ಪ್ರವಾಸ ಮುಗಿಸಿ

ಬುದ್ದಿ ಇರುವುದೆ ಹೇಳಿ ಇದ್ದಮಾತ್ರಕೆ ಕಾವು ಈಗೀಗ ಕಣ್ ತೆರೆಯುತಿರುವ ಎಳೆಯರು ನಾವು. ಹಿರಿಯರೊಡಬೆರೆತು ಅನುಭವವಿಲ್ಲ, ಬೆರೆತೆವೋ ಅಪಚಾರವಾಯ್ತೆಂಬ ಎಗ್ಗಿಲ್ಲ. ಬಾಲನಡೆ ಬಲಿತಿಲ್ಲ ಹಸಿರು ಪ್ರಾಯದಲಿ ಜೊತೆ ಬಂದೆವು. ಸ್ನೇಹಕೂ ಹುಬ್ಬುಗಂಟನು ತರುವ ಸಲಿಗೆಯಲಿ...

ಕರ್‍ಮ

ಯಾರೊ ಕಟ್ಟಿದ ಮನೆಯ ನಾನು ಮುರಿಯುವುದೀಗ ನನ್ನ ಕರ್‍ಮ, ಜಳ್ಳು ಕಾಳೆಲ್ಲ ಕಣ್ಮುಚ್ಚಿ ಬಾಚಿದೆನೇಕೆ? ಕೇರುತಿದೆ ಈಗ ಕೆರಳಿದ ಮನೋಧರ್‍ಮ. ಸುಬ್ಬಮ್ಮ, ನಾಣು, ಪಟಗುಪ್ಪೆ ರಾಮಾಜೋಯ್ಸ ಹರಿಕಥಾಂಬುಧಿ ಚಂದ್ರ ನರಸಿಂಹದಾಸ ಚಿಕ್ಕಂದಿನಿಂದ ನನಗೆಂದೆ ಕನಿಕರಿಸಿ...

ಕನಸು

ದಣಿದ ಮೈ. ದುಡಿಮೆ ಭಾರಕೆ ರೆಪ್ಪೆ ಮುಚ್ಚಿತೋ ಗಂಧರ್ವಗಣದವರ ಕಾಟ. ಕೂದಲಿಗಿಂತ ಕರಿ ತೆಳುವು ಎಳೆ ಕಚ್ಚಿ ನಡುಬಾನಿನಲಿ ತೂಗಿ ಗಿರಗಿರನೆ ಮೈಮಣಿಸುವಾಟ. ಹೊಸ ಲಯ, ಒತ್ತು; ಅರು ಅರೆಂಟೆಂಬ ಗತ್ತು; ಬರಿ ಮಸಲತ್ತು!...

ಊರ ಹೊರಗೆ

ಕಮಲಗಣ್ಣಿನಿಂದ ಬಾನ ನೋಡುವ ಕೆರೆ ದಂಡೆಯುದ್ದ ಅಂಚು ಹೆಣೆದ ಹೂವ ಹೊರೆ ಭೂಮಿಯೆದೆಗೆ ಹೊಕ್ಕುನಿಂತ ಭಲ್ಲೆಗಬ್ಬು ಸೊಕ್ಕಿ, ತಲೆಯ ಸುತ್ತ ಒಲೆವ ಪೈರಿನುಬ್ಬು ಬಿಸಿಲ ಕುಡಿದು ಉರುಳಿ ಬಿದ್ದ ಕಲ್ಲ ನಿದ್ದೆ ಚೌಕ ಚೌಕ...

ನಂಬಿಕೆ

ದೈವನಂಬಿಕೆಯೊಂದು ದಿನ್ನೆ, ಏರುವ ಜನಕ್ಕೆ. ಹತ್ತಿನಿಂತರೆ ದಿನ್ನೆನೆತ್ತಿಯಲಿ ಸುತ್ತಲಿನ ಹತ್ತು ವಿಷಯಗಳೆಲ್ಲ ಕಣ್ಣತೆಕ್ಕೆಗೆ ಸಿಕ್ಕಿ ನೋಟ ಕೂರಾಗುವುದು, ನಿಲವು ದೃಢವಾಗುವುದು, ತುಂಬಿ ಹರಿಯುವ ಗಾಳಿ ಬಗೆ ಸೋಸಿ ಮುಖದಲ್ಲಿ ನೊಂದ ನೆನಪಿನ ಬಿರುಸು ಹರಿದು...

