
ಅವನ ಕತೆ ಹುಚ್ಚು ವಾಸ್ತವತೆ. ಅವಳ ವ್ಯಥೆ ಬರೀ ಭಾವುಕತೆ. ಅವರಿಬ್ಬರೂ ಒಬ್ಬರೊಳಗೊಬ್ಬರು ಇಳಿಯುವುದು ಬದುಕಿನ ರೋಚಕತೆ, ಪ್ರೀತಿಯ ಪ್ರಾತ್ಯಕ್ಷಿಕೆ. *****...
ಅರ್ಥ ಮಾಡಿಕೊಂಡೆ ಎಂಬ ಮಾತಿನ ಆಯಸ್ಸು ಅತ್ಯಲ್ಪವೆಂದು ಅರ್ಥ ಮಾಡಿಕೊಂಡೆ *****...
ಮಿತಿಯ ಮಾತು ಮಡಿಯುವಂತೆ ಮಾಡಿದ ನೀನು ಮಿತಿಮೀರಿ ಮಾತಾಡಲು ಬಂದಾಗ ಅತಿಯಾದ ಮೌನ ತಾಳಿದ್ದು ಸರಿಯೇ? *****...
ಮಾನವತೆಯ ಹೊರತು ಎಲ್ಲವನೂ ಹೂತು ಜಗದ ಮಾತು ಮರೆತು ಬಿಡೋಣ ಜೊತೆಯಲಿ ಕೂತು *****...
ಮುನಿಸು ಅವಳ ಪ್ರೀತಿ ಆಗಾಗ ಧರಿಸುವ ಸೊಗಸಾದ ದಿರಿಸು *****...
ಅವಳ ನೆನಪಿನ ಮಾಳಿಗೆ ಮೇಲೆ ತಿರುಗುವ ಗಳಿಗೆ ತಣಿಯುವುದು ಒಡಲಾಳದ ಬೇಗೆ *****...
ನನ್ನ ಖಾಸಾ ಕೋಣೆಯೊಳಗೆ ಇಣುಕುವ ಧಾವಂತದಲ್ಲಿ ಅವಳು ತನ್ನ ಕಣ್ರೆಪ್ಪೆ ತೆರೆಯುವುದನ್ನೇ ಮರೆತುಬಿಟ್ಟಳು *****...
ಮಲಗಿದ್ದ ಮನಸು ಮೇಲೆದ್ದಿದೆ ಅವಳ ಮುಗುಳುನಗೆಯ ಉದಯ ಕಣ್ತುಂಬಿಕೊಂಡಿದೆ *****...








