ಬಸವನ ಹುಳುವಿಗೆ ಗರಿ

ಸಂಕುಚಿತ ಪ್ರವೃತ್ತಿಯ ಶಿಕ್ಷಕ ಅವನು. ಮಕ್ಕಳಿಗೆ ಪಾಠ ಬೋಧಿಸುವಾಗ ಮನುಷ್ಯನ ಸಣ್ಣತನವನ್ನು ಖಂಡಿಸುತ್ತಿದ್ದ. ವೈಶಾಲ್ಯತೆ ದಕ್ಕಿಸಿಕೊಳ್ಳಲು ಸಾಕ್ಷಿಪ್ರಜ್ಞೆಯಾಗುತ್ತಿದ್ದ. ಸಂದರ್ಭ ಸಿಕ್ಕಾಗೆಲ್ಲ ಪಾಠದ ಆಶಯವನ್ನು ವಿರೂಪಗೊಳಿಸಿ ವಿಷಂತರದಿಂದ ಕೆಳಸ್ತರದ ವಿದ್ಯಾರ್ಥಿಗಳನ್ನು ದಮನಿಸುವ ಮತ್ತು ಮೇಲುಸ್ತರದವರನ್ನು ವೈಭವೀಕರಿಸುವದರೊಂದಿಗೆ...

ಪ್ರಕೃತಿ ಮತ್ತು ವಿಮರ್ಶಕ

ಸಾಹಿತ್ಯ ಲೋಕದಲ್ಲಿ ಆ ವಿಮರ್ಶಕನಿಗೆ ದೊಡ್ಡ ಗೌರವವಿತ್ತು. ಪೌರ್ವಾತ್ಯ, ಪಾಶ್ಚಿಮಾತ್ಯ ಲೇಖಕರ ಕೃತಿಗಳನ್ನು ಆಳವಾಗಿ ಓದಿಕೊಂಡಿದ್ದ ಅವನನ್ನು ವಿಮರ್ಶೆಯಲ್ಲಿ ಮೀರಿಸುವವರೇ ಇರಲಿಲ್ಲ. ಒಮದು ಕೃತಿ ಬಿಡುಗಡೆಯಾಗಿ ಕೈಸೇರುತ್ತಲೆ ಅದರ ಜನ್ಮ ಜಾಲಾಡುವ, ಅದಕ್ಕೊಂದು ಸ್ಥಾನ...

ಅಮೃತ ಹಸ್ತ

ಭೂಮಿ ಆ ಅಡಿಗಲ್ಲುಗಳನ್ನು ಎಷ್ಟೋ ದಿನಗಳಿಂದ ನೋಡುತ್ತಲೇ ಇತ್ತು.  ಶಾಲೆ, ಹಾಸ್ಟಲ್ಲು, ಆಸ್ಪತ್ರೆ, ಮಾರ್ಕೆಟ್ಟು, ಕಾಂಪ್ಲೆಕ್ಸ್, ಸಮುದಾಯ ಭವನಗಳ ನಿರ್ಮಾಣಕ್ಕೆಂದು ಶಾಸಕರು, ಸಂಸದರು, ಮಂತ್ರಿಗಳು ಸಂಭ್ರಮದಿಂದ ಅನಾವರಣ ಮಾಡಿದ ಅಡಿಗಲ್ಲುಗಳನ್ನು ಭೂಮಿ ಸಂತೋಷದಿಂದಲೇ ಗಮನಿಸಿತ್ತು. ...
ಪಾರಿವಾಳ ಮತ್ತು ಮನುಷ್ಯ

ಪಾರಿವಾಳ ಮತ್ತು ಮನುಷ್ಯ

ಆ ಊರು ಪ್ರಕ್ಷುಬ್ಧವಾಗಿತ್ತು. ಅಲ್ಲಿನ ಜನರಿಗೆ ಬದುಕು ಎನ್ನುವುದು ದುಸ್ತರವೆನಿಸಿತ್ತು. ಆಗಾಗ ಹಲವಾರು ಕೋಮುಗಳ ನಡುವೆ ಕಲಹ ಉದ್ಭವಿಸುತ್ತಿದ್ದವು. ಕ್ಲುಲ್ಲಕ ಕಾರಣಗಳು ಮನುಷ್ಯರಲ್ಲಿ ಹಿಂಸಾ ಪ್ರವೃತ್ತಿ ಹುಟ್ಟುಹಾಕಿ ಊರೆಂಬೋ ಊರನ್ನು ಸ್ಮಶಾನಮಾಡುತ್ತಿದ್ದವು. ಒಂದಿಷ್ಟು ದಿನ...

