ಎಚ್ಚರ

ಯಾರೋ ಒದ್ದು ಚೆಲ್ಲಾಪಿಲ್ಲಿ ಹರಡಿದ ತನ್ನ ಕನಸುಗಳನೆಲ್ಲಾ ಬಾಚಿ ಗುಡ್ಡೆ ಹಾಕಿ ಗಂಟು ಕಟ್ಟಿ ಬೆನ್ನಿಗೇರಿಸಿ ಹೊರಟುಬಿಡುತ್ತಾಳೆ ಎಲ್ಲಾ ಧಿಕ್ಕರಿಸಿ! ಕಾಡು, ಕಂದರ, ಪರ್ವತ ಸಮುದ್ರ, ನದೀ ತಟ ಬಿಚ್ಚಿದ ಆಕಾಶ ಮುಚ್ಚಿದ ಭೂತಟ...

ಒಂದು ಸಣ್ಣ ತಪ್ಪು

ಹೌದೇ ಹೌದು ಖಂಡಿತಾ ಹೌದು ಮಹರಾಯ್ತಿ ಹೌದು ಹೌದು ಹೌದು ದೇವರಾಣೆ ಮಕ್ಕಳನ್ನು ಸೇರಿದಂತೆ ಎಲ್ಲವೂ ನನ್ನಿಂದಲೇ ಆದದ್ದು, ನಾನೇ ಕಾರಣ, ನಾನೇ ಹೊಣೆ ನಾನೊಬ್ಬ ದೊಡ್ಡ ಬೆಪ್ಪು. ಆದರೆ ಒಂದನ್ನಾದರೂ ಒಪ್ಪಿಕೊ ಪುಣ್ಯಾತ್ಗಿತ್ತಿ...

ಆಚೆಗಿನ ಕೂಗು !

ಸಾಗರದ ಆಚೆಗಿನ ಕೂಗೊಂದು ಕೇಳುತಿದೆ ಆರದೋ ಏನೊ? ಯಾರಕರೆಯುತಿಹುದೇನೊ ? ತೆರೆಯ ಮೇಲೇರಿ ಬೀಸುಗಾಳಿಯಲಿ ಈಸುತಿದೆ ಬರುತಿದೆ; ಬಿಡದೆ ಬರುತಿದೆ; ಮುಗಿಯಲಿಲ್ಲವೇನೋ ? ಆರಕೂಗಾರ ಕರೆಗಾಗಿರಬಹುದೀ ಕಾರಿರುಳಿನಲಿ ? ಮುಗಿಲ ಮಾಳಿಗೆಯಲಿ ಮಿನುಗು ಚುಕ್ಕೆಗಳೂ...

ಇತಿಹಾಸಕು ಹಿಂದೆಯೇ ಹೊತ್ತಿ ಉರಿದ ಜ್ಯೋತಿ

ಇತಿಹಾಸಕು ಹಿಂದೆಯೇ ಹೊತ್ತಿ ಉರಿದ ಜ್ಯೋತಿಯೇ ಹಸಿದ ವರ್ತಮಾನಕೆ ಹಾಲುಣಿಸುವ ಮಾತೆಯೇ ಬರಲಿರುವ ನಾಳೆಗೂ ಭರವಸೆಯಾ ಹಸಿರೇ ರಾಮನು ಬರೀ ಹೆಸರೇ, ಅಲ್ಲವೆ ನಮ್ಮುಸಿರೇ? ಬೆಳೆವ ಮರದ ಸತ್ವ ಮೊಳಕೆಯಲ್ಲೆ ಕಾಣದೆ? ಋಷಿ ಯಜ್ಞವ...

ಮಾವ – ಅಳಿಯ

ಮಾನವ ಜನ್ಮ ದೊಡ್ಡದು ಸಾರಿದರು ಪುರಂದರ ದಾಸರು ಮಾವನ ಜನ್ಮ ದೊಡ್ಡದು ಅಂದರು ಅಳಿಯರಾಯರು ಮಗಳನಿತ್ತರು, ಮನೆಯತೆತ್ತರು ನಾ ಕೇಳೆ ಕೊಟ್ಟಾರು ಬಿಸಿ ನೆತ್ತರು, ಸೇರಿಸಿ ಅತ್ತರು! *****

ಫ್ಹರ್ ಕೋಟು

ಸಿನೇಮಗಳಲಿ ನೋಡಿದಂತೆಯೇ ಪುಸ್ತಕಗಳಲಿ ಓದಿದಂತೆಯೇ ಅಷ್ಟೇ ಏಕೆ ನಿನ್ನೆಯೇ ಸ್ಟಾರ್ ಹೊಟೆಲೊಂದರಲಿ ಆ ಗುಲಾಬಿ ಹುಡುಗಿಯರು ಕೋಟು ತೊಟ್ಟು ಅದರ ಬಾಲ ಕೊರಳಿಗೆ ಸುತ್ತಿಕೊಂಡಂತೆಯೇ ಕಂಡೆ ನಾನೊಂದು ಅಚ್ಚ ಬಿಳಿಯ ಫ್ಹರ್ ಕೋಟು ಗಡಗಡ...

ಮಧುಚಂದ್ರ

ಪಡುವಲದೊಡೆಯ ಪೂರ್ಣಿಮೆಯಿನಿಯ ಬೆಳಗಽನ್ನು ಸುಯ್ದಾ, ಬೆಳ್ಳಿಯ ಬೆಳಗನ್ನು ಸುಯ್ದಾ, ಬಾನಲಿ ಮೊಳೆದು ಮೆಲ್ಲಗೆ ಬೆಳೆದು ಇಳೆಯಲ್ಲಾ ಕಾಣ್ದಾಽ ಪೂರ್ಣಿ ಇಳೆಯಲ್ಲಾ ಕಾಣ್ದಾ ಅಮೃತದ ರಸದಾ ಚಿಲುಮೆಯಿಂದಽ ಭರಭರನೇ ಸುರಿದು ತಾನೇ ಭರ ಭರನೇ ಸುರಿದು...

ಮಾಂತ್ರಿಕ

ಬಯಲಲಿ ಮಕ್ಕಳು ಹಾರಿಸಿದ ಗಾಳಿಪಟ ಮನೆಯ ಒಳಗೆ ಬಿದಿರು ಗೋಂದು ಬಣ್ಣದ ಹಾಳೆ ತುಂಡು. ತಿಳಿಗಣ್ಣ ತುಂಬ ಮಿಂಚು ಸುಳಿದಾಡಿ ಗಂಗೆ ಹರಿದಳು ಎದೆಯ ಬಯಲಲಿ. ದಿಕ್ಕು ದಿಕ್ಕಿನ ಚಲನೆ ಬದಲಿಸಿ ಮದು ಹದಗೊಂಡ...

ಉಷೆಗೆ

ಯುಗ ಯುಗಗಳೇಕಾಂತಗೀತ ಹಾಡುತನಂತ ನೋವಿನಲಿ ಕಾತರಿಸಿ ನನ್ನ ಉಷೆ ಬಂದೆ. ನಿನ್ನ ಬೆಳಕಲಿ ನಿನಗೆ ನನ್ನೆದೆಯ ಕಿರು ಹಣತೆ ಅರ್ಪಿಸಿದೆ; ನೀನೂಪ್ಪಿ ಒಲವ ಬಾಳಿಸಿದೆ. ನಾನು ಕವಿ, ನೀ ಕಾವ್ಯ ! - ನಾ...