ಕಂಬನಿ

ಅಲ್ಲೋಲಕಲ್ಲೋಲವಾದ ಸಾಗರದಲ್ಲು ನಾನು ಸಾಗರಬಿದ್ದು ಸಾಗಬಲ್ಲೆ. ಹಾಳು ಹಂಪೆಯ ಮಣ್ಣಿನಂಥ ಕಣ್‌ಗಳ ಕಂಡು, ನನ್ನ ಚೈತನ್ಯವೂ ನಿಂತ ಕಲ್ಲೆ! ಸಿಡಿಲ ಸೈರಿಸುವೆ, ಕಂಬನಿಯ ಸೈರಿಸಲಾರೆ, ನಂಜುಂಡ ಶಿವ ನುಂಗದಂಥ ನಂಜು; ಭವಭವಾಂತರದಲ್ಲಿ ತೊಳಲಾಡಿಸುತ್ತಿರುವ ಆ...

ರೋದನ

ಹಣ್ಣೆಲೆಯು ಹಾರುತಿರೆ, ನೀರಿನುಗೆಯಾಗುತಿರೆ ದಿನದ ಬಿಸಿಲಿಗೆ ಹೂವು ಬಾಡುತಿರಲು, ಮೈಗರೆದು ಮಿಡುಕುತಿದೆ ಮೂಕ ಶೋಕವು, ಸೃಷ್ಟಿ ಕೋಗಿಲೆಯ ಕೊರಳಿನಲಿ ಹಾಡುತಿರಲು. ಮನದ ಮಗಳಾದ ನುಡಿ ಹುರುಳಿನಲಿ ನರಳುತಿದೆ. ಹಾಡು ನೆಲೆಗಾಣದಲೆ ನವೆಯುತಿಹುದು. ಬಾಳಸಿರಿ ಎಂದಿತ್ತ...

ದಬ್ಬಾಳಿಕೆಗೆ – ೨

ಯಜ್ಞಕುಂಡದ ಹಾಗೆ ಹಗಲಿರುಳು ಹೊತ್ತುತಿಹ ತಪಸಿಗಳ ಎದೆಯ ವೇದಿಕೆಯ ತುಳಿದು, ಜ್ಞಾನಶಕ್ತಿಗೆ ಇಟ್ಟ ನಿತ್ಯನಂದಾದೀಪ- ದಂದ ಮಿದುಳಿನ ತಲೆಗಳನ್ನು ಮುಟ್ಟಿ, ಸತ್ಯವೀರರ ನಿತ್ಯ ಶುದ್ಧ ನಾಲಗೆಯಿಂದ ಬಂದುಸಿರ ಕಣೆಗಳಿಗೆ ಬೆನ್ನುಗೊಟ್ಟು, ಪ್ರೀತಿವಾತ್ಸಲ್ಯಕ್ಕೆ ಅಭಿಷೇಕ ಗೈಯುತಿಹ...

ದಬ್ಬಾಳಿಕೆಗೆ – ೧

ನೆತ್ತಿಗೇರಿದ ಕಣ್ಣ ಕುರುಡು ದಬ್ಬಾಳಿಕೆಯೆ! ಪೊಳ್ಳು ಬಿಂಕದ ಮೂಗ ಮೇಲೆಮಾಡಿ, ಹಿಂಬರಿಕೆಯಡಿಯಲ್ಲಿ ಸಿಕ್ಕು ತೊತ್ತಳಿಗೊಂಡು ಸಾವವರ ನರಳಿಕೆಯ ಕಿವುಡಗೇಳಿ, ಇಲ್ಲಿಯೂ ಅಲ್ಲಿಯ ಕೊನೆಗಾಣದಾಸೆಗಳ ಅಂತರ ಪಿಶಾಚಿಯೇ! ತಣಿಸಲೆಳಸಿ ರಕ್ಷಕನು ಎಂದು ತಿಳಕೊಂಡ ರಾಕ್ಷಸನು ನೀನು,...

