ಕಟ್ಟಿದ ಕಣ್ಣಿನ ಬಟ್ಟೆಯೊಳಗೆ ಕರಟಿಹೋಯಿತೇ ಬದುಕು? ಕಣ್ಣಿದ್ದೂ ಕಾಣಲಿಲ್ಲ ನೀನೇನನ್ನೂ ಮುಚ್ಚಿದ ಕಣ್ಣಿನೊಳಗೆ ಗಂಡನ ಪ್ರೀತಿ ಮಾತ್ರ ಮಕ್ಕಳ ಮೇಲಿನ ಪ್ರೀತಿಯೇ ಮುಳುವಾಯಿತು ನಿನ್ನ ಪಾಲಿಗೆ ಮಮತೆಯ ಬೇಲಿಗೆ ನಿನ್ನ ದೇಹದ್ದೇ ಹೊದಿಕೆ ಸಮಾಜದ ಕಣ್ಣಿಗೆ ನೀನಿನ್ನೂ ತಪ್ಪಿತಸ್ಥಳು ತಾಯ್ತನದ ಹೊಣೆ ನಿನ್ನೆಲ್ಲಾ ಮಾನ...

ಹೊಸದಾಗಿ ಮದುವೆ ಆದ ತರುಣ- ತರುಣ: “ನನ್ನ ಹೆಂಡತಿಯನ್ನು ಮೆಚ್ಚಿಸೋದು ತುಂಬಾ ಕಷ್ಟ ಕಣಯ್ಯಾ”. ಸ್ನೇಹಿತ: “ನನಗೇನೂ ಹಾಗೆ ಅನ್ನಿಸುವುದಿಲ್ಲವಲ್ಲ”. ತರುಣ: “ಹ್ಯಾಗೆ ಹೇಳ್ತೀ?” ಸ್ನೇಹಿತ: “ಏಕೆಂ...

ಶಂಕೆಯೆಂಬ ಬೆಂಕಿ ಸೋಕಿ ಬೇಯುವಾ ಮನ ಮೌನವಾಗಿ ನರಳುತಿದೆ ಉರಿದು ಹೂ ಬನ ಪಚ್ಚೆ ಕಾಡ ನಡುವೆ ಹರಿವ ಸ್ವಚ್ಛಧಾರೆಗೆ ನೂರು ತಿರುವು ನೂರು ಇಳಿವು ಒಲುಮೆ ಬಾಳಿಗೆ! ಜೀವ ಜೀವ ಹಾಡಿ ಹೆಣೆದ ಒಲುಮೆ ಗೂಡಿದು ಬರಿದಾಗಿದೆ ಹೊಯ್ದಾಡಿದೆ ಸಣ್ಣ ಗಾಳಿಗೂ! ದುಃಖ...

ತೀರ ಇತ್ತೀಚಿಗೆ ಸಂಜೆಹೊತ್ತಿನ ಜನನಿಬಿಡ ವಾಹನ ದಟ್ಟನೆಯ ರಸ್ತೆಯಲಿ ಸಣ್ಣ ~ಆಕ್ಸಿಡೆಂಟ್ ನನ್ನ ಕಾರಿಗೆ ಆಗಿಯೇ ಹೋಯಿತು ಅದು ~ಆಕ್ಸಿಡೆಂಟೇ ಅಲ್ಲ ಹಾಗೆ ನೋಡಿದರೆ ತಕ್ಷಣದ ಬ್ರೆಕ್ಕು ಕಿರುಗುಟ್ಟಿದ ಗಾಲಿ – ಮುಂದಿನ ಕಾರು ಚಾಲಕ ಅರ್ಧಬೋಳು ತ...

ಚಾಮುಂಡೇಸ್ವರಿ ಕ್ಷೇತ್ರದ ಚುನಾವಣೆನಾಗೆ ಮಾತಾಯಿ ಚಾಮುಂಡಿ, ಅಪ್ಪ ಮಹಿಷಾಸುರ, ಮಗ ರಕ್ತಬೀಜಾಸುರರ ಅಹಂಕಾರವನ್ನು ಮೂಲಾಜಿಲ್ದಂಗೆ ಮರ್ಧನಮಾಡಿ ಪುಣ್ಯ ಕಟ್ಟಿಕೊಂಡವಳೆ ಅಂಬೋದು ಶ್ಯಾನೆ ಹ್ಯಾಪಿ ಮ್ಯಾಟ್ರೇ ಕಣ್ರಿ. ಯಲಕ್ಷನ್ ಅಂಬೋದು ಒನ್ ಡೇ ಮ್ಯಾಚಿ...

