ಹುಲಿಯಣ್ಣಾ ಹುಲಿಯಣ್ಣಾ

ಹುಲಿಯಣ್ಣಾ ಹುಲಿಯಣ್ಣಾ

ಹುಲಿಯಣ್ಣಾ ಹುಲಿಯಣ್ಣಾ ಕಾಡಿಗೆ ನೀನೇ ಹಿರಿಯಣ್ಣ! ಆದರು ನೀನು ಕಾಡಲ್ಲೇ ಇರು ಊರಿನೊಳಗೆ ಬರಬೇಡಣ್ಣ! ಹುಲಿಯಣ್ಣಾ ಹುಲಿಯಣ್ಣಾ ಎಂಥಾ ಮೀಸೆ ನಿನಗಣ್ಣ! ಎಂಥಾ ಬಾಯಿ ಎಂಥಾ ಹಲ್ಲು ಎಂಥಾ ಗರ್ಜನೆ ನಿನದಣ್ಣ! ಹುಲಿಯಣ್ಣಾ ಹುಲಿಯಣ್ಣಾ...

ಚಂದಮಾಮ

ಚಂದಮಾಮ ಚಕ್ಕುಲಿಮಾಮ ಅಮವಾಸ್ಯೆಯ ಕತ್ತಲಲ್ಲಿ ನಮ್ಮನ್ನು ಬಿಟ್ಟು ಎಲ್ಲಿಗೆ ಹೋಗಿದ್ದೆ, ಯಾಕೆ ಹೋಗಿದ್ದೆ? ಕೇಳೋ ಕಳ್ಳ ಮುದ್ದಿನ ಮಳ್ಳಾ, ಸೂರ್ಯಾನೂರಿಗೆ ಹೋಗಿದ್ದೆ ಬೆಳದಿಂಗಳು ಹೊತ್ಕೊಂಡು ಬರ್‍ಲಿಕ್ಕೆ. *****

ಹೊಸಬರು

೧ ಈ ಕೊಳ ಯಾಕೆ ಕೊಳಚೆಯಾಗಿದೆ?  ಎಂಜಲನ್ನ ಯಾಕೆ ಬೀದಿಗೆಸೆಯುತ್ತೀರಿ?  ಇದೇನು ದೇವಸ್ಥಾನದ ಮುಂದೆ ಮೂಗಿಗೆ ಹಿಡಿಯುವ ಘಾಟು?  ಅಚೀಚೆ ಉಗಿಯುತ್ತ ಹೋಗುವ ಆ ಅವರು ಯಾರು?  ಇದು ಬಸ್ಸು ನಿಲ್ದಾಣವೆ ಅಥವ... ಎಂಬಿತ್ಯಾದಿಯಾಗಿ...

ಲಿಂಗಮ್ಮನ ವಚನಗಳು – ೩೬

ಈ ಮಹಾದೇವನ ಸ್ತೋತ್ರವ ಮಾಡುವದಕ್ಕೆ ಜಿಹ್ವೆ ಮೆಟ್ಟದು. ಆ ಮಹಾದೇವನ ಸ್ತೋತ್ರವ ಕೇಳುವದಕ್ಕೆ ಕರ್ಣ ಮೆಟ್ಟದು. ಮುಟ್ಟಿ ಪೂಜಿಸಿಹೆನೆಂದರೆ, ಹಸ್ತ ಕೆಟ್ಟದು. ನೋಡಿಹೆನೆಂದರೆ ನೋಟಕ್ಕೆ ಅಗೋಚರ, ಅಪ್ರಮಾಣ. ಇಂತು ನಿಶ್ಚಿಂತ ನಿರಾಳ ಬಯಲ ದೇಹ...

ಕೊರಡು ಕೊನರುವದು

ಭತ್ತದ ಕಣಜದೊಳಗೆ ನುಸಿ ಈಜಾಡಿ ತಿಂದು ತೇಗಿ ಸಿಪ್ಪೆ ಬೀಸಾಡಿದಂತೆ ಸೋಮು, ನೀನೂ ಅಕ್ಷರದ ಕಣಜದೊಳಗೆ ಈಜಾಡು ಬಿಡದೇ ಅಕ್ಷರ ಅಕ್ಷರ ತಿನ್ನು ತೇಗಾಡುವಷ್ಟು ಓದು ಅರಗಿಸಿಕೋ ಹೊಸ ಹೊಸ ಆಯಾಮಗಳ, ಸಮನ್ವಯಗಳ ಸಂವೇದನೆಗೆ...

