ಕೋರಿಕೆ

ಕಾನಡಾ ೧ ಒಡೆಯ ನಿನ್ನಡಿಯೆಡೆಯ ಹುಡುಕುತಲಿ ನಡೆದಿಹೆನು, ಅಡಿಗಡಿಗೆ ದಾರಿಯೊಳು ತಡೆವಡೆಯುತಿಹೆ ನಾನು, ಹಲವು ಮುನಿಗಳು ನುಡಿದ ಹಲವು ಮಾತುಗಳಿಂದೆ ಅಲುಗಾಡಿ ಮನವು ಉಯ್ಯಲೆಯಾಡುವಂತಿಹೆನು. ೨ ನಿನ್ನೆಡೆಗೆ ಬರುವದಿದೆ ನನ್ನ ಕೋರಿಕೆ ದೊರೆಯೆ, ನಿನ್ನ...

ಶಬರಿಯ ಬಾಳು

ಮುನ್ನುಡಿ ರಾಮನನ್ನರಿತವರು ಶಬರಿಯನು ಅರಿತಿಹರು, ಮಾತು ಶಬರಿಯದಲ್ಲ, ಬರವೊನಲಿದಾಕಯದು. ೧ ಬೀಡ ಬಳಿಯೊಳು ಕುಳಿತು: "ಒಬ್ಬಳೇ ಒಬ್ಬಳೀ ಕಾಡಿನೊಳಗಿರುವೆ, ನನ್ನ ಹುಟ್ಟನು ತಿಳಿಯೆ, ಬಳೆದ ಬಗೆಯನ್ನರಿಯೆ, ನಾನಾರು..? ಬಂದೆನೆಲ್ಲಿಂದಿಲ್ಲಿ..? ಏತಕ್ಕೆ..? ಹಕ್ಕಿ-ಮಿಗಗಳನೆಲ್ಲ ತಾಯಿಗಳು ಪಡೆಯುವುವು,...

ಹೂವಡಿಗಿತ್ತಿ

ನಾದನಾಮಕ್ರಿಯಾ ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ! ೧ ಸಂಪಗೆಯ ಮಲ್ಲಿಗೆಯ ಸೊಂಪು ಸೇವಂತಿಗೆಯ ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ! ಕೆಂಪು-ಬಿಳಿ ತಾವರೆಯ ಸುರಯಿ ಸುರಹೊನ್ನೆಗಳ ಪೆಂಪುವಡೆದರಳುಗಳ ಕೊಳ್ಳಿರಮ್ಮಾ! ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ! ೨ ಒಮ್ಮೆಯೇ ಮೂಸಿದರು ಜುಮ್ಮು...

ನನ್ನ ಹಾಡು

ಭೈರವಿ ೧ 'ಬರಿಯೆ ಬಿಸುಸುಯಿಲಿಂದಲೀ ಹಗ- ಲಿರುಳ ಕಳೆಯುವುದೇನು- ಸರಿಯೆ!' ಎನುತೇನೇನೊ ಹಾಡುತ- ಲಿರುವೆನೇಗಲು ನಾನು. ನನ್ನ ಹಾಡುಗಳೆಲ್ಲವಿವು ಮನ- ದನ್ನ ನಿನಗಾಗಿರುವವು; ನನ್ನ ಹಾಡಿನ ವರ್ಣ-ವರ್ಣವು ನಿನ್ನನೇ ಕುರಿತಿರುವುವು; ನಿನ್ನ ನೆನಹನೆ ಮೊರೆವುವು....!...

ಉನ್ಮಾದಿನಿ

ವಸಂತ ೧ ಬಂದೆ ಬರುವನಂತೆ ಆತ ಬಂದೆ ಬರುವನಂತೆ ! ಚೆಂದದೊಸಗೆಯನ್ನು ಕೇಳಿ ನವಿರ ಹೊರೆಯನಾಂತೆ ! ನಿಂದೆ ಮರುಳೆಯಂತೆ.... ನಿಂದೆ ಮರುಳೆಯಂತೆ, ನೆರೆಯೆ ಮೈಮರೆವಿನ ಸಂತೆ. ೨ ಇನಿಯ ಬರುವ ಮೊದಲೆ ನನ್ನ...

ಯಾವ ದಾರಿಯೊ!

