿಯದಿಹೆ ನೆಲ್ಲಿಂದ ಬಂದೆನೆಲ್ಲಿಗೆ ಪೋಪೆನೆನುತ ಬಗೆದು ಪೇಳ್ವವರಿಲ್ಲ; ಬರಿಯ ಮಾತಿಂದೇನು! ಮಳೆಯವೋಲಿಳಿದಿಹೆನು; ಹಬೆಯವೊಲ್ ಪರಿವೆಂ. ***** Read More
ಹನಿಗವನ ಉಮರನ ಒಸಗೆ – ೨೨ ಡಿ ವಿ ಗುಂಡಪ್ಪ June 18, 2024May 25, 2024 ಇಷ್ಟಪೂರ್ತಿಯನರಿತ ಮೊಗದೆಸಕಮದೆ ನಾಕ; ಕಷ್ಟವೆಂದಳುವವನ ನೆಳಲದುವೆ ನರಕ. ಕತ್ತಲೆಯಿನಿತ್ತಲೆಲ್ಲರು ಹೊರಟು ಬಂದಿಹೆವು; ಅತ್ತಲೇ ಸೇರುವೆವು ಮಗುಳಿತ್ತಣಿಂದೆ. ***** Read More
ಹನಿಗವನ ಉಮರನ ಒಸಗೆ – ೨೧ ಡಿ ವಿ ಗುಂಡಪ್ಪ June 11, 2024May 25, 2024 ಬಳಿಕ ನಾಂ ಜೀವನನದೃಶ್ಯಲೋಕಕೆ ಕಳುಪಿ ಮುಂದೆ ಗತಿಯೇನೆಂದು ತಿಳಿದು ಬಾರೆನಲು, ತಿರುಗಿಬಂದಾಜೀವವೆನಗುಸಿರಿತೀ ತೆರದಿ: "ನಾಕ ನರಕಗಳೆರಡುಮಾನಲ್ಲದಾರು?" ***** Read More
ಹನಿಗವನ ಉಮರನ ಒಸಗೆ – ೨೦ ಡಿ ವಿ ಗುಂಡಪ್ಪ June 4, 2024May 25, 2024 ಬಾಲ್ಯದಲಿ ತಾರ್ಕಿಕರ ತಾತ್ವಿಕರ ಸಭೆಗಳಿಗೆ ಆದರದೊಳಾಂ ಸಾರಿ ವಾದಗಳ ಕೇಳಿ, ಕಾದಾಟಕೆತ್ತ ಕೊನೆಯೆಂದು ಕಾಣದೆಯಿರಲು ಪೋದ ದಾರಿಯೊಳೆ ನಡೆಯುತ ಮರಳಿ ಬಂದೆಂ. ***** Read More
ಹನಿಗವನ ಉಮರನ ಒಸಗೆ – ೧೯ ಡಿ ವಿ ಗುಂಡಪ್ಪ May 28, 2024March 31, 2024 ಮುದಿ ಉಮ್ಮರನ ಕೂಡೆ ನಡೆ; ಪಂಡಿತರನ್ನೆಲ್ಲ ವಾದಿಸಲು ಬಿಡು; ದಿಟವಿದೊಂದಿಹುದು ಕೇಳು: ಬಾಳು ಅಳಿವುದೆ ದಿಟವು; ಮಿಕ್ಕೆಲ್ಲ ಸಟೆಯೆ ಸರಿ; ಒಮ್ಮೆ ಅರಳಿದ ಹೂವು ಬಾಡುವುದೆ ದಿಟವು. ***** Read More
ಹನಿಗವನ ಉಮರನ ಒಸಗೆ – ೧೮ ಡಿ ವಿ ಗುಂಡಪ್ಪ May 21, 2024March 31, 2024 ಪಂಡಿತರು ಶಾಸ್ತ್ರಿಗಳು ಸೂಕ್ಷ್ಮ ಚತುರತೆಯಿಂದೆ ಚರ್ಚಿಸಿಹರುಭಯಲೋಕಗಳ ಮರುಮಗಳ; ಅವರ ಪಾಡೇನಾಯ್ತು? ಉಳಿದರಂತವರೆಲ್ಲ, ಮಣ್ಣು ಬಾಯನು ಮುಚ್ಚೆ, ಸೋತು ಮಲಗಿದರು. ***** Read More
ಹನಿಗವನ ಉಮರನ ಒಸಗೆ – ೧೭ ಡಿ ವಿ ಗುಂಡಪ್ಪ May 14, 2024March 31, 2024 ಇಂದಿಗೆಂದಾಯಾಸಪಡುವಂಗಮಂತಿರದೆ ನಾಳೆಯಿನ್ನೇನೆಂದು ಕೇಳ್ವಂಗಮಿಂತು ಕತ್ತಲೆಯ ಗೋಪುರದ ಗುರು ಸಾರ್ವನ್ : "ಎಲೆ ಮರುಳೆ! ಇರದು ಸೊಗಮಿತ್ತ, ನಿನಗಿರದದತ್ತಾನುಂ." ***** Read More