ಕೃಷಿ

ಅದೊಂದು ಪುಟ್ಟ ಗ್ರಾಮ. ಅಲ್ಲಿನ ತರುಣ ಸಂಘವರು ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸನ್ಮಾನಿತನಾದವನು ಹೆಸರಾಂತ ಕವಿ. ಅವನೂ ಅದೇ ಹಳ್ಳಿಯವನು. ಸಾಹಿತ್ಯ ಅಕಾಡಮಿಯ ಪ್ರಶಸ್ತಿ ದೊರಕಿಸಿಕೊಂಡಿದ್ದರಿಂದ ಊರ ಜನ ಪ್ರೀತಿ, ಅಭಿಮಾನದಿಂದ ಕವಿಯನ್ನು ಬರಮಾಡಿಕೊಂಡಿದ್ದರು....

ಲಂಚದ ಮನೆ

ಆನಂದಪ್ಪ ಆ ಶಹರದ ಹೃದಯಭಾಗದಲ್ಲಿ ಮನೆ ಕಟ್ಟಿಸಲು ಶುರು ಮಾಡಿದ. ಅಲ್ಲಿನದು ಬಹು ಮೌಲ್ಯದ ಬಯಲು ಜಾಗೆ. ಅದು ಅವನಿಗೆ ಬಳುವಳಿಯಾಗಿ ಸಿಕ್ಕಿತ್ತು. ಆನಂದಪ್ಪ ಒಬ್ಬ ಇಂಜಿನಿಯರ್‍. ಸರಕಾರಿ ಹುದ್ದೆಯಲ್ಲಿದ್ದ. ತಾನು ಕಟ್ಟಿಸುವ ಮನೆ...

ರೊಟ್ಟಿ

ರೈಲು ನಿಲ್ದಾಣದ ಒಂದು ಬೆಂಚಿನ ಮೇಲೆ ಗಂಡ ಹೆಂಡತಿ ಕುಳಿತಿದ್ದರು. ಗಾಡಿ ಬರುವುದು ತಡವೆಂದು ಪೋರ್ಟರ್‍ ಹೇಳಿದ. "ರೀ ಕುಡಿಯಲು ನೀರು ತಗೊಂಡು ಬರ್‍ರಿ. ಇಲ್ಲೇ ಊಟ ಮಾಡೂಣು, ಹ್ಯಾಂಗಿದ್ರೂ ಗಾಡಿ ತಡಾ ಆಗಿ...

ಉತ್ತರಾಧಿಕಾರಿ

ಅಮರಪ್ಪನವರು ತಮ್ಮ ಇಡೀ ಆಯುಷ್ಯವನ್ನು ರಾಜಕೀಯದಲ್ಲೇ ಕಳೆದರು.  ಅಧಿಕಾರದ ಸುಖ ಅನುಸರಿಸುವರು.  ಸಾಕಷ್ಟು ಧನ, ಕನ, ಸಂಪತ್ತು ವರ್ಧಿಸಿಕೊಂಡರು.  ದೆಹಲಿ, ಬೆಂಗಳೂರು, ಸ್ವಂತ ಊರು ಎಲ್ಲೆಂದರಲ್ಲಿ ಬಂಗ್ಲೆ ಪ್ಲಾಟು ಹೊಂದಿದ್ದರು. ದೇಶದ ರಾಜಕಾರಣಕ್ಕೆ ಅನಿವಾರ್ಯವೆನ್ನುವಂತಿದ್ದ...

ಸ್ವಂತದ್ದಲ್ಲ

ಅದು ಮದುವೆ ಮನೆ. ಅಕ್ಷತೆಯ ನಂತರ ಭೋಜನ ಪ್ರಾರಂಭವಾಯಿತು. ಉದ್ದ ನಾಲ್ಕು ಸಾಲುಗಳಲ್ಲಿ ಜನರು ಊಟಕ್ಕೆ ಕುಳಿತಿದ್ದರು. ಅದು ಪ್ರತಿಷ್ಠಿತ ವ್ಯಕ್ತಿಯ ಮಗನ ಮದುವೆಯಾಗಿರುವುದರಿಂದ ಸುಗ್ರಾಸ ಭೋಜನದ ವ್ಯವಸ್ಥೆ ಆಗಿತ್ತು. ಊಟದ ರುಚಿಯನ್ನು ಪ್ರೀತಿಯಿಂದ...

ನಾನು ಬದುಕುತ್ತೇನೆ

ಸ್ಫರದ್ರೂಪಿ ಯವಕನೊಬ್ಬ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉನ್ನತ ಅಧಿಕಾರಿಯಾಗಿದ್ದ. ಅವನು ತನ್ನ ತಾಯಿ ತಂದೆ ಸಂಬಂಧಿಕರೊಂದಿಗೆ ಬಂದು ಆ ಚೆಲುವಾದ ಹುಡುಗಿಯನ್ನು ನೋಡಿದ. ಅವಳ ಮಾತು, ಅರ್ಹತೆಗಳೆಲ್ಲ ಅವನಿಗಿಷ್ಟವಾದವು. ಹುಡುಗಿಯೂ ಅವನನ್ನು ಮೆಚ್ಚಿಕೊಂಡಳು. ಎರಡೂ ಕಡೆಯ...