ಮತ್ತೆ ಕತ್ತಲು ಆಳದಿಂದೆದ್ದ ತಕ್ಕಡಿಗಳು ರಂಗಸ್ಥಳವೇರಿ ತಕಥೈ ನರ್ತಿಸುತ್ತಾ ಬೆತ್ತಲು. ಈಗೆಲ್ಲವೂ ತಲೆಕೆಳಗು ಗೆದ್ದಲು ಹಿಡಿದ ಒಳಗು ಬೊಟ್ಟಿಟ್ಟ ಭಾರದ ತಟ್ಟೆ ಮೇಲೇರುತ್ತಲೇ ಕುಣಿಯುತ್ತದೆ. ಖಾಲಿ ತಕ್ಕಡಿ ತಟ್ಟೆ ಭಾರವಿಲ್ಲದೆಯೂ ಸರ್ರನೆ ಕೆಳಗಿಳಿ...

ಒಂದೂರಿನಲ್ಲಿ ಒಬ್ಬ ರಾಜ, ಅವನಿಗೊಬ್ಬ ಪ್ರಧಾನಿ ಹಾಗೂ ಒಬ್ಬ ಸೇವಕ ಇದ್ದರು. ಸೇವಕನು ತನ್ನನ್ನು ಪ್ರಧಾನಿಯೊಡನೆ ಹೋಲಿಸಿಕೊಂಡು ಹಲವು ಬಗೆಯಾಗಿ ಚಿಂತಿಸುತ್ತಿದ್ದನು – “ತನ್ನ ಸಂಬಳ ಹತ್ತೆಂಟು ರೂಪಾಯಿ ಮಾತ್ರ. ಪ್ರಧಾನಿಯ ಸಂಬಳ ಬೊಗಸ...

ನಂಬಬಾರದುದ ನೋಡಿದ ಜೀವದ ನೋವಿಗೆ ಸಮವಿದಯೇ? ಹುಸಿದು ಬೀಳಲು ಪ್ರೇಮದ ಚಪ್ಪರ ಕುಸಿಯದ ಎದೆಯಿದೆಯೇ ಒಲಿದು ಪೂಜಿಸಿದ ಕಲ್ಪವಲ್ಲಿ ಇದು ಒಣಗಿತೇಕೆ ಹೀಗೆ? ಬಯಸಿ ನೆಮ್ಮಿದಾ ಕಾಮಧೇನುವೇ ಬರಡಾಯಿತೆ ಹೇಗೆ? ತೀರಿಹೋಯಿತೇ ಅರೆಚಣದಲ್ಲೇ ಅಪ್ಸರೆಯಲಿ ಪ್ರೇಮ?...

ಹಸುಗಳ ಕದ್ದ ನೆಪಕೆ ಬೆಂಕಿಹೊತ್ತಿಕೊಂಡಿತು ಬೆಳವಡಿಗೆ ಧಗಧಗಿಸಿದ್ದು ಶಿವಾಜಿಡೇರೆಯೊಳಗೆ ಈಶ ಪ್ರಭುವಿನ ಮರಣ ನಕ್ಷತ್ರ ಜಾರಿದ ಹೊತ್ತು ಉಕ್ಕಿ ಉಕ್ಕಿ ಹರಿಯಿತು ಮಲ್ಲಮ್ಮಳ ಮಲಪ್ರಭೆ ಆಕಾಶ ತುಂಬೆಲ್ಲ ಧೂಳಿಪಟಗಳ ಅಬ್ಬರ ಕಾಲಡಿಯಲ್ಲಿ ಬೆಳವಡಿಯ ವೀರರರ...

“ಈಗ ಏನು ಮಾಡುತ್ತಿದ್ದೀಯಾ ತಾಯೀ?” ಶ್ರೀರಾಮ ಅಹಲ್ಯೆಯನ್ನು ಕಾಡಿನಲ್ಲಿ ಸಂದರ್ಶಿಸಿ ಕೇಳಿದ: ಅಹಲ್ಯೆ: “ಮೈಯಲ್ಲಾ ತಡವಿಕೊಂಡು ಈ ಕಾಡಿನಲ್ಲಿರುವ ನಾಯಿಗಳನ್ನೆಲ್ಲಾ ನಿರ್ಮೂಲ ಮಾಡಲು ಯೋಜನೆ ಹಾಕಿಕೊಳ್ಳುತ್ತಿದ್ದೇನೆ.”...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...