ನಾದನಾಮಕ್ರಿಯಾ ೧ ಯಾವ ದಾರಿಯೊ ಕಾಣೆ ನನ್ನಯ ದೇವನಿರುವೆಡೆ ಸಾರಲು! ಭಾವಿಸುತ ಬಾಯ್ದೆರೆದು ಕುಳಿತರೆ ಸಾವೆ ಸರಿ! ಎಂಬಾ ವಿಚಾರದಿ ಜೀವದರಸನದಲ್ಲಿರುವನಾ ಠಾವನರಸುತ ತೆರಳಲಿರುವೆ; ಯಾವ ದಾರಿಯೊ ಕಾಣೆ ನನ್ನಯ ದೇವನಿರುವೆಡೆ ಸಾರಲು. ೨...

ಹಾರಯ್ಕೆ

೧ ಕೆಳದಿಯರನೊಡಗೊಂಡು ಕೆಲೆಕೆಲೆ- ದುಲಿದು ಮೇಲಕೆ ಹಾರಿ, ಇಳೆಯವರನಣಕಿಸುತೆ ಪಕ್ಕವ ಕೆಳರಿ ಬಾನೆಡೆಗೇರಿ, ತಳರುತಿಹೆ ನೀನೆಲ್ಲಿ? ಹಕ್ಕಿಯ- ಕುಲದರಸೆ ಹೇಳಿಲ್ಲಿ! ಗೆಳೆಯನೆಡೆ ದೊರೆಯುವುದೆ ನೀನಡೆ- ದುಳಿವ ದಾರಿಯೊಳೆಲ್ಲಿ? ದೊರೆತರಾತಗೆ ನೀನು.... ದೊರೆತರಾತಗೆ ನನ್ನ ಬಾಳಿನ...

ಕೊರಗುತಿರುವೆದೆಗೆ ಬರೆ

ಸಾವೇರಿ ೧ ನೀಕೊಡುವುದೆಂದು ಮನೆ- ಯಾಕೆಯಧಿಕಾರವನು? ಸಾಕಿದೇಕಾಕಿನಿಯ ಕಾಕುಬಾಳು! ಹಾಕುತಿದೆ ಬರೆಯ ಮೊದ- ಲೇ ಕೊರಗುತಿರುವೆದೆಗೆ ಲೋಕದಾ ಜನರ ಬಡತನದ ಗೋಳು. ೨ ನಿರುಕಿಸಿದರೆತ್ತಲೂ ತಿರಿವವರ ತಂಡಗಳು ಕುರುಡ-ಕುಂಟರು, ಕರುಣಗೀತದವರು! ಕೊರೆವ ಚಳಿ ಬಿರುಬಿಸಿಲಿ-...

ಬೇಡವೆನಗಿನ್ನೇನು!

ಮಾಲಕಂಸ ಒಡೆಯ ನಿನ್ನಾಶೆಯೊಳೆ ತೊಡಕಿ ನಾ ಮಿಡುಕುತಿರೆ ಹಡೆದಮ್ಮ ಕೂಗಿದಳು: "ಹುಡುಗಿ ಇಲ್ಲಿಗೆ ಬಾರೆ!" ಜಡಭಾವದಿಂದ ಎಳೆದಿಡುತಲಡಿಗಳನು ನಡೆದು ಅವಳೆಡೆಗೆ ಕೇಳಿದೆ: "ಕರೆದುದೇನು?" ಕಿರುನಗೆಯ ನಗುತಮ್ಮ ಹೊರಮನೆಗೆ ಕರೆತಂದು "ನಿರುಕಿಸೆಲ್ಲವ ನಿನ್ನದಿರುವುದಿದು” ಎಂದೊರೆದು ಹರಡಿರುವ...

ಮಿಂಚಿನ ಮಾಟ

೧ ಕೂಗು ಕೂಗೆಲೆ ಕೊಗಿಲೆಯೆ ನೀ ಗಳಪುತಿರು ಇರು ಅರಗಿಣಿ! ಏಗಲೂ ನುಡಿ ಕೊಳಲೆ, ವೀಣೆಯೆ- ರಾಗಿಸಲಿ ನಿನ್ನಾ ಧ್ವನಿ! ನಿಮ್ಮ ಉಲುಹಿನೊಳೆಲ್ಲಾ.... ನಿಮ್ಮ ಉಲುಹಿನೊಳೆಲ್ಲ-ಕೇಳುವೆ ನಮ್ಮವನ ಸವಿಸೊಲ್ಲಾ. ೨ ತುಂಬುದಿಂಗಳ ಬಿಂಬವೇ ನೀ...
cheap jordans|wholesale air max|wholesale jordans|wholesale jewelry|wholesale jerseys