ಥಿಯೇಟರ್ ಇಂಪ್ರೆಶನ್ಸ್

ಟ್ರ್ಯಾಜಿಡಿಯ ಬಹಳ ಮುಖ್ಯವಾದ ಅಂಕವೆಂದರೆ ಆರನೆಯ ಅಂಕ. ರಂಗಮಂಚದ ಪುನರುಜ್ಜೀವನ. ವಿಗ್ಗು, ಡ್ರೆಸ್ಸುಗಳನ್ನು ಸರಿಮಾಡಿಕೊಳ್ಳುವುದು, ಎದೆಗೆ ಚುಚ್ಚಿದ ಚೂರಿಯನ್ನು ಕೀಳುವುದು, ಕತ್ತಿಗೆ ಬಿಗಿದ ನೇಣು ಹಗ್ಗತೆಗೆಯುವುದು, ಪ್ರೇಕ್ಷಕರಿಗೆ ಮುಖ ತೋರಿಸಲೆಂದು ನಾಟಕದಲ್ಲಿ ಬದುಕಿದವರೊಡನೆ ಸತ್ತರೂ...

ನಾ ಸೈ ನೀ ಸೈ

ಆಕೈ ಇಕೈ ತಾತಾ ಕೈಕೈ ಗಿಮಿಗಿಮಿ ತಿರುಗೋಣ ನಾಸೈ ನೀಸೈ ಸೈಸೈ ಹೈಹೈ ಗರ್ರನೆ ತಿರುಗೋಣ ನಾನೂ ನೀನೂ ಬಿಸಿಬಿಸಿ ಪಾನಂ ಜನುಮದ ಜೇಂಗಾನಂ ನೀನೂ ನಾನೂ ಖುಶಿ ಖುಶಿ ಮಿಲನಂ ಒಲವಿನ ಓಂ...

ಸಾವು

ಕಂಡಿರುವೆ ಮೂರು ಸಲ ಇವನ ಮೋರೆ, ಮನೆಯಂಗಳಕೆ ನುಗ್ಗಿ ಹೀಚು ಹರಿವಾಗ, ನೋಡುವರ ಕೈಕಟ್ಟಿ ಹಗಲೆ ಲೂಟಿಯ ಹೊಡೆವ ದರೋಡೆಕೋರ ಹಂಡೆಯಂಥಾ ಹೊಟ್ಟೆ, ಕಿರುಬೆಂಡುಗಾಲು, ಉಂಡದ್ದು ಉದರ ಸೇರದ ಯಾವ ರೋಗವೋ! ತಿನಿಮೋರೆ ಚಂದವೋ,...

ನನ್ನದೆಂಬುದೇನಿದೆಯೋ

ನನ್ನದೆಂಬುದೇನಿದೆಯೋ ನಿನ್ನದೇ ಎಲ್ಲಾ ಸೂತ್ರಧಾರಿ ನೀನಾಗಿರಲು ಪಾತ್ರಧಾರಿಗಳೆಲ್ಲಾ ನಾನಾದರೋ ತಿಳಿಯೆ ಮಾಯದಾಸೆರೆಯಲಿ ಎಲ್ಲೆಲ್ಲೂ ನೀನಿರಲು ಕಾಣದಾಗಿಹೆ ||ನ|| ಮೌನ ಮಾತಾಡುವುದೇ ಕಾಡುವುದೇ ಪ್ರೇಮ ಸುಮ ಭಕುತಿಯಲಿ ಬಾಡುವುದೇ ಬಾಳಿನಂದದ ದೀಪ ರೂಪವೆಸಗೆ ಜೀವನವೆಂಬೋ ದೋಣಿ...
ಕಾಶೀಬಾಯಿಯವರ ಯಾತ್ರಾಪ್ರಯಾಣ

ಕಾಶೀಬಾಯಿಯವರ ಯಾತ್ರಾಪ್ರಯಾಣ

ಕಾಶೀಬಾಯಿ- "ಟಾಂಗಾ ಬಂತು! ಎಂಥಾ ಲಗೂನ ಗಾಡೀ ಹೊತ್ತಾತಿದೂ. ಮುಂಜಾನಿಂದ ಗಡಿಬಿಡಿ ಗಡಿಬಿಡಿ ಇನ್ನೂ ಕೆಲಸ ಮುಗಿದಽ ಇಲ್ಲ. ಆಯ್ತು. ಕೈಕಾಲ ಘಟ್ಟಿ ಇರೂದ್ರೊಳಗಽ ಉಡುಪಿ ಕೃಷ್ಣನ್ನಽ ನೋಡೆರ ಬರೂಣ. ಗಂಟ ಕಟ್ಟಿದ್ದಽ ಅದ....

ರೇಡಿಯೋ

ಗುಂಡ ಪಾಪುಗೆ ಹೇಳಿದ. "ನೀನು ಯಾಕೆ ರೇಡಿಯೋದಲ್ಲಿ ಹಾಡು ಹೇಳಬಾರದು" ಪಾಮು :- "ಅಂಕಲ್ ನನ್ನ ಅಷ್ಟು ಚನ್ನಾಗಿ ಹಾಡು ಹೇಳಿನಾ?" ಗುಂಡ :- "ಇಲ್ಲ ಬೇಡವೆನಿಸಿದರೆ ಆಫ್ ಮಾಡಬಹುದಲ್ಲ..... ಅದಕ್ಕೆ" *****

ಮೊಗ್ಗಿನ ಮೌನ

"ಮೊಗ್ಗೆ! ಏಕೆ ಮೌನವಾಗಿರುವೆ?" ಎಂದು ಕೇಳಿತು ಒಂದು ಹೂವು. "ಅರಳಿದರೆ ನನ್ನ ಮುಗುಳು ನಗೆ ಬಿದ್ದು ಹೋಗುವದೆಂಬ ಭಯ" ಎಂದಿತು ಮೊಗ್ಗು. "ನಿನ್ನ ಬೆನ್ನೇರುತ್ತಿರುವ ಕೀಟದ ಭಯ ನಿನಗಿಲ್ಲವೇ?" ಎಂದಿತು ಹೂವು. "ಹಾಗಿದ್ದರೆ ಅರಳಿ...

ಗಳಿಗೆಬಟ್ಟಲ ತಿರುವುಗಳಲ್ಲಿ – ೬೭

ಹಸಿವಿನ ಕಂದನ ರೊಟ್ಟಿಯೆಂಬೋ ಮಹಾತಾಯಿ ಒಡಲೊಳಗಿರಿಸಿ ಎದೆಗಪ್ಪಿ ಸಂತೈಸಿದರೆ ಹಸಿವೆಗೆ ಉಸಿರುಕಟ್ಟುತ್ತದೆ. ಗಾಳಿಯಲಿ ತೂರಿ ಬಯಲಿಗೆ ಬಿಟ್ಟರೆ ಕಂಗೆಟ್ಟು ದಿಕ್ಕು ತಪ್ಪುತ್ತದೆ. ರೊಟ್ಟಿಗೆ ದಿಗ್ಭ್ರಮೆ. *****