
ಮೀಟಬೇಕಿತ್ತು ಒಮ್ಮೆ ಅವಳ ಒಡಲ ನೋವು ಚಿಮ್ಮುವಂತೆ ನನ್ನೊಡಲ ಘಾಟು ತಾಳಲಾರದೆ ಕೆಮ್ಮುವಂತೆ *****...
ದೊಡ್ಡವನಾದೆ ದಡ್ಡನೂ ಆದೆ ಮಾತು ತಪ್ಪುವ ನಿನ್ನ ದೊಡ್ಡತನದೆದುರು *****...
ನಿನ್ನ ನೆರಳು ಅರಸುವ ನಾನು ದಡ್ಡನೇ ಇರಬೇಕು. ಇಲ್ಲವಾದರೆ ನೀ ನನ್ನೊಡನೆ ತಪ್ಪದೇ ಬರಬೇಕು. *****...
ಕನಸುಗಳ ಕಳಕೊಂಡು ನಿನ್ನೆದುರು ಬಂದು ನಿಂತಿದ್ದೇನೆ. ಮುನಿಸು ಬಿಡು, ಕನಸು ನೆಡುವ ಮನಸು ಕೊಡು. *****...
ಒಂದು ಪುಟ್ಟ ಕನಸು… ನಿನ್ನೆದುರು ನಾನಾಗಬೇಕು ಈಗಷ್ಟೇ ಕಣ್ಬಿಟ್ಟ ಹಸುಗೂಸು *****...
ಹರಿವ ಹಾದಿಯೇ ನೆಲೆ ಎಂದುಕೊಂಡ ನದಿಗೆ ಕಡಲ ಕಾಗುಣಿತ ಅರ್ಥವಾಗುತ್ತಿಲ್ಲ *****...
ನೆನೆಪಿನ ಮಾರುಕಟ್ಟೆಯಲ್ಲಿ ಒಲವು, ನಲಿವು, ನೋವು ಬಿಕರಿಗಿವೆ… ಕೊಂಡುಕೊಳ್ಳಲು ಕಾಲವೆಂಬ ಕಾಸು ಹೊಂದಿಸಬೇಕು. *****...
ಅವಳ ಎದೆಯ ಮೇಲೆ ನಾ ಮುಡಿಸಿದ ಹೂವು ಬಾಡುತ್ತಿದೆ… ನಾನು ಮೂಕ ಪ್ರೇಕ್ಷಕ *****...
ಅವಳ ಒಡಲಿಗೆ ಬೊಗಸೆಯಷ್ಟು ಭರವಸೆ ಸುರಿದ ಅವನ ಕಣ್ಣುಗಳಲ್ಲಿ ತಾನೂ ಮನುಷ್ಯನಾದ ಸಂಭ್ರಮ. *****...
ಒಮ್ಮೆ ಮನಸು ಕೊಡು ಗೆಳತಿ ನಿನಗೊಂದಿಷ್ಟು ನೋವು ಪರಭಾರೆ ಮಾಡಿ ತುಸು ನಿಟ್ಟುಸಿರು ಬಿಡುತ್ತೇನೆ *****...








