
ಮಳೆಗೆ ಮನಸು ಒಡ್ಡಿದ್ದೇನೆ ನಿನ್ನ ನೆನಪುಗಳು ಹಸಿ ಹಸಿಯಾಗಿರಲಿ ಎಂದು *****...
ನಿನ್ನ ಅಪ್ಪುಗೆಯ ಬಿಸಿ ನನ್ನೊಡಲ ಕನಸಿಗೆ ಕಾವು ಕೊಡುತ್ತಿದೆ *****...
ನಿನ್ನ ತುಂಟಾಟಕ್ಕಿಂತ ಹಿತವಾದ ತಂಗಾಳಿ ಹೊಂಗೆ ಮರದ ಮಡಿಲಲ್ಲೂ ಸೋಕಲಿಲ್ಲ *****...
ಎಲ್ಲೋ ಕಳಕೊಂಡ ಖಾಲಿ ಪುಟವ ನಿನ್ನ ಕಣ್ಣಲ್ಲೇ ಹುಡುಕುವ ಹಟವ ಕೊಂದುಬಿಡಬೇಕೆಂದಿದೇನೆ ಗೆಳತಿ, ಎಲ್ಲರಂತೆ ಬದುಕುವ ಚಟವ ನನ್ನದಾಗಿಸಿಕೊಳ್ಳುವ ಸಲುವಾಗಿ! *****...
ಕತ್ತಲೆಯೊಳಗೆ ಕಳಚಿ ಬಿದ್ದವನಿಗೆ ಮಿನುಗುವ ಚುಕ್ಕಿ ಅವಳ ನೆನಪು *****...
ಇರುಳ ಹೊಲದ ಮೇಲೆ ಬೆಳಕಿನ ಬಿತ್ತನೆ ನಡೆಯುತ್ತಿದೆ… ಅವಳು ದೀಪ ಹಿಡಿದು ಬದುವಿನಲ್ಲಿ ನಿಂತಿದ್ದಾಳೆ *****...
ಅವಳ ಕಣ್ಣಿನಲ್ಲಿ ನನ್ನ ಕನಸು ಮಿನುಗಿತು ನಲಿವು ನನ್ನೊಂದಿಗೆ ಕೂಡಿ ಆಡಿತು *****...
ಸಂಕಟದ ಸುಳಿಗೆ ಸುಡುಗಾಡು ತೋರಿದ ನಿನ್ನ ಒಲವಿಗೆ ನಾನು ಚಿರಋಣಿ *****...
ಅವಳ ಮುನಿಸಿನೆದುರು ಜಗದ ಬಣ್ಣದ ದಿರಿಸು ಕಳಾಹೀನವಾಗಿದೆ *****...
ಅವಳು ಸಂಜೆಯಷ್ಟೇ ಸುಂದರ ಬೆಡಗು ಅಡಗಿದೆ ಬೆರಗು ಕರಗಿದೆ ಅಮೂರ್ತದ ಹಂದರ *****...








