ಸೀಟು

ಪಾಪು ಅಮ್ಮನಿಗೆ ಹೇಳಿತು. "ಮೊಮ್ಮಿ ನಿನ್ನ ನೀನಿಲ್ಲದಿರುವಾಗ ಪಕ್ಕದ ಮನೆ ಆಂಟಿಗೆ ನಾನು ನನ್ನ ಸೀಟು ಬಿಟ್ಟು ಕೊಟ್ಟೆ." ಅಮ್ಮ ಹೇಳಿದ್ಲು "ಜಾಣ ಮರಿ ದೊಡ್ಡವರು ಬಂದಾಗ ನಾವು ನಮ್ಮ ಸೀಟು ಬಿಟ್ಟು ಕೊಡಬೇಕು....

ನೆಂಟರು

ಮನೆ ಎದುರು ಕತ್ತೆ ಕೂಗುವುದನ್ನು ಕೇಳಿದ ಗಂಡ ಹೇಳಿದನು. "ನೋಡಿ ನಿನ್ನ ನೆಂಟರು ಯಾರೋ ಕರೆಯುತ್ತಿದ್ದರು." ಹೆಂಡತಿ ಹೇಳಿದ್ಲು. "ಅವರ ನೆಂಟಸ್ಥಿತೆಯಾಗಿದ್ದು ನನ್ನ ಮದುವೆಯಾದ ನಂತರವೇ?" *****

ತಲೆಗಿಂತ

ನ್ಯಾಯಾಲಯದಲ್ಲಿ ದಡಿಯಲಾಯರ್ ಕುಳ್ಳಗಿನ ಲಾಯರ್‌ಗೆ ಹೇಳಿದ "ಜಾಸ್ತಿ ಮಾತಾಡಿದರೆ ನಿನ್ನನ್ನು ನನ್ನ ಜೇಬಿನಲ್ಲಿ ಹಾಕಿಕೊಳ್ಳುವೆ." ಆಗ ಕುಳ್ಳಗಿನ ಲಾಯರ್ ಹೇಳಿದ "ಆಗ ನನ್ನ ತಲೆಗಿಂತ ಜೇಬಿನಲ್ಲಿ ಜಾಸ್ತಿ ಬುದ್ಧಿ ಇರುತ್ತೆ..." *****

ಪರಿಚಯ

ಕೋರ್‍ಟಿನಲ್ಲಿ ವಾದ ನಡೆಯುತ್ತಿತ್ತು. ಲಾಯರ್ ೧: "ನೀನೊಬ್ಬ ಕತ್ತೆ" ಲಾಯರ್ ೨: "ನೀನು ನಾಯಿ" ಆಗ ನ್ಯಾಯಾಧೀಶರು ಹೇಳಿದರು. "ವಕೀಲರ ಪರಸ್ಪರ ಪರಿಚಯವು ಆಗಿದೆ. ಇನ್ನೂ ವಾದ ಮುಂದುವರಿಸಬಹುದು." *****

ನೀವೇ ಹೇಳಿದ್ರಾ

ಗುಂಡ ಪರೀಕ್ಷೆಗೆ ಹೋದ ಹತ್ತೇ ನಿಮಿಷಕ್ಕೆ ಮನೆಗೆ ವಾಪಸ್ಸು ಬಂದನು. ಅಪ್ಪ ಕೇಳಿದ. "ಯಾಕೆ ಇಷ್ಟು ಬೇಗ ಬಂದಿರುವೆ?" "ನೀವೇ ಹೇಳಿದ್ರಲ್ಲಾ. ಪರೀಕ್ಷೆಯಲ್ಲಿ ನೀನೇ ಮೊದಲು ಬರಬೇಕು." *****

ಭಾವ

ಗುಂಡ ಕಾಲೇಜಿಗೆ ಬಂದ ಹೊಸ ಹುಡುಗಿಯನ್ನು ಕೇಳಿದ. "ನಿನ್ನ ಹೆಸರೇನು?" "ನನ್ನ ಫ್ರೆಂಡ್ಸೆಲ್ಲ ನನ್ನನ್ನು ‘ಅಕ್ಕ’ ಅನ್ನುತ್ತಾರೆ?" ಆಗ ಗುಂಡ ಹೇಳಿದ "ಎಂಥಹ ಸಂಬಂಧ ನೋಡಿ, ನನ್ನ ಗೆಳೆಯರು ನನ್ನನ್ನು ‘ಭಾವ’ ಅನ್ನುತ್ತಾರೆ." *****

ರೇಡಿಯೋ

ಗುಂಡ ಪಾಪುಗೆ ಹೇಳಿದ. "ನೀನು ಯಾಕೆ ರೇಡಿಯೋದಲ್ಲಿ ಹಾಡು ಹೇಳಬಾರದು" ಪಾಮು :- "ಅಂಕಲ್ ನನ್ನ ಅಷ್ಟು ಚನ್ನಾಗಿ ಹಾಡು ಹೇಳಿನಾ?" ಗುಂಡ :- "ಇಲ್ಲ ಬೇಡವೆನಿಸಿದರೆ ಆಫ್ ಮಾಡಬಹುದಲ್ಲ..... ಅದಕ್ಕೆ" *****

ಲೈಟು

ತಿಮ್ಮ ಕರೆಂಟು ಕಂಬದ ಕೆಳಗೆ ಏನೋ ಹುಡುಕುತ್ತಿದ್ದ. ಅಲ್ಲಿಗೆ ಬಂದವರೊಬ್ಬರು ಕೇಳಿದ್ರು, "ಏನು ಹುಡುಕುತ್ತಾ ಇದ್ದೀರಾ...?" "ಹಿಂದಿನ ಲೈಟ್ ಕಂಬದ ಹತ್ತಿರ ನನ್ನ ಉಂಗುರ ಕಳೆದು ಹೋಗಿತ್ತು." "ಅದನ್ನು ಅಲ್ಲೇ ಹುಡುಕಬೇಕಾಗಿತ್ತು." ಆಗ ತಿಮ್ಮ...

ಪ್ರೆಸ್ ಹೆಸರು ಹೇಳಿ

ಮಾಸ್ಟ್ರು ಮಕ್ಕಳಿಗೆ ಹೇಳಿದ್ದು "ಪರೀಕ್ಷೆ ಹತ್ತಿರ ಬರುತ್ತಿದೆ. ನಿಮಗೆ ಯಾವುದೇ ಡೌಟ್ ಇದ್ದರೆ ಕೇಳಿ." ಆಗ ತಿಮ್ಮ ಹೇಳಿದನು "ಸಾರ್, ಪ್ರಶ್ನೆ ಪತ್ರಿಕೆ ಯಾವ ಪ್ರೆಸ್‌ನಲ್ಲಿ ಪ್ರಿಂಟ್ ಮಾಡಿಸ್ತಿರಾ?" *****