Home / Kavana

Browsing Tag: Kavana

ನಾಚಿಕೆಯೆ ಹೀಗೇಕೆ ಹಗೆಯಾಯಿತು ನನ್ನ ಉರಿಸುವ ಕ್ರೂರ ಧಗೆಯಾಯಿತು? ಹರಿಯು ತಬ್ಬಿದ್ದಾಗ ಅವನ ಚೆಲುವ ನೋಡುತ್ತ ಬೆರಗಾಗಿ ಮೂಕಳಾದೆ ನಿನ್ನ ಜೊತೆ ಮಧುರೆಗೆ ನಾನು ಕೂಡ ಬರುವೆ ಎಂದೇಕೆ ನಾ ಹೇಳದಾದೆ? ಏನು ನಿಷ್ಕರುಣಿ ಆ ಕಂಸದೂತ! ಅಕ್ರೂರನಲ್ಲ ಅವ ಕ್ರ...

ಆಕಾಶದಲ್ಲಿ ಏರ್‍ ಕಂಡಿಶನ್ ಬಾಕ್ಸ್ ಚಂದ್ರ ಇಡೀ ರಾತ್ರಿ ದೇಶಕ್ಕೆಲ್ಲಾ ತಂಪುಸುರಿಸಿ ಮರೆಸುವನು ಕೃತಕ ಏ.ಸಿ, ಫ್ಯಾನ್ ಗಾಳಿ *****...

ಕಲ್ಲು ತಂದು ರೂಪುಮಾಡಿ ದೇವನೆಂದು ಕರೆದು ನಿನ್ನ ಎಲ್ಲ ಜಗದ ಒಡೆಯನಾಗಿ ಕಾವುದೆಂದೆನು. ಮೆಯ್ಯ ತೊಳೆದು ಹಾಲನೆರೆದು ಹೂವು ಮುಡಿಸಿ ಗಂಧವಿಕ್ಕಿ ತುಯ್ಯಲಿಟ್ಟು ದೀಪವಿಟ್ಟು “ದೇವ” ಎಂದೆನು. ನಾನು ಮಾಡೆ ನೀನು ಆದೆ ನಾನು ಕಟ್ಟೆ ನಿನಗೆ...

ಕವಿತೆಯಂದರೇನು? ಕಣ್ಣು, ಕಿವಿ, ಮೂಗು, ಅಗಲವಾದ ಬಾಯಿ! ಮುವತ್ತೆರಡು ಹಲ್ಲು, ಬರೀ ನಾಲಗೆಯಲ್ಲ! ಸುಗಂಧ, ಪರಿಮಳ ದ್ರವ್ಯ! ಮುತ್ತು, ರತ್ನ, ವಜ್ರ, ವೈಢೂರ್‍ಯದಂತೆ! ಕಾಮನ ಬಿಲ್ಲಿನ ಸೊಬಗಿನಂತೆ! ೨ ಕವಿತೆಯೆಂದರೇನು? ಕೈ, ಕಾಲು ಸಣ್ಣ, ಹೊಟ್ಟೆ ಡುಬ...

ಶ್ಯಾಮ ಕೊನೆಗೂ ನನ್ನ ಮನೆಗೆ ಬಂದ ನನ್ನೆಲ್ಲ ಕೊರಗಿಗೂ ಕೊನೆಯ ತಂದ. ಹರಿಯ ತಲೆಮೇಲಿತ್ತು ನವಿಲಿನ ಕಿರೀಟ ಹೊಳೆವ ಪೀತಾಂಬರ ಮೈಯ ಮೇಲೆ, ಕಾಂತಿ ಚಿಮ್ಮುವ ಕರ್ಣಕುಂಡಲ ಕಿವಿಯಲ್ಲಿ ಕಸ್ತೂರಿ ತಿಲಕ ಹಣೆಯ ಮೇಲೆ ರಾಧೆ ನಾ ನಾಚಿದೆ ಕರಗಿ ನೀರಾದೆ ನಲ್ಲ ತ...

ಮರದ ನೆಳಲ ತಂಪಿನಲ್ಲಿ ಮೆಲ್ಲ ಮೆಲ್ಲನೇರುತಾ ಗಿರಿಯ ಕಳೆದು ಸಂಜೆಯಲ್ಲಿ ಕಚನ ಮನದಿ ಬಯಸುತಾ ನಡೆದಳವಳು ದೇವಯಾನಿ ಪ್ರಣಯ ಭರದಿ ಕುಗ್ಗುತಾ ಬಿನದ ಬನದ ನಡುವೆ ನಿಂದು ಕಣ್ಣನೀರು ಸುರಿಸುತಾ ಸಂಜೆಗೆಂಪ ತಳಿರುಗೆಂಪ ತುಟಿಯ ಕೆಂಪು ಮೀರಲು ಅಲರ ಕಂಸ ಎಲರ ...

ಸತ್ತ ದನವ ತಿಂದೂ ತಿಂದೂ ನಾವಿನ್ನೂ ಸತ್ತಿಲ್ಲವಲ್ಲ ಯಾಕೆ? ಯುಗಯುಗಗಳಿಂದಾ ಪಾಂಡವರಂತೇ… ಹಗೆಗಳಾಗಿ, ಬದುಕಿದ್ದೇವೆಲ್ಲ ಯಾಕೆ? * ಹೊಲೆಗೇರಿಲಿದ್ದು, ಯುಗಯುಗಗಳಿಂದಾ ಸತ್ತ ದನವೇ ನಮಗಾಯಿತಲ್ಲ ಯಾಕೆ? ಕರೆಬಾನಿಲಿ ಮುಳುಗೆದ್ದರೂ, ಇವ್ರಿನ್ನು...

ಹೇಗೆ ಹೇಳಲೇ ಗೆಳತಿ ದಿನವಿಡಿ ಹರಿಯದೇ ಧ್ಯಾನ, ಈ ಕಳ್ಳನ ಮಾಯೆಗೆ ಸಿಕ್ಕಿ ಕಳೆದುಕೊಂಡೆನೇ ಮಾನ ಇವನಿಗೆ ಕಾದೂ ಕಾದೂ ಮೈಯೆಲ್ಲಾ ಬಿಸಿ ಬಾಣಲೆ ಬತ್ತ ಸಿಡಿಸಿದರು ಸಾಕು ಅರಳಾಗುವುದೇ ಕೂಡಲೆ ಹೇಳದೆ ಬಂದೇ ಬಿಡುವ ಕರೆದರೂ ಬಾರದ ಹುಡುಗ, ಮರುಳು ಮಾಡಿಯೇ...

ಮಟ್ಮಾಟಾ ಮಧ್ಯಾನ್ದತ್ತು….ವುರ್ರೀರ್ರೀ….ಬಿಸ್ಲು. ನೆಲ್ದ್ಮೇಲೆ ಕೆಂಡಾರ್ವಿದಂಗೆ. ವುಗಾದಿಯ ಬಿಸ್ಲೆಂದ್ರೆ….ಅದ್ರಲ್ಲಿ…. ಬಳ್ಳಾರಿ ಬಿಸ್ಲೆಂದ್ರೆ…. ಯೇಳ್ದೇ ಬ್ಯಾಡಾ! ಸಿವ್ನ ಮೂರ್ನೇ ಕಣ್ಣು ಬಿಟ್ಟಂಗೇ&#8230...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...