
ನೀನು ಎಲ್ಲೋ ನಿಂತು ನನ್ನ ನೆನಪು ಮುಡಿದಾಗ ನಾನು ನಿರಾಳ. ಇಲ್ಲೇ ಜೊತೆಯಲ್ಲೇ ಕುಂತು ಮಾತು ತೊರೆದಾಗ ಬದುಕು ಕರಾಳ. *****...
ದಿನದ ಕಡೆಯ ಎಚ್ಚರ ಆಲಿಸುವ ನೀರವತೆಯ ಇಂಚರ ನಿನ್ನ ಸ್ವರದಷ್ಟೇ ಮಧುರ *****...
ಮಾತು ಕಲಿಸಲು ಬಂದ ನೀನು ಮೌನವಾಗಬಾರದಿತ್ತು. ಮಾತು ಕಲಿತ ನಾನು ಮೌನ ತೊರೆಯಬಾರದಿತ್ತು. *****...
ನಿರೀಕ್ಷೆಯ ನಶೆ ಏರಿಸಿಕೊಂಡು ನಲಿಯುವ ಮನದ ಚಾಳಿ ನಿನ್ನದೇ ಬಳುವಳಿ *****...
ಕದ್ದು ನೋಡುವುದು ಖುದ್ದು ನೋಡುವುದು ಇವೆರಡರಲ್ಲಿ ನಿನಗ್ಯಾವುದಿಷ್ಟವೆಂದು ಕೇಳುವುದು ನನಗೆ ಇಷ್ಟವಾಗುವ ಕಷ್ಟ *****...
ಸುಡುವ ನೀರವತೆಗೆ ನಿನ್ನದೇ ಚಾಳಿ. ಸ್ರವಿಸುವುದು ವಿರಹವೆಂಬ ಬಿಸಿಗಾಳಿ. *****...
ದೌರ್ಬಲ್ಯಗಳ ಉಗ್ರಾಣ ನಾನು. ನಿವಾರಣಾ ತಾಣ ನೀನು. *****...
ನಿನ್ನ ನಗು ನುಡಿಯುತ್ತಿದೆ ಮುನಿಸಿನ ಸಾವಿನ ಸಮಾಚಾರ! *****...
ಹುಮ್ಮಸ್ಸು ಹುಟ್ಟಲು ಜೀವಸೆಲೆ ಹೊತ್ತ ಬಸ್ಸು ಬರ್ರೆಂದು ಮನದ ನಿಲ್ದಾಣದಲ್ಲಿ ಬಂದು ನಿಲ್ಲಲು ಅವಳ ನೆನಪೊಂದು ಸಾಕು *****...