ಬಾಡದ ಹೂವು

ಅರಳುತಿಹ ಮೊಗ್ಗೊಂದು ಅರಳದೆಯೆ ಉರುಳಿದುದು ಕಣ್ಣೀರನಿಡುತಿಹಳು ಹಡೆದ ತಾಯಿ ಕಾಲನಾಟವೊ ಇಲ್ಲ ಕರುಬು ಕೂರಸಿ ಕೃತಿಯೊ ಎಳೆಹೂವಿನಾತ್ಮವನು ಅಳಿಸಿದುದು ಇಂತು? ಸುತ್ತ ಮುತ್ತಿಹ ಕ್ರೌರ್ಯಕಾನನದ ದಟ್ಟದಲಿ ಶತ್ರುಗಳು ಮೆಟ್ಟುತಿರಲದನು ಕೆಳಗೆ ಎತ್ತಿಮೇಲಕೆ ಮೊಗವ ಸುತ್ತ...

ನಿತ್ಯ ಹಸಿರು

ಪ್ರಿಯ ಸಖಿ, ಮನುಷ್ಯನ ಬದುಕಿನಲ್ಲಿ ಯಾವುದು ನಿತ್ಯ ಹಸಿರಾಗಿರುತ್ತದೆ? ಮತ್ತೆ ಯಾವುದು ಬೇಗ ಬಾಡಿಹೋಗುತ್ತದೆ? ನಿನಗೆ ಗೊತ್ತೇ? ಚಿಂತಕ ಮುಸೋಲಿನಿ ಹೀಗೆ ಹೇಳುತ್ತಾನೆ. Beauty, Strength, Youth are flowers but, fading soon...

ಒಳ್ಳೇ ಹೆಸರು ತರೋಣಾಪ್ಪ!

ಅಮ್ಮನಿಗಿಂತಾ ದೇವರು ಇಲ್ಲ ಅಪ್ಪನಿಗಿಂತಾ ದೊಡ್ಡೋರಿಲ್ಲ ಟೀಚರ್‌ಗಿಂತಾ ಒಳ್ಳೇವ್ರಿಲ್ಲ ಅಲ್ವೇನೇಮ್ಮಾ? ನಾವು ಒಳ್ಳೇವ್ರಾಗ್ಲಿ ಅಂತ ವಿದ್ಯೆ ಬುದ್ದಿ ಬರ್‍ಲಿ ಅಂತ ಎಷ್ಟೊಂದ್ ಕಷ್ಟ ಪಡ್ತಾರಲ್ವೇ ಅಪ್ಪ ಅಮ್ಮ? ಬೆಳಿಗ್ಗೆ ಬೇಗ ಎದ್ಬಿಟ್ಟು ಪಾಠ ಎಲ್ಲಾ...

ಸೋಡಿಯಂ ಲಾಂದ್ರ

ನಮ್ಮ ಮನೆಯ ಮುಂದಿನ ಚಂದ್ರನಂಥಾ ಸೋಡಿಯಂ ವಿದ್ಯುತ್ ಲಾಂದ್ರ ಇದ್ದಕ್ಕಿದ್ದಂತೆ ವೋಲ್ಟೇಜ್ ಹೀರಿ ನಿಜವಾದ ಚಂದ್ರನಾಗಲು ಹೋಗಿ ಬಡ್ ಎಂದು ಒಡೆದು ಚಪ್ಪನ್ ಚೂರಾಯಿತು.  ಪಾಪ ಅದು ಚಂದ್ರನಾಗಲಿಲ್ಲ, ಆದರೇನಂತೆ ಅದರ ಗಾಜ ಚೂರುಗಳು...

ಒಂದು ಪೇಟೆಯೆಂದರೆ

೧ ಸಣ್ಣಪುಟ್ಟ ಓಣಿಗಳನ್ನೂ ಬೀದಿಗಳನ್ನೂ ಈ ಪೇಟೆಯ ಒಳಹೊರಕ್ಕೆ ಹೊಕ್ಕು ಹೊರಟು ಅಚಾನಕ ನಿಮ್ಮ ಕೈಬಿಡುವ ಹಾದಿಗಳನ್ನೂ ಹೋಲಿಸಬಹುದು ಕ್ಲಿಷ್ಟವಾದೊಂದು ನರಮಂಡಲಕ್ಕೆ ಅದರಿದರ ಮಿದುಳು ಯಾವುದೋ ನಾನು ಕಾಣೆ ತಾಲೂಕಾಪೀಸೆ, ನಗರಸಭಾಕಛೇರಿಯೆ, ಜೈಲೆ, ರೈಲು...