ಪ್ರಾರ್‍ಥನೆ

ಯಾರೋ ಬಂದರು ಯಾರೋ ಹೋದರು ಗೋಡೆ ಮೇಲೆಲ್ಲ ನೆರಳು, ಚಲಿಸಿದಂತಾಗಿ ಕುತ್ತಿಗೆ ಬೆನ್ನೊಳು ಯಾರದೋ ನುಣುಪು ಬೆರಳು, ಬಂದಿದ್ದರು, ನಿಂತಿದ್ದರು, ನುಡಿಸಲು ಎಣಿಸಿದ್ದರು ಎಂಬ ಭಾವವೊಂದೆ ಉಳಿದಿದೆ, ಕತ್ತೆತ್ತಲು ಏನಿದೆ, ಬರಿಬಯಲು! ಹೂ ಪರಿಮಳ...

ಊರ್ಮಿಳೆ

ಕರೆದರೂ ತಿರುಗದೆ ಜಿಗಿದು ಓಡಿದಳಲ್ಲ, ಯಾರಿವಳು ಎರಳೆಮರಿ ಎಂದಿರೆ? ಇವಳೆ ಊರ್ಮಿಳೆ, ತುಂಬುಜಂಬುನೇರಳೆ ನಮ್ಮ ಮಲೆನಾಡ ಸಿಹಿಪೇರಲೆ. ನನಗು ಇವಳಿಗು ಸ್ನೇಹ ತೀರ ಈಚೆಗೆ ಎನ್ನಿ ನನ್ನ ಕಂಡರೆ ನಾಚಿಕೆ, ಪ್ರೀತಿಯಲಿ ಬಾ ಎಂದು...

ತೀ ನಂ ಶ್ರೀ

ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು. ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು! ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ ಕಡಲ ಚಿತ್ರವನು ಕಣ್ಣಾಗಿ ಈಜಿದೆವು. ಪ್ರಕ್ಷೇಪ ಲೋಪ ಲಿಪಿಕಾರನಕ್ಷರಪಾಪ...

ಭೂಮಿ ಗುಂಡಾಗಿದೆ ನಿಜತಾನೆ?

ಹುರಿಹೊಸೆದ ಹಗ್ಗದಲಿ ಹಾವು ಕಂಡಿತೆ, ಪಾಪ! ಬರಿಯುಸಿರು ಬಿಟ್ಟವರೆ ಇಲ್ಲಿ ಕೇಳಿ; ತುದಿಗಾಲ ಮೇಲೇಕೆ ನಿಲ್ಲುವಿರಿ? ಬಣ್ಣದುರಿ ಹಳೆಮನೆಯ ಉರಿಸಿದರೆ ತಪ್ಪೆ ಹೇಳಿ. ಅಜ್ಜ ಮೊಮ್ಮಗು ಮಾತು ನಮಗೇಕೆ ಬಿಟ್ಟುಬಿಡಿ ಮಣ್ಣು ಹಡೆದದ್ದರಿತೆ ಪ್ರೀತಿ...

ಪರಮಹಂಸ

ಏನಿದೀ ಜಿಗಿದಾಟ ಕಿವಿಹರಿವ ಕೂಗಾಟ ಇದುವರೆಗು ಕೇಳರಿಯದೀ ಆರ್ಭಟ? ಕಳೆದ ಸಂತಮಹಾಂತರಾರು ಕಾಣದ ನೆಲೆಯ ಕಂಡನೆಂಬಂತೆ ಇವನಾಡುವಾಟ! ಅವರಿವರ ನಾಲಗೆಯ ಕಿತ್ತು ತಲೆಯೊಳು ನೆಟ್ಟು ಬೆಳೆಸಿಹನು ಇವನೊಂದು ಭಾರಿ ಮಂಡೆ. ರಮಣ ಅರವಿಂದ ನುಡಿಯುವರು...
cheap jordans|wholesale air max|wholesale jordans|wholesale jewelry|wholesale jerseys