
ರೈಲಿನಲ್ಲಿ ಒಮ್ಮೆ ಪ್ರಯಾಣ ಮಾಡುತ್ತಿದ್ದಾಗ ಫ್ರಾನ್ಸ್ ದಾರ್ಶನಿಕ ಆಂಡ್ರೆ ಮಾಡೋನ ಆಕಸ್ಮಿಕವಾಗಿ ಒಬ್ಬ ಹೆಂಗಸಿನ ಕಾಲು ತುಳಿದು ಬಿಟ್ಟ. “ಏನ್ ಹಂದಿ, ಕಣ್ಣು ಕಾಣಿಸುವುದಿಲ್ಲವೇ?” ರೇಗಿದಳು ಆ ಹೆಂಗಸು. ತಕ್ಷಣವೇ ಆತ ಕ್ಷಮೆ ಕೋರಿದ....
ಹೀಗೆ ಒಂದೂರಲ್ಲಿ ತಾಯಿ ಮಗ ಇದ್ದರು. ತಾಯಿಗೆ ಸೊಸೆಯೂ ಬಂದಿದ್ದಳು. ವಾಡಿಕೆಯಂತೆ ಅತ್ತೆ ಸೊಸೆಯರಲ್ಲಿ ವಿರಸಕ್ಕಾರಂಭವಾಗಿ ಕದನವಾಗತೊಡಗಿದವು. ಕದನದ ಪರಿಣಾಮದಿಂದ ಕುನಸುಹುಟ್ಟಿಕೊಂಡಿತು ಪರಸ್ಪರರಲ್ಲಿ. ಎಂಥದೋ ಒಂದು ಉಪಾಯದಿಂದ ಅತ್ತೆಯನ್ನು ಇಲ್ಲದ...
ಏನು ಮಾಡೆನು ನನ್ನ ದೊರೆಗಾಗಿ? ಈ ಹೂವು ಅರಳಿದ್ದೆ ಮುಡಿಗಾಗಿ – ಅವನ ಅಡಿಗಾಗಿ! ಜೀವದ ಮಾತ ಆಡುತ ಸೋತು ಹಾಡಾಗಿ ಹರಿದೇನು ಅವನಲ್ಲಿ ಕಾಣದ ಲೋಕ ತೆರೆಸುವ ಧೀರ ಆಳಾಗಿ ನಡೆದೇನು ಬೆನ್ನಲ್ಲಿ! ಹೆಣ್ಣಿನ ಆಸೆ ತಳೆಯದು ಭಾಷೆ ಹೊಳೆದೀತು ಮಿಂಚಾಗಿ...
ಸಂತೆಮಾಳದ ಕಚ್ಚಾರಸ್ತೆಗಳಲಿ ಹೈಹಿಲ್ಡು ಚಪ್ಪಲಿಗಳು ಸರಿಮಾಡಿಕೊಳ್ಳುತ ಒಂದಿಷ್ಟು ಹಣ ಉಳಿಸಬಹುದೆಂದು ಚಿಲ್ಲರೆಗಳ ಭಾರಹೊತ್ತು ಬೆವರೊರೆಸಿಕೊಂಡು ಸಾಮಾನುಗಳ ಚೌಕಾಶಿ ಮಾಡುವುದೇನು…. ಕಡಿಮೆ ಬೆಲೆ ಎಂದಲ್ಲಿ ಆ ಕಡೆ ಈ ಕಡೆ ಓಡಾಡಿ ಹಸಿಬಿಸಿಕೊಳ...
ಚಾಮುಂಡೇಶ್ವರಿ ಕ್ಷೇತ್ರದ ಯಲಕ್ಷನ್ ಡಿಕ್ಲೇರ್ ಆದ ದಿನದಿಂದ್ಲೆ ದ್ಯಾವೇಗೋಡ್ರು ಸಿದ್ರಾಮು ಮ್ಯಾಗೆ ವಾರ್ ಡಿಕ್ಲೇರ್ ಮಾಡವರೆ. ಸಿದ್ರಾಮು ಸೋಲೇ ತನ್ನ ಲೈಫ್‌ನ ವೆರಿಬಿಗ್ ಅಂಡ್ ಲಾಸ್ಟ್ ಅಚೀವ್‌ಮೆಂಟು. ಆಮ್ಯಾಲೆ ವಾನಪ್ರಸ್ಥಕ್ಕೆ ರೆಡಿ ಅಂತ್ಲೂ ಡೈ...
