
ನೀ ಎದುರು ಸಿಕ್ಕಾಗ ಸುಮ್ಮನೆ ನಕ್ಕಾಗ ಏರಿದ ಎದೆಬಡಿತ ಬೋಧಿಸಿತು ಪ್ರೀತಿಯ ರೇಖಾಗಣಿತ *****...
ಜಗದ ಪಾಲಿನ ಜಾಣ ನಿನ್ನ ಎದುರು ಕೋಣನಾಗಿ ತಲೆ ಬಾಗಿಸಿದ್ದು ನಟನೆ ಅಲ್ಲವೆಂಬ ಸತ್ಯ ನಿನಗೆ ಅರಿವಾಗಿದ್ದಿದ್ದರೆ ದಡ್ಡತನದ ಮೂಲ ತಲುಪಬಹುದಿತ್ತು *****...
ನನ್ನವೇ ಆದ ತಿಕ್ಕಲು ಕನವರಿಕೆಗಳು ಈಗ ನನಗೂ ಬೇಡವಾಗಿವೆ ಅವಳಿಗೆ ನಾನು ಬೇಡವಾದಂತೆ *****...
ನನ್ನ ಅಳುವ ಪರವಾನಗಿ ಕಸಿದುಕೊಂಡು ಹೋದ ಅವಳ ನಗೆಗೆ ಕಣ್ಣೀರು ಹಿಡಿಶಾಪ ಹಾಕುತ್ತಿದೆ *****...
ಇಳಿಯಬೇಕಿತ್ತು ನಾನು ನನ್ನವಳ ಒಳಗೆ ಜೀವ ದೇಹದೊಳಗೆ ಇಳಿದಂತೆ. *****...
ಹತ್ತಿರ ಸುಳಿಯದವಳು ಭ್ರಮೆಯ ಗುಡಿಯ ದೇವತೆ ಜೊತೆ ಬಂದವಳು ಒಲುಮೆಯ ಬೆಳಕು ಬೀರಿ ನಂದಿ ಹೋದ ನತದೃಷ್ಟ ಹಣತೆ *****...
ಮನದ ಮನೆ ಸಿಂಗರಿಸಿದ ಅವಳ ಮಾತಿನ ಅನುಪಸ್ಥಿತಿ ಮೌನದ ಮಿತಿ ಬಣ್ಣಿಸುತ್ತಿದೆ *****...
ಮುಗಿಲೆತ್ತರಕ್ಕೆ ಬೆಳೆದು ನಿಂತ ಅವಳ ಮಡಿಲಲ್ಲಿ ಬೊಗಸೆಯಷ್ಟು ಬೆಳದಿಂಗಳು ಹಾಗೆ ಇದೆ *****...
ನೀತಿ ಹಿಸುಕದ ಭೀತಿ ಹೊಸುಕದ ಪ್ರೀತಿ ಪ್ರೀತಿಯಲ್ಲ; ಪಜೀತಿ. *****...








