
ಅವನ ಎದೆಯಲ್ಲಿ ಅವಳು ಬೆಳಕಾದರೆ ನನ್ನೊಳಗೆ ಕತ್ತಲಾವರಿಸುವ ಭೀತಿ *****...
ಬಾಡಿದ ಮಲ್ಲಿಗೆ ಮುಡಿದವಳ ಮುಗುಳ್ನಗೆ ಪರಮಳ ಪಸರಸಿತು *****...
ರಾತ್ರಿ ಸುರಿದ ಮಳೆಗೆ ಮೈಯೊಡ್ಡಿ ನಿರಾಳವಾದ ಇಳೆ ಮುಂಜಾನೆ ಧರಿಸಿಕೊಂಡ ಹೊಸ ಕಳೆ ಅವಳ ಕಣ್ಣಲ್ಲಿತ್ತು *****...
ಪ್ರೀತಿಯ ಗಂಟಿನೊಳಗೆ ಅವಳ ನಂಟಿದೆ. ತನ್ನನ್ನು ಸವರುವ ಪ್ರತಿ ಸಂಬಂಧಕ್ಕೂ ಅದರ ಹೊರೆ ಹೊರಿಸುತ್ತಾಳೆ. *****...
ಆತ್ಮಕ್ಕೊಂದು ಅಪ್ಪುಗೆ ದಕ್ಕಿದೆ ಮನಸ್ಸು ಜಾರಿದ ತಪ್ಪಲ್ಲದ ತಪ್ಪಿಗೆ *****...
ನಿನ್ನ ನಲುಮೆಯ ನಳಿಕೆಯಿಂದ ತೂರಿ ಬಂದ ಕಾಡತೂಸು ಮನದಾಳವ ಹೊಕ್ಕಿದೆ ನಿಟ್ಟುಸಿರು ತುಸು ದಕ್ಕಿದೆ *****...
ಖಾಸಗಿಯಾಗಿ ನೀನು ಜೊತೆಯಲಿ ಕುಂತಾಗ ಕಸಿಯಾದ ಕನಸು ಮನದ ಹೊಲಸು ಹೊರ ಹಾಕುತಿದೆ *****...








