ಮಗನಿಗೊಂದು ಪತ್ರ

Published on :

ಬಾ ಮಗೂ ಅಲ್ಲೆ ನಿಲ್ಲದೆ ಮತ್ತೆ ಹಿಂದಕ್ಕೆ ನಿನ್ನದೇನೆಲಕ್ಕೆ, ನಿನ್ನದೇ ಜಲಕ್ಕೆ ನಿನ್ನ ಒಳಹೊರಗನ್ನು ಸ್ಟಷ್ಟಿಕೊಟ್ಟ ಸತ್ವಕ್ಕೆ, ಹಿಂದು ಮುಂದುಗಳ ತಕ್ಕ ಛಂದದಲ್ಲಿಟ್ಟು ನಿನ್ನ ನಿಜಾರ್ಥಕ್ಕೆ ಸಲ್ಲಿಸುವ ಪುಷ್ಪವತಿ ಬಂಧಕ್ಕೆ, ನಿನ್ನ ಬೆನ್ನಿಗೆ ನಿಂತ ಪುರಾಣ ಇತಿಹಾಸಗಳ ಬಿಸಿಯುಸಿರು ಬಡಿಯುವೀ ವರ್ತಮಾನಕ್ಕೆ, ಭೂರ್ಜಪತ್ರಕ್ಕೆ ಮಾತು ಬರುವ ಮುಂಚೆಯೆ ಬೋಧಿ ತಿಳಿವ ಹರಿಸಿದ್ದ ಈ ಜ್ಞಾನಧಾಮಕ್ಕೆ ಬಾ ಮಗೂ ಹಿಂದಕ್ಕೆ. ದೂರ ಹಾರುವುದು ಸಹಜವೆ, ಸರಿಯೆ, ಮತ್ತೆ ಗೂಡು ಸೇರುವ ಹಕ್ಕಿಗದು […]

ಗಳಿಗೆಬಟ್ಟಲ ತಿರುವುಗಳಲ್ಲಿ – ೩೭

Published on :

ಹಸಿವೆಗೆ ತನ್ನೊಳಗು ಶಕ್ತವೋ ಹೊರಗೋ ಎಂಬ ಗೊಂದಲ. ರೊಟ್ಟಿಗೆ ಒಳ ಹೊರಗು ಬೇರಲ್ಲ ಶಕ್ತತೆಗಿಂತ ಮುಕ್ತತೆ ದಿವ್ಯವೆಂಬ ನಂಬುಗೆ.

ಹುಟ್ಟು

Published on :

ಕನಸುಗಳು ಹೆಚ್ಚಿ ರಾತ್ರಿ ಕಪ್ಪು ಕಾಡಿಗೆ ಕಣ್ಣುಗಳಿಗೆ ಮರದಲಿ ಸದ್ದಿಲ್ಲದೇ ಅರಳುವ ಎಲೆಗಳೂ ಹಸಿರು ಸೇರಿಸುತ್ತವೆ ಅರಸುತ ಅಲೆದಾಡುವ ಹೊರಳಾಡುವ ಮೂಕಮರ್ವಕ ಹಾಸಿಗೆಯಲಿ ದಪ್ಪ ಗಾಜಿನ ಕಿಟಕಿಯಾಚೆ ಚಿಕ್ಕಿಗಳು. ಹೂವು ತುಂಬಿದ ಮರದ ಅಡಿ ಹಾಸಿವೆ ಉದುರಿದ ಫಲಕುಗಳು ನೆನಪುಗಳ ದಿವ್ಯತೆ ಸುಗಂಧವಾಗಿ ಎದೆಯ ಕೊಳೆದತುಂಬ ಸ್ಪಂದನದಲೆಗಳು ಅಂಗಳಗುಡಿಸಿದಾಗ ಬೆವರಿಗೆ ಅಂಟಿಕೊಳ್ಳುವುದು ಧೂಳಿನ ಕಣಗಳು ಸರಿಗೆಯ ಮೇಲೆ ಹಾರಾಡುವ ಬಣ್ಣ ಬಟ್ಟೆ ಚಿಟ್ಟೆಗಳು ಸುರಿಯುತ್ತವೆ ಓಕುಳಿ ಏಕಾಂತದಲಿ. ಬಯಲು ಗಾಳಿ […]

ಮುದುಕನ ಮದುವೆ

Published on :

ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ. ಶ್ಯಾಮರಾಯರ ಮೊದಲ ಪತ್ನಿ ವಿಧಿವಶರಾಗಿ ೩೦ ವರ್ಷವಾಗಿತ್ತು, ಅವರಿಗೆ ಒಂಟಿ ಜೀವನ ಅತ್ಯಂತ ಬೇಸರವನ್ನುಂಟುಮಾಡಿತು. ಮಗ ರವಿ ಮದುವೆಯಾಗಿ ೧೦ ವರ್ಷದಿಂದ ಹೆಂಡತಿಯೊಡನೆ ಬೇರೆ ಸಂಸಾರ ಹೂಡಿದ್ದ. ಶ್ಯಾಮರಾಯರನ್ನು ನೋಡಿಕೊಳ್ಳುವವರು ಮನೆಯಲ್ಲಿ ಯಾರೂ ಇರಲಿಲ್ಲ, ಅವರಿಗೆ ವಯಸಾದವರಿಗೆ ಇರುವ ಎಲ್ಲಾ ಕಾಯಿಲೆಗಳು […]

ಶನಿವಾರ ಸಂತೆ: ರೆಡಿಂಗ್

Published on :

ಕ್ಯಾಬೇಜು ಮಾರಲು ಕೂತ ಗಂಡಸು ಕ್ಯಾಬೇಜಿನಂತೆ ಕಾಲಿಫ್ಲವರು ಮಾರುವ ಹೆಂಗಸು ಕಾಲಿಫ್ಲವರಿನಂತೆ ಇದ್ದಾರೆಯೆ ಇಲ್ಲವೆ- ಕಚಕಚನೆ ಕುರಿಮಾಂಸ ಕಡಿದು ಕೊಡುತ್ತಿರುವ ಹುಡುಗ ಹೂವಿನ ರಾಸಿಯ ಹಿಂದೆ ತಲೆ ಮರೆಸಿದ ಹುಡುಗಿ ಪ್ರೇಮಿಗಳೆ ಅಲ್ಲವೆ- ಬಟಾಟೆ ಕೊಳ್ಳುತ್ತಿರುವ ಗೃಹಸ್ಥೆ ಹೆಂಗಸಿನ ಹಲ್ಲು ಯಾರಿಗೋ ಕಾಯುತ್ತ ನಿಂತ ತರುಣಿಯ ಬಲಿತ ಮೊಲೆ ನಿಜವೇ ಸುಳ್ಳೆ- ಕಾದು ಫಲವೇನು ಬರದವರಿಗೆ ಬರುವವರು ಬರುತ್ತಾರೆ ಈ ಶನಿವಾರ ಅಲ್ಲದಿದ್ದರೆ ಮುಂದಿನ ಶನಿವಾರ ಸಂತೆ ಸೇರುವುದು ಮೊದಲಿನಂತೆ […]

ಕಾಂಡವಿಲ್ಲದ ಮೇಲೆ

Published on :

ಅಗುಳಿ ಕಿತ್ತಿಹ ಕದಕೆ ರಕ್ಷೆ ನೀಡುವ ಧೈರ್ಯ ಎಲ್ಲಿಂದ ಬರಬಹುದು ಹೇಳು ಗೆಳೆಯ, ಕಂಡ ಕಂಡಲ್ಲೆಲ್ಲಾ ಕೊರೆದ ಕಾಂಡವ ಕಂಡೆ, ಮತ್ತೆ ಬುಡಮೇಲು ಮರದ ಸಹಿತ. ಮಾರುಮಾರಿಗೂ ಮಂದಿ ಸೇರಿಹರು ಜೋಡಿಸಲು ಮರಮುಟ್ಟು, ಒಣಸೀಳು ಸಿಗಬಹುದೇ, ಎಂದು ನೀರ ಕಾಯಿಸಿ ಬಿಸಿ ನೀರ ಮೀಯಲು ಮೈನೋವು ತಣಿಯುವುದು ಎಂದು ತಿಳಿದು ಗೊತ್ತಿಲ್ಲ, ನಾಳೆ ಕುಡಿಯಲು ನೀರಿಲ್ಲ, ಒಣಭೂಮಿ, ಬರಡು ನೆಲ ಮತ್ತೆ ಜೊತೆಗಾರ ಸೊಳ್ಳೆ, ತಿಗಣಿ ತರುವಾಯ ತಡಿ ಮರುಳೇ, […]