
ಮಧ್ಯಾಹ್ನ ಬಿಯರ್ ಕುಡಿದದ್ದು ತಲೆ ಸುತ್ತುತ್ತಿದೆ; ಈಗ ನನ್ನೊಂದಿಗಿಲ್ಲದ, ಮಠಕ್ಕೆ ಓದಲು ಬರುವ ಅವರ ನೆನಪು ಜೀವ ಹಿಂಡುತ್ತಿದೆ. ಹೆಣ ತಿನ್ನುವ ರಾತ್ರೆಯ ಹುಳುಗಳು ಸುಳಿದಾಡಲಾರಂಭಿಸಿವೆ. ಅವರ ಮುಗ್ಧತೆ, ಸೆಡವು, ಕುಗ್ರಾಮದ ಲಾವಣಿಗಳು- ಒಂದರಿಂದೊ...
ಮಧ್ಯಾಹ್ನ ಎರಡು ಘಂಟೆಗೆ ಐದು ನಿಮಿಷ ಬಾಕಿ ಇತ್ತು. ನ್ಯೂಸ್ ಕೇಳೋಣವೆಂದು ಟಿ.ವಿ. ತಿರುಗಿಸಿದೆ. ಕಾಲಿಂಗ್ ಬೆಲ್ ಬಾರಿಸಿತು. ಇದೊಂದು `ನ್ಯೂಸೆನ್ಸ್’ ಆಯಿತಲ್ಲಾ ಎಂದುಕೊಂಡು ಬಾಗಿಲು ತೆರೆದೆ. ಐದಾರು ಹುಡುಗರು ನಾಯಿ ನಮ್ಮ ಮನೆಯಲ್ಲಿ ಇಲ್ಲ...
ಸುಳಿವ ಗಾಳಿಗೆ ತಳಿರು ತೂಗಲು ಹಕ್ಕಿಗೊರಳಲಿ ಇನಿದನಿ…… ಉದಯ ಕಿರಣವು ಮುದದಿ ಹೊಮ್ಮಲು ಲತೆಗಳಲ್ಹರಳು ಸುಮದನಿ ಮಣ್ಣನಿ ಯಾವ ಕೈಗಳು ಬೆಸೆದ ಮಾಯೆಯೋ ಲೋಕ ಜೀವಯಾನಕೆ ಮುನ್ನುಡಿ ಇಂದು ನಿನ್ನೆಗು ಮುನ್ನ ನಾಳೆಗೂ ಸಾಗಿ ಬಂದಿದೆ ಜೇನ್ನುಡ...
ಬಾಳು ಕೋಮಲ ಎಳೆ ಬಾಳೆಯಲೆಯಲ ಬಾಲೆ ಜೊತೆ ಮಧುರತೆಯಿರೆ ಹಣ್ಣ ಸವಿ ಮೆದ್ದಂತೆ ಸಂ – ಬಂಧ ಬಿರಿಯೆ ದಿಂಡ ರಸಪಾನದಂತೆ *****...
ಗುರುಗಳು ಆರೋಗ್ಯ ಶಾಸ್ತ್ರಪಾಠ ಮಾಡುತ್ತ ಶಿಷ್ಯನಿಗೆ ಪ್ರಶ್ನೆ ಕೇಳಿದರು: “ಉಪವಾಸ ಮಾಡುವುದರಿಂದ ಏನೇನು ಪ್ರಯೋಜನ ಆಗುತ್ತದೆ?” ಶಿಷ್ಯ: “ಇದರಿಂದ ತುಂಬಾ ಉಳಿತಾಯ ಆಗುತ್ತದೆ; ತರಕಾರಿ ಬೇಳೆ, ಹಾಲು, ಮೊಸರು, ಯಾವುದನ್ನೂ ...
– ೧ – ನಾಲ್ಕಾರು ದಿನಗಳಿಂದ ಇಮಾನಬಿಯ ಮನಸ್ಸಿಗೆ ಸಮಾಧಾನವಿರಲಿಲ್ಲ. ಅವಳ ಮೊಮ್ಮಗ ಹೈದರನ ಮೈಯೆಂಬೋ ಮೈ ಕೆಂಡಕೆಂಡವಾದರೆ ಮತ್ತೊಮ್ಮೆ ಮಂಜುಗಡ್ಡೆ. ಹಗಲು-ರಾತ್ರಿ ವಿಲಿ ವಿಲಿ ಮೊರೆತ. ತುಂಡು ಬ್ರೆಡ್ಡು ಚೂರು, ಬಿಸ್ಕೀಟು, ವಿಷದ ...
ಯಾತಕೆ ಯಾರಿಗೆ ಬೇಕು ಈ ಸಂಸಾರಸುಖ ಇನ್ನು ಸಾಕು ||೧|| ನೀ ಸತ್ತು ನಾನಿರಬೇಕು ನಾನು ನೀನು ಒಂದಾದಮೇಲೆ ||೨|| ಆನಂದಸ್ಥಲದ ಮಾಲಿಂಗನೋಳ್ ಬೆರಿಯಲಿಬೇಕ ಇಂತಾದಮೇಲೆ ಗುರುಗೋವಿಂದನ ಮರಿ ಶರೀಫನ ಗುರುತು ನಿನಗ್ಯಾಕ ||೩|| ***** ...
ಅವರು: “ನಿನ್ನನ್ನು ಎಲ್ಲೋ ನೋಡಿದ ಹಾಗೆ ಇದೆಯಲ್ಲಾ, ನೀನು ಅನ್ನದಾನಪ್ಪ ಅಲ್ಲವೇ?” ಇವರು: “ನನ್ನ ಈಗಿನ ಹೆಸರು ಅನ್ನ ಮಾರಪ್ಪ ಅಂತ. ಆಗ ನಾನು ಅನ್ನವನ್ನು ದಾನಮಾಡುತ್ತಿದ್ದೆ, ಆದರೆ ಈಗ ಅನ್ನವನ್ನು ಮಾರುತ್ತಿದ್ದೇನೆ. ಹೊ...
ನಿನಗು ನನಗು ನೆಲ-ಮುಗಿಲಿನಂತರ ವೆಂದನಲ್ಲನ ಮೊಗದಲಿ….. ಮೊಗವಿಟ್ಟು ನುಡಿದಳು ಇನಿದು ದನಿಯಲಿ.. ನಿಜದ ಬದುಕಿದೆ ನೆಲದಲಿ ಭರದಿ ಸುರಿವಾ ಮಳೆಯಬ್ಬರ ಸುವ ಕೋಪದುರಿಯ ನೇಸರ….. ಗೊತ್ತು-ಗುರಿಯು ಇಲ್ಲದಲೆಯೋ….. ಬೀಸುಗಾಳಿಯ ಬರ್ಬ...
ನಾನಾ ವಿದ್ಯೆಗಳೆಲ್ಲಾ ಕಲಿಯದೇನರಿಯದಲ್ಲಾ ನಾ ಸತ್ತು ನೀನಾಗುವದಿನ್ನೆಂದಿಗೆ ||ಪ|| ನಾ ಬಂದು ನಾನಿನ್ನು ನಾನೇನು ಮಾಡಿದ್ದೆ ನಾ ಸುಳ್ಳು ನೀನಾಗುವದಿನ್ನೆಂದಿಗೆ ||ಅ.ಪ|| ನಾ ಬ್ರಹ್ಮ ನಾ ವಿಷ್ಣು ನಾ ರುದ್ರ ನೆಂಬಂತೆ ನಾನಾದಳಿಸುವದಿನ್ನೆಂದಿಗೆ ನಾ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....
ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...