ಮೈತಳೆದ ಕರುಣೆ

ಮೈತಳೆದ ಕರುಣೆ ಮೈಮರೆತು ಕುಳಿತಿದೆ ನೋಡು ಯೋಚನೆಯ ಯೋಜನೆಯ ಕುರಿತು ಬೆರೆತು. ಜಗದ ಉದ್ಧಾರಕ್ಕೆ ಜಗಕೆ ಅವತರಿಸಿಹುದು ನೊಗ ಹೊತ್ತ ರೀತಿಯಿದು ಜಗಕೆ ಹೊರತು. ಇದುವೆ ಮುಕ್ತಾಸನವೊ? ಏನು ಯುಕ್ತಾಸನವೊ? ಕೂಡಿಹವು ಚಿಂತೆ ಚಿಂತನಗಳಿಲ್ಲಿ...

ಆದಿಕವಿ

ಕೊಕ್ಕಿನಲಿ ಕೊಕ್ಕು, ರೆಕ್ಕೆಗೆ ರೆಕ್ಕೆ, ನೋಟದಲಿ ನೋಟ ಹುದುಗೊಳಿಸಿರುವ ಹಕ್ಕಿಯೆರಡು- ಎಲೆ ಚವರ ಬೀಸೆ, ಹೂಗಂಪು ಸಲೆ ಸೂಸೆ, ಎಲ - ರೂದೆ, ಬೆಳಕಾಡೆ- ಹೊರ ಜಗವ ಮರೆದು ಕೂಡಿರಲು, ಬೇಡನೊಡ ನೋಡಿರಲು, ಗುರಿಯಿಡುತ...

ಸಾಹಿತ್ಯ-ಕೇಳಿ

ತಂತಾನೆ ತಣಿವಿನಲ್ಲಿದ್ದ ತಲ್ಲೀನತೆಯು ನಿದ್ದೆ ತಿಳಿದೆದ್ದಾಗ ಎನಿತೆನಿತು ಶಾಂತಿ! ಬಾಯಿಲ್ಲದನುಭವದ ನೆನವೆ ನನೆಕೊನೆಹೋಗಿ ಕನಸೇ ನನಸಾಗಿರಲದೆಂಥ ನವ ಕಾಂತಿ! ಆಟವೇ ಹಿಗ್ಗು? ಒಡನಾಟವೇ ಹಿರಿ ಹಿಗ್ಗು ನೋಟದ ವಿಲಾಸವೇ ಗುಡಿಕಟ್ಟಿದಂತಿದೆ. ಒಂದು ಹಿಗ್ಗಿನ ಪಲ್ಲ,...

ಒಲವೆಂಬ ಹೊತ್ತಿಗೆ

ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ! ಹಗಲಿರುಳು ದುಡಿದರೂ, ಹಲಜನುಮ ಕಳೆದರೂ ನೀ ತೆತ್ತಲಾರೆ ಬರಿ ಅಂಚೆವೆಚ್ಚ. ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು ನೆತ್ತರದಿ ಬರೆದುದಕೆ ಲೆಕ್ಕವಿಲ್ಲ. ಚಿತ್ರ...

ಗೃಹಿಣಿ

ಏಳು ಮೆಟ್ಟಿನ ಹುಲಿಯ ಬೀರ ಬೇಂಟೆಯ ಬಿಡಿಸಿ ಮಗುವ ಮುದ್ದಾಡುವೊಲು ಮಾಡಿದಾಕೆ. ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ ತಾನೆ ತನ್ನಷ್ಟಕ್ಕೆ ಹಾಡಿದಾಕೆ. ತಳಿರಿನುಡುಗೆಯನುಟ್ಟು ಗರಿತೊಡುವುಗಳ ತೊಟ್ಟು ಅಡವಿಯಲಿ ಹೂದೋಟ ಹೂಡಿದಾಕೆ. ಗಿಡಕೆ ಗುಡಿಯನು ಕಟ್ಟಿ,...

ಅದೃಷ್ಟ

ಕಣ್ಣ ಕಾಣ್ಕೆಯ ಮೀರಿ, ಕಣ್ಣ ಕಟ್ಟಿದ ರೂಹೆ! ಬಣ್ಣನೆಯ ಬಣ್ಣಕೂ ಸಿಗದೆ ನೀನು; ಹುಟ್ಟುಕಟ್ಟನು ಹರಿದು, ಹಾರುತಿರುವೀ ಊಹೆ, ಬರೆಯಲಿಕೆ ನಿನ್ನನ್ನೆ ಹವಣಿಸುವದೇನು? ಲಹರಿಗೂ ತರಲ, ನೀ ನೆರಳಿಗೂ ವಿರಲ, ಸುಳಿ- ಯೆಲರಿಗೂ ಚಂಚಲನು...