ಉಮರನ ಒಸಗೆ – ೨೮

ಇಂತೊರೆದ ಕುಡಿಕೆ ತಾಂ ಪಿಂತೊಂದು ಜನ್ಮದಲಿ ಉಸಿರಿಡುತ ಕೂರ್‍ಮೆಯಿಂ ಬಾಳ್ದುದಿರಬಹುದು; ಎನ್ನ ತುಟಿ ಸೋಂಕಿದಾ ತಣ್ಪುಳ್ಳ ನುಣ್ದುಟಿಯ ದೆನಿಸು ಮುತ್ತನು ಕೊಟ್ಟು, ಎನಿಸ ಕೊಂಡಿತ್ತೋ! *****

ಉಮರನ ಒಸಗೆ – ೨೪

ಬಿದಿಯೆನ್ನ ಕೇಳದೆಯೆ, ಎತ್ತಣಿಂದಲೊ ಬರಿಸಿ, ಮತ್ತೆನ್ನ ಕೇಳದೆತ್ತಲಿಗೊ ಕಳಿಪುವುದೆ? ಹಾ! ಒಂದು ಬಟ್ಟಲನು ತಾರಿಲ್ಲಿ ಮತ್ತೊಂದ ನದರೊಳೀ ದುರುಳತೆಯ ನೆನಪ ಮುಳುಗಿಪೆನು. *****