
ಅವಳು ಅಡ್ಡ ಮಳೆಯಂತೆ ಸುರಿದು ಸಂಶಯದ ರಾಡಿ ಸೆಳೆದುಕೊಂಡು ಸರಿದಳು *****...
ನಿನ್ನ ನೆವದಲ್ಲೊಂದು ನೋವ ಸುಡುವ ಕಿಚ್ಚಿದೆ. ಅದು ನಲಿವ ಹಣತೆ ಹಚ್ಚಿದೆ. *****...
ನಿನ್ನ ನಗೆಯಲ್ಲೊಂದು ಜೀವಂತ ನೋವಿನ ಚಹರೆ ಇರಬಹುದೇ? *****...
ಒಲವು ತೆರವಾದ ಮನದ ಮನೆಯ ಪಾಡು ಲಯ ತಪ್ಪಿದ ಹಕ್ಕಿಯ ಹಾಡು *****...
ಮುಂಜಾನೆ ಕವಿದ ದಟ್ಟ ಮಂಜು ಕಣ್ಣೆದುರಿಗಿದ್ದ ಅವಳನ್ನೂ ತನ್ನೊಡಲಲ್ಲಿ ಅಡಗಿಸಿಕೊಂಡಿತ್ತು *****...
ಯಾರೋ ದಿಟ್ಟಿಸುತ್ತಿದ್ದಾರೆಂಬ ಭ್ರಮೆ ನನ್ನೊಳಗಿನ ತಳಮಳದ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ *****...
ನಗು ಹುದುಗಿದೆ ಮಾತು ಮಲಗಿದೆ ತೀರದ ಅವಳ ಗುಂಗು ಮನದ ತುಂಬೆಲ್ಲ ತುಂಬಿದೆ ರಂಗು *****...
ಪ್ರೀತಿಯ ಪರಿಧಿ ಹುಡುಕಲು ಹೊರಟವನಿಗೆ ಸಿಕ್ಕಿದ್ದು ವಿಸ್ಮಯದ ಸನ್ನಿಧಿ *****...








