
ಅವಳ ಕಣ್ಣಹನಿ ಬರಿದಾಗಿರುವ ಅವನ ಪ್ರೀತಿಯ ಒರತೆ ತುಂಬುವ ಕನಸು ಕಟ್ಟುತ್ತಿದೆ *****...
ನಿನ್ನ ಅಚ್ಚಿಕೊಂಡಷ್ಟೂ ಹತ್ತಿರಾಗುವ ಹುಚ್ಚುತನ ಎಚ್ಚರಿಸುತ್ತದೆ ‘ಸ್ವಲ್ಪ ಜೋಪಾನ’! *****...
ಮೌನ ಮಾತಿಗಿಳಿದಿತ್ತು ಅವಳ ಕಣ್ಣೋಟದ ರೂಪ ಧರಿಸಿತ್ತು *****...
ಅವಳ ಗಮನಸೆಳೆಯಲು ಹೊರಟ ಆ ಕ್ಷಣದ ಆಸೆಗೆ ವಾಸ್ತವ ಬಿಗಿಯುವ ಭಾಷಣ ಅರ್ಥವಾಗದು *****...
ನಾನು ಮೋಹಿಸುವ ಮೌನಕ್ಕೆ ಅವಳ ಮಾತಿನ ಮೇಲೊಂದಿಷ್ಟು ಮೋಹ *****...
ಮೂಲೆಗೆಸೆದ ಅವಳ ನೆನಪು ಮಧ್ಯರಾತ್ರಿ ಮಡಿಲು ಸೇರಿತು *****...
ಸುಮ್ಮನೆ ನಿಂತಿದ್ದ ನೆನಪಿಗೆ ಚಲನೆ ಕರುಣಿಸಿದ ಅವಳ ನಗೆಗೆ ನಾಲ್ಕು ತದುಕುವ ಸಲುವಾಗಿ ಮುಖ ಸಿಂಡರಿಸಿಕೊಂಡ ನನಗೆ ನನ್ನದೇ ಮುಖಭಂಗದ ಮುಖ ನೋಡುವ ಸದಾವಕಾಶ ಒಲಿಯಿತು *****...
ರೆಕ್ಕೆ ಪುಕ್ಕ ಕಳಚಿಕೊಂಡ ಹಕ್ಕಿಯ ಮೈಬಣ್ಣ ಕಂಡು ಪುಳಕಗೊಂಡವನು ನಾನು *****...
ಅವಳು ಮನದ ಗುಡಿಯಲ್ಲಿ ಕುಳಿತು ಮತ್ತೆ ಹಾಡಿದಳು. ಹಾಡು ಅರಿಯದ ನಾನು ವಾಸ್ತವದ ಗೂಡು ಸೇರಿಕೊಂಡು ಕನಸು ನುಂಗಿಕೊಂಡೆ. *****...
ಅವಳ ಕಂಗೆಟ್ಟ ಕಂಗಳಲಿ ನಲಿವಿನ ಚಹರೆ ಅರಸುವ ಅವನು ಆಶಾವಾದಿ *****...








