ಬನ್ನಿ ಬನ್ನಿ | ಬನ್ನಿ ಬನ್ನಿ | ಬನ್ನಿ ಮಕ್ಕಳೇ | ಕೂಡಿ ಆಡಿ ಕೂಡಿ ನಲಿವ | ಬನ್ನಿ ಮಕ್ಕಳೇ|| ವಿದ್ಯೆ ಬುದ್ದಿ | ಎಲ್ಲ ಕಲಿತು | ಮುಂದೆ ನಡೆಯುವಾ | ರೀತಿ ನೀತಿ | ನಡತೆ ಕಲಿತು | ಬಾಳ ನಡೆಸುವಾ || ಕುಂಟ ಕುರುಡ | ಮೂಗ ಕಿವುಡ | ಬನ್ನಿ ಎನ್ನು...

ಹೆಜ್ಜೆ-೧ ಅವನ ದೃಢ ವಿಶಾಲ ಪಾದದ ಮೇಲೆ ಪುಟ್ಟಾಣಿ ಹುಳು ಅಂಗುಲಂಗುಲ ಏರಿ ಪುಟ್ಟ ಪಾದವನೂರಿ ಅತ್ತಿಂದಿತ್ತ ಜೀಕುತ್ತಾ ಜೋಕಾಲೆ. ಅವನ ಪಾದದ ಮೇಲೆ ಅದರ ಪದತಳ. ಒಂದಿಂಚೋ ಎರಡಿಂಚೋ ಮೂರೋ ತಗುಲದೇ ಬಿಟ್ಟೂ ಅಂಟುವ ಆ ಪುಟಾಣಿ ಪಾದ ಭೂಮಿಗಪ್ಪಿದ ಅವನ ಪಾ...

‘ಯಾರಿಗೆ ಬೇಕು ಕವಿತಾ, ಬ್ರೆಡ್ ತಾ ಬೆಣ್ಣಿ ತಾ’ ಎಂಬ ಬೇಂದ್ರೆಯವರ ಕವಿತೆಯೊಂದಿದೆ; ಕವಿತೆಯನ್ನೇ ತಮಾಷೆ ಮಾಡುವ ಕವಿತೆ. ಇದು ಬೇಂದ್ರೆಯವರು ಕವಿತಾ ಜತೆ ಹೊಸೆಯುವ ಪ್ರಾಸದ ದೃಷ್ಟಿಯಿಂದ ಸೊಗಸಾಗಿದೆ ಮಾತ್ರವಲ್ಲ, ಕವಿತೆಯ ಜತೆ ಬ್ರೆಡ್ ಮತ್ತು ಬೆಣ...

ಬಟ್ಟೆಯದೆಷ್ಟು ಸುಂದರವಾದೊಡಂ ತೊಟ್ಟ ಮಾರನೆಯ ದಿನಕದು ಹಳತು ನೆಟ್ಟ ಸಸಿಯದು, ಸವಿಯ ಫಲವದು ಸೃಷ್ಟಿಯೊಳನುದಿನವು ಹೊಸತು ಕಷ್ಟ ಕೃಷಿಯೆನುತಾರಿಗೋ ಬಿಟ್ಟ ಬಾಳೆಲ್ಲ ಹಳತು – ವಿಜ್ಞಾನೇಶ್ವರಾ *****...

ಬದುಕು ಬಲು ಭಾರ ಹಾದಿಯೂ ಅತಿ ದೂರ ಮುಗಿಯದ ಪಯಣ ಎಲ್ಲಿಂದ ಎತ್ತಣ. ಸಾಗುತಿದೆ ಬದುಕು ಭಯ ಆತಂಕಗಳ ಸಂಕೋಲೆ ಉದಯಿಸುವ ಸೂರ್ಯನೊಂದಿಗೆ ನೂರಾರು ಚಿಂತೆ ಬೇಗೆ ಪರಿಭ್ರಮಿಸುತ್ತಿದೆ ಮನ ಗರ ಗರ ಸುತ್ತುವ ಹದ್ದಿನಂತೆ ಕ್ಷಣ ಚಿತ್ತ ಕ್ಷಣ ಪಿತ್ತ. ಭೀತಿ ಭೀ...

ಆರೇನೆಂದಡೂ ಓರಂತಿಪ್ಪುದೆ ಸಮತೆ ಆರು ಜರಿದವರೆನ್ನ ಮನದ ಕಾಳಿಕೆಯ ಕಳೆದರೆಂಬುದೆ ಸಮತೆ ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ ಹಗೆಗಳೆಂಬುದೆ ಸಮತೆ ಇಂತಿದು ಗುರುಕಾರುಣ್ಯ ಮನವಚನಕಾಯದಲ್ಲಿ ಅವಿತತವಿಲ್ಲದಿರ್ದಡೆ ಕಪಿಲಸಿದ್ಧಮಲ್ಲಿಕಾರ್ಜುನಾ ನಿನ್...

ಹೊಲೆಯ! ಹೊಡೆಯಬೇಡೆಲೋ ಹಳ್ಳಿ ಎತ್ತನು! ಕ್ರೂರಿ! ಕನಿಕರಿಲ್ಲವೋ ಕೊಲ್ಲೊ ಕುತ್ತನು! ೧ ದುಡಿದು ದೇಹವೆಲ್ಲವೂ ಕೊರಗಿ ಕುಂದಿದೆ! ಸುಟ್ಟ ಸುಣ್ಣದಂತೆಯೇ ಸತ್ವಗುಂದಿದೆ! ೨ ಎಲವೊ ನಿನಗಾಗಿಯೇ ರಕುತ ಸುಟ್ಟಿದೆ! ತಿಂದ ನಿನ್ನ ಹೊಟ್ಟೆಯೇ ಉಬ್ಬಿ ಬಿಟ್ಟಿದ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...