ನೆಮ್ಮದಿಗೂ ಬಿಡದ….

Published on :

ಬೇಸಿಗೆ ಬಿಸಿಲು, ನೆರಳಿನ ಆಸೆ ಉಸ್ಸೆಂದು ಕುಳಿತರೆ ದುತ್ತೆಂದು ಬರುತ್ತಾರೆ ಭಿಕ್ಷುಕರು ಕೊರಕಲು ಧ್ವನಿ ಕೂಗಿಗೆ ಎಂಟಾಣೆ ಕೊಟ್ಟರೆ – ರೂಪಾಯಿ ಕೊಡುವ ತಾಕತ್ತಿಲ್ಲದವರು ಕಬ್ಬನ್ ಪಾಕಿðಗೇಕೆ ಬರುವಿರಿ? ಎಂದಾಗ ೩೭ ಡಿಗ್ರಿ ಬಿಸಿಲೇ ಹಿತವಾಗಿ ಕಾಡಿತ್ತು ಮನಸಿನೊಳಗೆ. *****

ಮಗನಿಗೊಂದು ಪತ್ರ

Published on :

ಬಾ ಮಗೂ ಅಲ್ಲೆ ನಿಲ್ಲದೆ ಮತ್ತೆ ಹಿಂದಕ್ಕೆ ನಿನ್ನದೇನೆಲಕ್ಕೆ, ನಿನ್ನದೇ ಜಲಕ್ಕೆ ನಿನ್ನ ಒಳಹೊರಗನ್ನು ಸ್ಟಷ್ಟಿಕೊಟ್ಟ ಸತ್ವಕ್ಕೆ, ಹಿಂದು ಮುಂದುಗಳ ತಕ್ಕ ಛಂದದಲ್ಲಿಟ್ಟು ನಿನ್ನ ನಿಜಾರ್ಥಕ್ಕೆ ಸಲ್ಲಿಸುವ ಪುಷ್ಪವತಿ ಬಂಧಕ್ಕೆ, ನಿನ್ನ ಬೆನ್ನಿಗೆ ನಿಂತ ಪುರಾಣ ಇತಿಹಾಸಗಳ ಬಿಸಿಯುಸಿರು ಬಡಿಯುವೀ ವರ್ತಮಾನಕ್ಕೆ, ಭೂರ್ಜಪತ್ರಕ್ಕೆ ಮಾತು ಬರುವ ಮುಂಚೆಯೆ ಬೋಧಿ ತಿಳಿವ ಹರಿಸಿದ್ದ ಈ ಜ್ಞಾನಧಾಮಕ್ಕೆ ಬಾ ಮಗೂ ಹಿಂದಕ್ಕೆ. ದೂರ ಹಾರುವುದು ಸಹಜವೆ, ಸರಿಯೆ, ಮತ್ತೆ ಗೂಡು ಸೇರುವ ಹಕ್ಕಿಗದು […]

ಗಳಿಗೆಬಟ್ಟಲ ತಿರುವುಗಳಲ್ಲಿ – ೩೭

Published on :

ಹಸಿವೆಗೆ ತನ್ನೊಳಗು ಶಕ್ತವೋ ಹೊರಗೋ ಎಂಬ ಗೊಂದಲ. ರೊಟ್ಟಿಗೆ ಒಳ ಹೊರಗು ಬೇರಲ್ಲ ಶಕ್ತತೆಗಿಂತ ಮುಕ್ತತೆ ದಿವ್ಯವೆಂಬ ನಂಬುಗೆ.

ಅರುಣಗೀತ

Published on :

-೧- ಕತ್ತೆತ್ತಿದರೆ ಸಾಕು ನಡುರಾತ್ರಿಯಲ್ಲಿ ‘ಲಕ್ಷ ನಕ್ಷತ್ರಮಯ ವಕ್ಷಾಂತರಿಕ್ಷ! ಕುಚುಕದ ಅರೆಮರೆಗೆ ಊರ್ವಶೀವಕ್ಷ! ನೀಲಿಯಂಗಳದಲ್ಲಿ ಎಲ್ಲೆಂದರಲ್ಲಿ ಮಿಂಚಿ ಹೊಂಚುವ ಕಣ್ಣು, ಆಹ! ಇರುಳಿನ ಹಕ್ಕಿ ಕೊಕ್ಕಿನಿಂದೆತ್ತೆತ್ತಿ ತಿನ್ನಲಿರಿಸಿದ ಹಣ್ಣು; ಒಂದರಿಂದೊಂದಕ್ಕೆ ಗೆರೆಯೆಳೆದ ಪಕ್ಷಕ್ಕೆ ಕೋಟಿ ಚಕ್ರವ್ಯೂಹ, ಜ್ಯಾಮಿತಿಯ ಉಸಿರು ಕಟ್ಟಿಸುವ, ಸಾಧಿಸಬರದ ಅಗಣಿತ ಪ್ರಮೇಯ. ಕ್ಷುದ್ರಗಳ ಮುಕ್ಕಿ ಸೊಕ್ಕಿದ ಬುದ್ಧಿ ಇಲ್ಲಿ. ಪೂರ ಕಕ್ಕಾಬಿಕ್ಕಿ, ಉಸಿರು ಕಟ್ಟಿದೆ ಹುಚ್ಚುನೆರೆಯಲ್ಲಿ ಸಿಕ್ಕಿ. ಯಾವುದೋ ಚಿಕ್ಕೆ ಮತ್ತಾವುದಕ್ಕೋ ಓಡಿ ಸುತ್ತು ಹಾಕುತ್ತ, ಯಾವ […]

ಗಳಿಗೆಬಟ್ಟಲ ತಿರುವುಗಳಲ್ಲಿ – ೩೬

Published on :

ಹಸಿವು ರೊಟ್ಟಿಯ ನಡುವೆ ಶ್ರೇಷ್ಟತೆಗಾಗಿ ಕಿತ್ತಾಟ. ಸದ್ದಿಲ್ಲದೇ ಅಂಗಳ ಹೊಕ್ಕಿರುವ ಅತೃಪ್ತಿಗೆ ಕಷ್ಟಪಡದೇ ದಕ್ಕಿದೆ ಪಟ್ಟ. ಇಬ್ಬರ ಜಗಳ ಮೂರನೆಯವರಿಗೆ ಲಾಭ.

ಅವಳಿ – ಜವಳಿ

Published on :

ಅವಳಿಗಾಗಿ ನಾನು ನನಗಾಗಿ ಅವಳು ಬೀಗುತ್ತಿದ್ದ ನಮ್ಮಿಬ್ಬರಿಗೆ ಅವಳಿಗಳಾಗಿ ಈಗ, ಅವಳು ಅವಳಿಗಳಿಗೆಂಬಂತೆಯೇ ಮಾತಾಡಿ ನನ್ನ ಬೇಗ ಜವಳಿ ಅಂಗಡಿಗೆ ಕಳಿಸಿಬಿಡುತ್ತಾಳೆ. *****