ಹೀಗೇ ನಡೆಯುತ್ತಾ ನಡೆಯುತ್ತಾ ಅರ್ಧದಲ್ಲೇ ಥಟ್ಟನೆ ಎಲ್ಲ ನಿಂತು ಗಾಳಿ ಸ್ತಬ್ಧ ನೀರು – ಬೇರು ಸ್ತಬ್ಧ ಜೀವ – ಜೀವನವೇ ಸ್ತಬ್ಧ! ಎಲ್ಲ ಗಮ್ಮತ್ತುಗಳೂ ಮೈ ಮುದುರಿ ಕೌದಿ ಹೊದ್ದು ತೆಪ್ಪಗೆ ಮಲಗಿಬಿಟ್ಟಿವೆಯೇ? ಮದಿರೆಯ ಬಟ್ಟಲೂ ಖಾಲಿ ನ...
ಕೊಡಗಿನ ಕೊನೆಯ ದೊರೆ ಚಿಕ್ಕವೀರನ ದಿವಾನ ಕುಂಟ ಬಸವನದು ವಿಶಿಷ್ಟ ವ್ಯಕ್ತಿತ್ತ್ವ. ಅವನಿಗೆ ತನ್ನ ಹಿನ್ನೆಲೆ ಗೊತ್ತಿರಲಿಲ್ಲ. ಅರಮನೆಯ ಚಾಕರಿ ಮಾಡಿಕೊಂಡಿದ್ದ ಅವನನ್ನು ಚಿಕ್ಕವೀರ ದಿವಾನಗಿರಿಗೆ ಏರಿಸಿ ಜಾತೀಯ ಮೇಲರಿಮೆಯಿಂದ ಬೀಗುತ್ತಿದ್ದ ಇತರ ದಿ...
ಭಕ್ತನೊಬ್ಬ ಹನುಮಂತನ ಗುಡಿಗೆ ಹೋಗುವಾಗ ಬಾಗಿಲಲ್ಲೇ ಚಪ್ಪಲಿಗಳನ್ನು ಬಿಟ್ಟು ಒಳಕ್ಕೆ ಹೋಗಿ ದರ್ಶನ ಪಡೆದು ಹಿಂದಕ್ಕೆ ಬಂದು ಚಪ್ಪಲಿ ಹಾಕಿಕೊಳ್ಳಲು ಹೋದರೆ ಚಪ್ಪಲಿಗಳೇ ನಾಪತ್ತೆ! ಅವು ಹೊಸ ಚಪ್ಪಲಿಗಳು. ತುಂಬಾ ಖಿನ್ನನಾಗಿ ಮತ್ತೆ ದೇವರ ಬಳಿ ಹೋಗಿ ...
ಏಕೆ ಅವನ ಕಂಡೆನೋ ಪ್ರೇಮದ ಸವಿಯುಂಡೆನೋ! ಇಲ್ಲವಾಯಿತದೇ ಗಳಿಗೆ ನನ್ನದೆಲ್ಲವೂ, ನಲ್ಲನನ್ನು ಬಿಟ್ಟು ಮನಸ್ಸು ಹೃದಯ ನಿಲ್ಲವು ನೂರು ಕಡೆಗೆ ಹಾಯುತಿದ್ದ ಹೃದಯ ಇದೇ ಏನು? ನೂರು ರುಚಿಯ ಬಯಸುತಿದ್ದ ಮನಸು ಇದೇ ಏನು? ಬಿಗಿದ ನಲ್ಲ ನನ್ನ ತನ್ನ ಸ್ಮರಣೆಯ...
ಬ್ರಿಟೀಷ್ ಕಾಲದ ಪೋಲಿಸನ ಮಗಳು ನಮ್ಮಮ್ಮ ಹಾಗೇ ಕಿತ್ತೂರು ಚೆನ್ನಮ್ಮನ ನಾಡಿನಲ್ಲೇ ಹುಟ್ಟಬೆಳೆದವಳು ಪೋಲಿಸನ ಕೆಲಸ ಅವನದಾಗಿದ್ದರೆ ಇವಳ ಕೆಲಸ ಅದೇ ಝೆಂಡಾ ಹಿಡಿದು ಊರತುಂಬೆಲ್ಲ ಪ್ರಭಾತಪೇರಿ ಹಾಕುತ ಗಾಂಧಿ ಹೆಸರು ಹಿಡಿದು ಕೂಗುವುದು ಅದೆಷ್ಟು ಧೈರ...
ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...
ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...
ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...
ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...
ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....
ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...














